More

    ಮೈಸೂರು ವಿಭಾಗದ ನೈಋತ್ಯ ರೈಲ್ವೆಯಲ್ಲಿ ಸ್ಟಾಫ್​ ನರ್ಸ್​ ನೇಮಕಾತಿ ಪ್ರಕ್ರಿಯೆ

    ನೈಋತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ ಸ್ಟಾಫ್​ ನರ್ಸ್​ ಮತ್ತು ಫಾರ್ಮಾಸಿಸ್ಟ್​ ಹುದ್ದೆಗಳಿಗೆ ಒಪ್ಪಂದದ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

    ಕೋವಿಡ್​-19 ಮಹಾಮಾರಿಯನ್ನು ಎದುರಿಸುವ ನಿಟ್ಟಿನಲ್ಲಿ ಸಮರ್ಪಕ ವೈದ್ಯಕಿಯ ಸೇವೆ ಒದಗಿಸಲು ಈ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಸ್ಟಾಫ್​ ನರ್ಸ್​ 12 ಹುದ್ದೆಗಳು, ಫಾರ್ಮಸಿಸ್ಟ್​ 2 ಹುದ್ದೆಗಳಿವೆ. ಸ್ಟಾಫ್​ ನರ್ಸ್​ ಹುದ್ದೆಗೆ ಜನರಲ್​ ನರ್ಸಿಂಗ್​​ & 3 ವರ್ಷದ ಕೋರ್ಸ್​ ಹಾಗೂ ಸ್ಕೂಲ್​ ಆಫ್​ ನರ್ಸಿಂಗ್​​ನಿಂದ ಅಥವಾ ಇಂಡಿಯನ್​ ನರ್ಸಿಂಗ್​​ ಕೌನ್ಸಿಲ್​ನಿಂದ ಗುರುತಿಸಲ್ಪಟ್ಟ ಇತರ ಸಂಸ್ಥೆಯಿಂದ ಮಿಡ್​ವೈರಿ ಕೋರ್ಸ್​ ಉತ್ತೀರ್ಣರಾಗಿ ನೋಂದಾಯಿತ ನರ್ಸ್​ ಆ್ಯಂಡ್​ ಮಿಡ್​ವೈರಿ​ ಎಂದು ಪ್ರಮಾಣೀಕೃತವಾರಬೇಕು. ಮಾಸಿಕ ವೇತನ 44900 ರೂ. ನಿಗದಿಪಡಿಸಲಾಗಿದೆ. ಕನಿಷ್ಠ 1 ವರ್ಷ ಕಾರ್ಯಾನುಭವ ಅಪೇಕ್ಷಣಿಯ.

    ಫಾರ್ಮಾಸಿಸ್ಟ್​ ಹುದ್ದೆಗೆ 10+2 ಸೈನ್ಸ್​ ಅಥವಾ ತತ್ಸಮಾನ ಪರೀಕ್ಷೆ ಪಾಸಾಗಿರಬೇಕು. ಎರಡು ವರ್ಷಗಳ ಅವಧಿಯ ಡಿಪ್ಲೊಮಾ ಫಾರ್ಮಸಿ ಆಗಿರಬೇಕು ಮತ್ತು ಫಾರ್ಮಸಿ ಕೌನ್ಸಿಲ್​ ಆಫ್​​ ಇಂಡಿಯಾ ಅಥವಾ ಸ್ಟೇಟ್​ ಫಾರ್ಮಸಿ ಕೌನ್ಸಿಲ್​ನಲ್ಲಿ ನೊಂದಣಿಯಾಗಿರಬೇಕು. ಮಾಸಿಕ 29200 ರೂ. ವೇತನ ನೀಡಲಾಗುತ್ತದೆ. ಒಪ್ಪಂದದ ಅವಧಿ & ನೇಮಕಾತಿ ದಿನದಿಂದ 3 ತಿಂಗಳು.

    ಏಪ್ರಿಲ್​ 10 ವರೆಗೆ ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ “ಮುಖ್ಯ ವೈದ್ಯಕಿಯ ಅಧೀಕ್ಷಕರ ಕಚೇರಿ (ಸಿಎಂಎಸ್​) ರೈಲ್ವೆ ಆಸ್ಪತ್ರೆ, ಒಂಟಿಕೊಪ್ಪಳ, ಯಾದವಗಿರಿ, ಮೈಸೂರು ಎಂಬಲ್ಲಿ ‘ ನೇರ ಸಂದರ್ಶನ ನಡೆಯಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಹಾಜರಾಗಬಹುದು. ಮಾಹಿತಿಗೆ swr.indianrailways.gov.in ವೆಬ್​ಸೈಟ್​ ನೋಡಬಹುದು.

    100 ಕೋಟಿ ಡಾಲರ್ ನಿಧಿ ಭಾರತಕ್ಕೆ ನೀಡಲು ಒಪ್ಪಿತು ವಿಶ್ವ ಬ್ಯಾಂಕ್

    ಮತ್ತೆ ತತ್ತರಿಸಿತು ಷೇರುಪೇಟೆ- ಸೆನ್ಸೆಕ್ಸ್ 400 ಅಂಶ ಕುಸಿದರೆ, ನಿಫ್ಟಿ 8,200ರ ಕೆಳಕ್ಕೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts