'ನಮ್ಮದು ಡಕೋಟಾ ಬಸ್ಸಲ್ಲ, ಸೂಪರ್​ ಫಾಸ್ಟ್​ ಜೆಟ್​, ನಮ್ಮ ಸಿಎಂ ಜೆಟ್​ ಪೈಲೆಟ್​'

ramulu
Published on

ರಾಯಚೂರು: ಬಿ.ಎಸ್​.ಯಡಿಯೂರಪ್ಪ ಅವರ ಸರ್ಕಾರ ಡಕೋಟಾ ಬಸ್​ ತರ ಎಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಚಿವ ಶ್ರೀರಾಮುಲು ಟಾಂಗ್​ ನೀಡಿದ್ದಾರೆ. ನಮ್ಮದು ಡಕೋಟಾ ಬಸ್ಸಲ್ಲ, ಸೂಪರ್​ ಫಾಸ್ಟ್​ ಜೆಟ್​ ಎಂದು ಅವರು ಹೇಳಿದ್ದಾರೆ.


ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಮಾತನಾಡಿದ ಅವರು, "ನಮ್ಮ ಸಿಎಂ ಯಡಿಯೂರಪ್ಪ ಜೆಟ್ ಪೈಲೆಟ್ ಇದ್ದಂಗೆ. ಆ ಜೆಟ್​ನಲ್ಲಿ ಕುಳಿತು ನಾವೆಲ್ಲ ಪ್ರಯಾಣ ಮಾಡುತ್ತಿದ್ದೇವೆ. ಜೆಟ್ ಎಷ್ಟು ವೇಗವಾಗಿ ಹೋಗುತ್ತೋ ಅದೇ ಮಾದರಿಯಲ್ಲಿ ಬಿಜೆಪಿ ಸರ್ಕಾರ ನಡೆಯುತ್ತಿದೆ. ಉಪ ಚುನಾವಣೆ ಬಳಿಕ ಮತ್ತಷ್ಟು ಜನರಿಗೆ ಸಚಿವ ಸ್ಥಾನ ಸಿಗಲಿದೆ. ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕದ ಇಬ್ಬರು ಮೂವರಿಗೆ ಮಂತ್ರಿಗಳಾಗುವ ಅವಕಾಶವಿದೆ." ಎಂದು ಹೇಳಿದ್ದಾರೆ.


ರಾಜ್ಯದಲ್ಲಿ ಕುರುಬರು ಎಸ್ಟಿಗೆ ಸೇರಿಸುವಂತೆ ಪಾದಯಾತ್ರೆ ಮಾಡುತ್ತಿದ್ದಾರೆ. ಕುರುಬರು ಹಾಗೂ ಪಂಚಮಸಾಲಿಯವರು ಹೋರಾಟ ನಡೆಸಿದ್ದಾರೆ. ಕುರುಬರನ್ನು ಎಸ್ ಟಿ ಸೇರಿಸಲು ಕೆಲವು ಲೀಗಲ್ ತೊಡಕುಗಳು ಇವೆ. ಕುಲಶಾಸ್ತ್ರದ ಅಧ್ಯಯನ ನಡೆಯಬೇಕಿದೆ. ಆ ಅಧ್ಯಯನದ ಬಳಿಕ ಸರ್ಕಾರ ಅಂತಿಮ ತೀರ್ಮಾನಕ್ಕೆ ಬರಲಿದೆ. ಪಂಚಮ ಸಾಲಿಗೆ 2ಎ ನೀಡುವ ವಿಚಾರದಲ್ಲಿ ಸಿಎಂ ಬಿಎಸ್ ವೈ ಈಗಾಗಲೇ ಅಧ್ಯಯನಕ್ಕಾಗಿ ಆದೇಶ ಮಾಡಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದಿಂದ ಅಧ್ಯಯನದ ವರದಿ ಬರಲಿ, ಆಮೇಲೆ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಸಚಿವ ಶ್ರೀ ರಾಮುಲು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net