ಶೀಘ್ರದಲ್ಲಿಯೇ ಭಾರತದಲ್ಲಿ ಸ್ಟಾರ್​ ಲಿಂಕ್​ ಸೇವೆ ಆರಂಭ:ಮಾಸಿಕ ರೀಚಾರ್ಜ್​ನ ಬೆಲೆಗಳು ಹೀಗಿವೆ... | Starlink

dk - 2025-05-26T200838.779
Published on

Starlink : ಎಲಾನ್​ ಮಸ್ಕ್​ ಒಡೆತನದ ಸ್ಪೇಸ್​ ಎಕ್ಸ್​ನ ಸ್ಟಾರ್​ಲಿಂಕ್ ಹೈಸ್ಪೀಡ್​ ಇಂಟರ್​ನೆಟ್ ಭಾರತದ ಗ್ರಾಹಕರಿಗೆ ಒದಗಿಸಲು ಈಗಾಲೇ ಒಪ್ಪಂದ ಮಾಡಿಕೊಂಡಿದ್ದು, ಶೀಘ್ರದಲ್ಲಿಯೇ ಸ್ಟಾರ್​ಲಿಂಕ್​ ಉಪಗ್ರಹ ಬ್ರಾಡ್‌ಬ್ಯಾಂಡ್ ಸೇವೆಯನ್ನು ಆರಂಭಿಸುವುದಾಗಿ ವರದಿಯಾಗಿದೆ.

ಉಪಗ್ರಹಗಳ ಮೂಲಕ ಇಂಟರ್ನೆಟ್

ವಾಸ್ತವವಾಗಿ, ಸಾಂಪ್ರದಾಯಿಕ ಬ್ರಾಡ್‌ಬ್ಯಾಂಡ್(ಸಾಮಾನ್ಯ ಇಂಟರ್ನೆಟ್​) ಸೇವೆಗಳು ಭೂಗತ ಫೈಬರ್ ಕೇಬಲ್‌ಗಳು ಮತ್ತು ಸೆಲ್ಯುಲಾರ್ ಟವರ್‌ಗಳನ್ನು ಅವಲಂಬಿಸಿವೆ. ಆದರೆ, ಸ್ಟಾರ್‌ಲಿಂಕ್ 'ಕೆಳ ಭೂ ಕಕ್ಷೆ' ಉಪಗ್ರಹಗಳ ಮೂಲಕ ಇಂಟರ್ನೆಟ್ ಪ್ರವೇಶವನ್ನು ಒದಗಿಸುತ್ತದೆ.

ಸ್ಟಾರ್​ಲಿಂಕ್​ ಸಂಪರ್ಕ ಹೇಗೆ?

ಸ್ಟಾರ್​ಲಿಂಕ್​​ ಸಂಪರ್ಕ ಬೇಕು ಎನ್ನುವ ಬಳಕೆದಾರರು ಮೊದಲು ಸ್ಟಾರ್‌ಲಿಂಕ್ ಡಿಶ್ ಮತ್ತು ರೂಟರ್ ಅಗತ್ಯವಿರುತ್ತದೆ. ಅದು ಭೂಮಿಯ ಸುತ್ತ ಪರಿಭ್ರಮಿಸುವ ಉಪಗ್ರಹಗಳೊಂದಿಗೆ ಸಂವಹನ ನಡೆಸುತ್ತದೆ. ಈ ಡಿಶ್ ಸ್ವಯಂಚಾಲಿತವಾಗಿ ಹತ್ತಿರದ ಸ್ಟಾರ್‌ಲಿಂಕ್ ಉಪಗ್ರಹ ಕ್ಲಸ್ಟರ್‌ಗೆ ಸಂಪರ್ಕಗೊಳ್ಳುತ್ತದೆ. ಇದು ಯಾವುದೇ ಅಡಚಣೆಯಿಲ್ಲದೆ ಸಂಪರ್ಕವನ್ನು ಒದಗಿಸುತ್ತದೆ. ಆದರೆ, ಹೆಚ್ಚುವರಿ ಹಾರ್ಡ್‌ವೇರ್‌ನೊಂದಿಗೆ ಇದು ಚಲಿಸುವ ವಾಹನಗಳು, ದೋಣಿಗಳು ಮತ್ತು ವಿಮಾನಗಳಲ್ಲಿ ಇಂಟರ್ನೆಟ್ ಪ್ರವೇಶವನ್ನು ಒದಗಿಸುತ್ತದೆ.

ಕೈಗಟುಕುವ ದರದಲ್ಲಿ ಬೆಲೆಗಳು!

ಭಾರತದಲ್ಲಿ ಸ್ಟಾರ್‌ಲಿಂಕ್ ಸೇವೆ ಪ್ರಾರಂಭವಾದ ನಂತರ, ಅದರ ಶುಲ್ಕಗಳು ತಿಂಗಳಿಗೆ $10 (ರೂ. 850) ವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ಇತರ ದೇಶಗಳಿಗೆ ಈ ಬೆಲೆಗಳು ತುಂಬಾ ಕಡಿಮೆ ಇರುವಂತೆ ತೋರಿಸುತ್ತವೆ. ಪರಿಚಯಾತ್ಮಕ ಕೊಡುಗೆಗಳ ಭಾಗವಾಗಿ ಕಂಪನಿಯು ಅನಿಯಮಿತ ಪ್ರದರ್ಶನ ನೀಡುವ ಸಾಧ್ಯತೆಯಿದೆಮ ಎಂದು ವರದಿ ಉಲ್ಲೇಖಿಸಿದೆ.

ಇತ್ತೀಚೆಗೆ ಸ್ಟಾರ್‌ಲಿಂಕ್ ತನ್ನ ಬ್ರಾಡ್‌ಬ್ಯಾಂಡ್ ಸೇವೆಯನ್ನು ಬಾಂಗ್ಲಾದೇಶ ಮತ್ತು ಭೂತಾನ್‌ನಲ್ಲಿ ಪ್ರಾರಂಭಿಸಿದೆ. ಅಲ್ಲಿ ಕಂಪನಿಯ ಯೋಜನೆ 4,000 ರೂ.ಗಳಿಂದ 6,000 ರೂ.ಗಳವರೆಗೆ ಇರುತ್ತದೆ. ನೆರೆಯ ದೇಶಗಳಿಗೆ ಹೊಲಿಸಿದ್ರೆ ಭಾರತದಲ್ಲಿ ಸ್ಟಾರ್‌ಲಿಂಕ್ ಉಪಗ್ರಹ ಇಂಟರ್ನೆಟ್ ಯೋಜನೆಗಳು ತುಂಬಾ ಕಡಿಮೆ ದರದಲ್ಲಿ ಕೈಗೆಟುಕುವವು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net