17ರಿಂದ ಶ್ರೀನಿಧಿ ಟೆಕ್ಸ್‌ಟೈಲ್ಸ್ ಸಂಭ್ರಮೋತ್ಸವ

Srinidhi Textiles Sambharamotsava
ಶಿವಮೊಗ್ಗ ಶ್ರೀನಿಧಿ ಸಿಲ್ಕ್ಸ್ ಆ್ಯಂಡ್ ಟೆಕ್ಸ್‌ಟೈಲ್‌ನ ಪಾಲುದಾರ ಚೇತನ್ ಮಾತನಾಡಿದರು. ಪಾಲುದಾರರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ವೆಂಕಟೇಶಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು.
Published on

ಶಿವಮೊಗ್ಗ: ನಗರದ ಟಿ.ಸೀನಪ್ಪ ಶೆಟ್ಟಿ ವೃತ್ತದ ಶ್ರೀನಿಧಿ ಸಿಲ್ಕ್ಸ್ ಆ್ಯಂಡ್ ಟೆಕ್ಸ್‌ಟೈಲ್‌ನ 40ರ ಸಂಭ್ರಮೋತ್ಸವ ಹಾಗೂ ಬಹುಮಾನ ವಿತರಣಾ ಸಮಾರಂಭ ಎನ್‌ಇಎಸ್ ಮೈದಾನದಲ್ಲಿ ಮೇ 17ರಿಂದ 19ರವರೆಗೆ ಸಂಜೆ 5.30ಕ್ಕೆ ನಡೆಯಲಿದೆ ಎಂದು ಪಾಲುದಾರ ಚೇತನ್ ಹೇಳಿದರು.

ಫ್ಯಾನ್ಸಿ ಸೀರೆ, ಚೂಡಿದಾರ್, ಶರ್ಟ್ ಮತ್ತು ಪ್ಯಾಂಟ್ ಹಾಗೂ ಬೆಡ್‌ಶೀಟ್‌ಗಳ ವಿಶೇಷ ಪ್ರದರ್ಶನ ಹಾಗೂ ಶೇ. 15 ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಜತೆಗೆ ರುಚಿ, ಶುಚಿಯಾಗಿ ತಿಂಡಿ ತಿನಿಸುಗಳ ಮಾರಾಟ ವ್ಯವಸ್ಥೆ ಮಾಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
17 ಮತ್ತು 18ರಂದು ಫ್ಯಾಷನ್ ಶೋ ಹಾಗೂ ವಿವಿಧ ಸ್ಪರ್ಧೆಗಳು ನಡೆಯಲಿವೆ. ಯುವಕ, ಯುವತಿಯರು, ಮಹಿಳೆಯರು ಮತ್ತು 5ರಿಂದ 12 ವರ್ಷದೊಳಗಿನ ಮಕ್ಕಳು ಪಾಲ್ಗೊಳ್ಳಬಹುದು. ತಾಯಿ-ಮಗು ಸ್ಪರ್ಧೆ ಕೂಡ ಏರ್ಪಡಿಸಲಾಗಿದೆ. ಇದೇ ವೇಳೆ ಸ್ಟೆಪ್ ಹೋಲ್ಡರ್ಸ್, ಇಮ್ಯಾಜಿನ್ ಡಾನ್ಸ್ ಸ್ಟುಡಿಯೋ ಮತ್ತು ಸಹಚೇತನ ನಾಟ್ಯ ತಂಡಗಳಿಂದ ನೃತ್ಯ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
19ರಂದು ಸಂಜೆ 6ಕ್ಕೆ ಸಂಗೀತ ನಿರ್ದೇಶಕ, ಗಾಯಕ ಋತ್ವಿಕ್ ಮುರಳೀಧರ್ ಮತ್ತು ತಂಡದಿಂದ ಚಲನಚಿತ್ರ ಗೀತೆ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ. ಅದೇ ದಿನ 10 ಗ್ರಾಹಕರಿಗೆ ತಲಾ 60 ಸಾವಿರ ರೂ. ಮೌಲ್ಯದ ಕೂಪನ್‌ಗಳನ್ನು ವಿತರಿಸಲಾಗುವುದು ಎಂದರು. ಪಾಲುದಾರರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ವೆಂಕಟೇಶಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net