More

    2021ಕ್ಕೆ ಸ್ಟಾರ್ಸ್ ಸ್ವಾಗತ|ಹೆಚ್ಚೆಚ್ಚು ಸಿನಿಮಾಗಳನ್ನು ನೀಡುತ್ತೇನೆ..

    ಕರೊನಾದಿಂದಾಗಿ 2020 ಯಾವಾಗ ಮುಗಿಯುತ್ತದೋ ಎಂದುಕೊಂಡರೇ ಹೆಚ್ಚು. ಇದೀಗ 2021ಕ್ಕೆ ಪದಾರ್ಪಣೆ ಮಾಡಿದ್ದೇವಾದರೂ ಕರೊನಾ ಭಯ ಇದ್ದೇ ಇದೆ. ಹೀಗಿರುವಾಗ ಆ ವರ್ಷ ಮತ್ತು ಈ ವರ್ಷದ ಬಗ್ಗೆ ನಟ ಗಣೇಶ್, ಶ್ರೀಮುರಳಿ ಮತ್ತು ನಟಿ ಶಾನ್ವಿ ಶ್ರೀವಾಸ್ತವ ಮನಸ್ಸಿನ ಮಾತನ್ನು ಹೇಳಿಕೊಂಡಿದ್ದಾರೆ.

    ಹೆಚ್ಚೆಚ್ಚು ಸಿನಿಮಾಗಳನ್ನು ನೀಡುತ್ತೇನೆ..

    2020ರಲ್ಲಿ ಹೆಚ್ಚೆಚ್ಚು ಸಿನಿಮಾ ನೀಡಬೇಕೆಂದುಕೊಂಡಿದ್ದೆ. ಕರೊನಾದಿಂದ ಅದು ಸಾಧ್ಯವಾಗಲಿಲ್ಲ. ಇಡೀ ಇಂಡಸ್ಟ್ರಿಯೇ ಅದರಿಂದ ನಲುಗಿತು. ಹೊಸ ವರ್ಷ 2021ಕ್ಕಾದರೂ ಹೆಚ್ಚೆಚ್ಚು ಸಿನಿಮಾ ನೀಡಬೇಕೆಂದುಕೊಂಡಿದ್ದೇನೆ. ಅದರಂತೆ ಮದಗಜ ಮತ್ತು ಬಘೀರ ಸಿನಿಮಾಗಳು ಈ ವರ್ಷವೇ ಬರಲಿವೆ. ಇವೆಲ್ಲದರ ಜತೆಗೆ ಕರೊನಾದಿಂದ ಸಾಕಷ್ಟು ಕಲಿತಿದ್ದೇನೆ ಎಂಬುದಕ್ಕಿಂತ ಜೀವನ ಹೀಗೂ ಇರಬಹುದು ಎಂಬುದನ್ನು ಕಲಿತಿದ್ದೇನೆ. ಇದಷ್ಟೇ ಅಲ್ಲ, ಕಲಿಯುವುದಕ್ಕೆ ಇನ್ನೂ ಜಾಸ್ತಿನೇ ಇದೆ ಎಂದೂ ತಿಳಿದುಕೊಂಡಿದ್ದೇನೆ. ಆರ್ಥಿಕವಾಗಿ, ವೈಯಕ್ತಿಕವಾಗಿಯೂ ಸಾಕಷ್ಟು ಬದಲಾವಣೆ ಆಗಿದೆ. ಅದೆಲ್ಲವನ್ನೂ ಹೊಸ ವರ್ಷಕ್ಕೆ ಮತ್ತಷ್ಟು ಸುಧಾರಿಸಿಕೊಳ್ಳಬೇಕಿದೆ. | ಶ್ರೀಮುರಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts