ಸಖತ್​ ಐಡಿಯಾ ಗುರು| ಕಡಿಮೆ ಬಂಡವಾಳದಲ್ಲೇ ಉದ್ಯಮ ಆರಂಭಿಸಿ

Money
Published on

ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು... ಇದು ವರಕವಿ ದ.ರಾ. ಬೇಂದ್ರೆಯವರ ಯುಗಾದಿ ಕವನದಲ್ಲಿರುವ ಆಶಯ. ಅದನ್ನೇ ಈ ಕರೊನಾ ಕಾಲದಲ್ಲಿ ಹೊಸ ಕ್ಯಾಲೆಂಡರ್ ವರ್ಷಕ್ಕೂ ಅನ್ವಯಿಸಬಹುದು. ಕಷ್ಟ-ನಷ್ಟದಿಂದ ಕಂಗೆಟ್ಟಿರುವ ಜನ ಹೊಸ ವರ್ಷದ ಹೊಸ್ತಿಲಲ್ಲಿ ದುಡಿಮೆಯ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದೇ ವಿಜಯವಾಣಿ ವಿವಿಧ ರಂಗಗಳ ಪರಿಣತರನ್ನು ಮಾತನಾಡಿಸಿದೆ. 2021 ನಿಮ್ಮ ಪಾಲಿಗೆ ‘ಯಶಸ್ವಿ ವರ್ಷ’ವಾಗಲು 21 ಸಾಧಕರು ನೀಡಿರುವ 21 ಐಡಿಯಾಗಳು ಇಲ್ಲಿವೆ.

ಕಡಿಮೆ ಬಂಡವಾಳದಲ್ಲೇ ಉದ್ಯಮ ಆರಂಭಿಸಿ

ಪ್ರಸ್ತುತ ಸಂದರ್ಭದಲ್ಲಿ ವಾರ್ಷಿಕ 20 ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟು ಮಾಡುವ ಉದ್ಯಮಗಳಿಗೆ ಲಾಭ ಕಡಿಮೆಯಿದೆ. ಅದರ ಜತೆಗೆ ಜಿಎಸ್​ಟಿ ಮತ್ತಿತರ ತೆರಿಗೆ ಪಾವತಿ ಮಾಡಬೇಕಿದೆ. ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ನಿರುದ್ಯೋಗಿಗಳು ಅಥವಾ ಹೊಸದಾಗಿ ಉದ್ಯಮ ಆರಂಭಿಸುವವರು ಹೆಚ್ಚು ಬಂಡವಾಳ ಹೂಡಿ ಉದ್ಯಮ ಆರಂಭಿಸುವುದಕ್ಕೆ ಮುಂದಾಗದಿರುವುದು ಒಳಿತು. ಅದರ ಬದಲು ಕಡಿಮೆ ಉದ್ಯೋಗಿಗಳಿರುವ, ಕಡಿಮೆ ಬಂಡವಾಳದ ಉದ್ಯಮಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ವಾರ್ಷಿಕ 10 ಲಕ್ಷದೊಳಗೆ ವಹಿವಾಟು ನಡೆಸುವಂತಹ ಉದ್ಯಮಗಳು ವೃತ್ತಿ ತೆರಿಗೆ, ಆದಾಯ ತೆರಿಗೆ, ಜಿಎಸ್​ಟಿ ಪಾವತಿಸುವ ಅವಶ್ಯಕತೆಯಿಲ್ಲ. ಕೃಷಿ ಉತ್ಪನ್ನಗಳ ಸಂಸ್ಕರಣೆ, ಮಾರಾಟದಂತಹ ಸ್ವಉದ್ಯೋಗ ಸದ್ಯಕ್ಕೆ ಒಳ್ಳೆಯದು. ಬೇರೆ ಉದ್ಯಮ ಆರಂಭಿಸಿದರೆ ಅದಕ್ಕೆ ಅಗತ್ಯವಿರುವ ಉದ್ಯೋಗಿಗಳ ಸಂಖ್ಯೆ, ಖರ್ಚು ಕಡಿಮೆ ಮಾಡಲು ಸದ್ಯ ಸ್ಥಗಿತಗೊಂಡಿರುವ ಕೈಗಾರಿಕೆಗಳಲ್ಲಿನ ಯಂತ್ರಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯುವುದು ಒಳ್ಳೆಯದು.

| ಕುಮಾರ್ ಎಸ್. ಜಿಗಜಿನ್ನಿ ಅಧ್ಯಕ್ಷ, ರಾಜ್ಯ ಲೆಕ್ಕಪರಿಶೋಧಕರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net