More

    ಮತ್ತೆ ತತ್ತರಿಸಿತು ಷೇರುಪೇಟೆ- ಸೆನ್ಸೆಕ್ಸ್ 400 ಅಂಶ ಕುಸಿದರೆ, ನಿಫ್ಟಿ 8,200ರ ಕೆಳಕ್ಕೆ…

    ಮುಂಬೈ: ಕರೊನಾ ಸೋಂಕು ಮತ್ತು ಅರ್ಥ ವ್ಯವಸ್ಥೆ ಮೇಲಿನ ಅದರ ಪರಿಣಾಮ ಕುರಿತ ಅನಿಶ್ಚಿತತೆಯ ಪರಿಣಾಮ ಷೇರುಪೇಟೆ ಮೇಲೂ ಆಗಿದೆ. ಶುಕ್ರವಾರದ ವಹಿವಾಟಿನ ಆರಂಭದಲ್ಲೇ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ 400 ಅಂಶ ಕುಸಿದರೆ, ನ್ಯಾಷನಲ್ ಸ್ಟಾಕ್ ಎಕ್ಸ್​​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ 8,200ರ ಕೆಳಕ್ಕೆ ಕುಸಿದಿದೆ.

    ಭಾರತೀಯ ಷೇರುಪೇಟೆಯಲ್ಲಿ ಶುಕ್ರವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಲೇ ಸೆನ್ಸೆಕ್ಸ್​ 27,800.07ಕ್ಕೆ ಕುಸಿದ ನಂತರದಲ್ಲಿ ಕೊಂಚ ಏರಿ ಬಳಿಕ 375.34 ಅಂಶ (1.33%) ಕೆಳಕ್ಕೆ ಇಳಿದು 27,889.97ರಲ್ಲಿ ವಹಿವಾಟು ಮುಂದುವರಿಸಿತ್ತು. ಸೆನ್ಸೆಕ್ಸ್ ಪಟ್ಟಿಯಲ್ಲಿ ಕೊಟಾಕ್ ಬ್ಯಾಂಕ್​ ಷೇರುಗಳು ಗರಿಷ್ಠ ಶೇಕಡ 7 ನಷ್ಟ ಅನುಭವಿಸಿದರೆ, ಇಂಡಸ್​ಇಂಡ್ ಬ್ಯಾಂಕ್​, ಹೀರೋ ಮೋಟೊಕಾರ್ಪ್​, ಏಷ್ಯನ್ ಪೇಂಟ್ಸ್​, ಟೈಟಾನ್​, ಐಸಿಐಸಿಐ ಬ್ಯಾಂಕ್​ ಷೇರುಗಳು ಕೂಡ ನಷ್ಟ ಅನುಭವಿಸಿವೆ. ಇನ್ನೊಂದೆಡೆ ಪವರ್​ ಗ್ರಿಡ್​, ಒಎನ್​ಜಿಸಿ, ಎಚ್​ಸಿಎಲ್​ ಟೆಕ್​, ಸನ್ ಫಾರ್ಮಾ ಷೇರುಗಳು ಲಾಭಗಿಟ್ಟಿಸಿಕೊಂಡಿವೆ.

    ಇನ್ನು ನಿಫ್ಟಿ 105.35 ಅಂಶ (1.28%) ಕುಸಿದು 8.148.45ರಲ್ಲಿ ವಹಿವಾಟು ಮುಂದುವರಿಸಿದೆ. ಬುಧವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್​ 1,.203.18 ಅಂಶ ಅಥವಾ 4.08 % ಕುಸಿದು 28,265.31ರಲ್ಲಿ ವಹಿವಾಟು ಮುಗಿಸಿತ್ತು. ಇದೇ ರೀತಿ ನಿಫ್ಟಿ 343.95 ಅಥವಾ ಶೇಕಡ 4 ಅಂಶ ಕುಸಿದು 8.253.80ಯಲ್ಲಿ ವಹಿವಾಟು ಮುಗಿಸಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಂಡವಾಳ ಮಾರುಕಟ್ಟೆಯಲ್ಲಿ 1,16.79 ಕೋಟಿ ಮೌಲ್ಯದ ಈಕ್ವಿಟಿ ಷೇರುಗಳನ್ನು ಬುಧವಾರ ಮಾರಾಟ ಮಾಡಿದ್ದಾರೆ. ಗುರುವಾರ ರಾಮನವಮಿ ನಿಮಿತ್ತ ಷೇರುಪೇಟೆ ವಹಿವಾಟು ನಡೆದಿರಲಿಲ್ಲ. (ಏಜೆನ್ಸೀಸ್)

    100 ಕೋಟಿ ಡಾಲರ್ ನಿಧಿ ಭಾರತಕ್ಕೆ ನೀಡಲು ಒಪ್ಪಿತು ವಿಶ್ವ ಬ್ಯಾಂಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts