

ಹುಬ್ಬಳ್ಳಿ: ಇಲ್ಲಿಯ ಸೋಮವಂಶ ಶ್ರೀ ಸಹಸ್ರಾರ್ಜುನ ಕ್ಷತ್ರಿಯ ಶ್ರೀ ತುಳಜಾಭವಾನಿ ದೇವಸ್ಥಾನ ಕೇಂದ್ರ ಪಂಚ ಸಮಿತಿ ವತಿಯಿಂದ ನ. 19ರಂದು ಶ್ರೀ ರಾಜರಾಜೇಶ್ವರ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ಎಸ್ಎಸ್ಕೆ ಸಮಾಜದ ಅಧ್ಯಕ್ಷ ಸತೀಶ ಮೆಹರವಾಡೆ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9ಕ್ಕೆ ದಾಜಿಬಾನಪೇಟ ಶ್ರೀ ತುಳಜಾಭವಾನಿ ದೇವಸ್ಥಾನ ಬಳಿ ಮೇಯರ್ ವೀಣಾ ಬರದ್ವಾಡ ಅವರು ಧ್ವಜಾರೋಹಣ ನೆರವೇರಿಸುವರು. ಶ್ರೀ ಸಹಸ್ರಾರ್ಜುನ ಮಹಾರಾಜರ ಬೆಳ್ಳಿ ಮೂರ್ತಿಯ ಭವ್ಯ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಚಾಲನೆ ನೀಡುವರು ಎಂದರು.
ಸಂಜೆ 6ಕ್ಕೆ ದೇವಸ್ಥಾನ ಎದುರಿನ ಭವ್ಯ ಮಂಟಪದಲ್ಲಿ ಜಯಂತಿ ಸಮಾರೋಪ ನಡೆಯಲಿದ್ದು, ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ಉದ್ಘಾಟನೆ ನೆರವೇರಿಸುವರು.
ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಮಾಜಿ ಶಾಸಕ ಅಶೋಕ ಕಾಟವೆ, ಎಸ್ಎಸ್ಕೆ ಕೋ ಆಪ್ ಬ್ಯಾಂಕ್ ಚೇರ್ಮನ್ ವಿಠ್ಠಲ ಲದವಾ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಉತ್ಸವಕ್ಕಾಗಿ ಸಮಿತಿ ರಚಿಸಲಾಗಿದ್ದು, ವೀರು ಕಠಾರೆ ಸಂಚಾಲಕ, ಸುಭಾಸ ಭಾಂಡಗೆ ಸಹಸಂಚಾಲಕ, ಪುಷ್ಪಾ ಪವಾರ ಮಹಿಳಾ ಸಂಚಾಲಕಿ, ಭಾರತಿ ಇರಕಲ್ಲ ಮಹಿಳಾ ಸಹಸಂಚಾಲಕರಾಗಿ ಕೆಲಸ ಮಾಡಲಿದ್ದಾರೆ ಎಂದರು.
ಮಹಾರಾಜರ ಜಯಂತಿ ಅಂಗವಾಗಿ ನ. 16ರಿಂದ 18ರ ವರೆಗೆ ವಿವಿಧ ಸಾಂಸತಿಕ ಕಾರ್ಯಕ್ರಮ ಹಾಗೂ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಮಕ್ಕಳಿಗೆ ಬರೆಹ ಸ್ಪರ್ಧೆ, ಮ್ಯೂಜಿಕಲ್ ಚೇರ್, ಮಹಿಳೆಯರಿಗೆ ಶ್ಲೋಕ ಬರೆಹ, ೈರ್ಲೆಸ್ ಕುಕ್ಕಿಂಗ್ ಸ್ಪರ್ಧೆಗಳು ನಡೆದವು.
ಶನಿವಾರ ನಗರದಲ್ಲಿ ಮಹಿಳೆಯರ ಬೈಕ್ ರ್ಯಾಲಿ, ದೇಶಿ ಆಟಗಳು, ್ಯಾನ್ಸಿಡ್ರೆಸ್, ಯೋಗಾಸನ, ರಂಗೋಲಿ ಸ್ಪರ್ಧೆ ಮುಂತಾದವು ಜರುಗಿದವು.
ಇಂದು ಅಭಿಷೇಕ: ತುಳಜಾಭವಾನಿ ದೇವಸ್ಥಾನದಲ್ಲಿ ಭಾನುವಾರ ಬೆಳಗ್ಗೆ 6ಕ್ಕೆ ಸಂತವಾರಕರಿ ಮಂಡಳಿಯಿಂದ ಕಾಕಡಾರತಿ, ಸಹಸ್ರಾರ್ಜುನ ಮಂಗಳ ಕಾರ್ಯ ಸಮಿತಿ ವತಿಯಿಂದ ಸಹಸ್ರಾರ್ಜುನ ಮಹಾರಾಜರ ಬೆಳ್ಳಿ ಮೂತಿರ್ಗೆ ಅಭಿಷೇಕ, ಮಹಿಳಾ ಮಂಡಳದಿಂದ ತೊಟ್ಟಿಲು ಹಾಕುವ ಕಾರ್ಯಕ್ರಮ, ಎಸ್ಎಸ್ಕೆ ಪುರೋಹಿತ ವರ್ಗದವರಿಂದ ಹೋಮ, ಹವನ ನಡೆಯಲಿದೆ ಎಂದು ಸತೀಶ ತಿಳಿಸಿದರು.
ರಾಜಕೀಯ ಪ್ರಾತಿನಿಧ್ಯ ಅಗತ್ಯ:
ಎಸ್ಎಸ್ಕೆ ಸಮಾಜವು ಎಲ್ಲ ಧರ್ಮ, ಜಾತಿಯವರಿಗೂ ಬೆಂಬಲಿಸುತ್ತ ಬಂದಿದೆ. ಚುನಾವಣೆ ಬಂದಾಗ ಹೆಚ್ಚಿನ ಸಂಖ್ಯೆಯಲ್ಲಿ ಮತದಾನವನ್ನೂ ಮಾಡುತ್ತಾರೆ. ಆದರೆ, ಈ ಸಮಾಜಕ್ಕೆ ಸಿಗಬೇಕಾದ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ ಎಂದು ಸತೀಶ ಮೆಹರವಾಡೆ ಅಭಿಪ್ರಾಯಪಟ್ಟರು.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಮಾಜಕ್ಕೆ ಹಿಂದಿನ ಸರ್ಕಾರ ಒಂದು ಎಕರೆ ಜಮೀನು ನೀಡಿದೆ. ವಾಸ್ತವದಲ್ಲಿ ಐದು ಎಕರೆ ಅಗತ್ಯವಾಗಿದೆ. ಜಮೀನು ಲಭ್ಯವಾದರೆ ಅಲ್ಲಿ ಬೃಹತ್ ದೇವಸ್ಥಾನ ನಿಮಿರ್ಸಲಾಗುವುದು. ಸಮಾಜದ ಜನರಿಗಾಗಿ ಸಾಂಸತಿಕ ಕಾರ್ಯಕ್ರಮಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.
ಮಾಜಿ ಶಾಸಕ ಅಶೋಕ ಕಾಟವೆ, ಭಾಸ್ಕರ ಜಿತೂರಿ, ವಿಠ್ಠಲ ಲದವಾ, ರಂಗಾ ಬದ್ದಿ, ಪುಷ್ಪಾ ಪವಾರ, ಭಾರತಿ ಇರಕಲ್, ಇತರರು ಇದ್ದರು.