ಕುಂದಾಪುರ: ಹುತಾತ್ಮ ಯೋಧ ಅನುಪ್ ಪೂಜಾರಿ ಅವರ ಬೀಜಾಡಿ ಮನೆಗೆ ಸೊಲೂರು ಆರ್ಯ ಈಡಿಗ ಮಹಾಸಂಸ್ಥಾನ ಶ್ರೀ ರೇಣುಕಾ ಎಲ್ಲಮ್ಮದೇವಿ ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಮೃತ ಯೋಧನ ಮಗುವಿನ ಬಾಲ್ಯದ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಬೇಕಾಗುವ ಆರ್ಥಿಕ ಸಂಪನ್ಮೂಲವನ್ನು ತಮ್ಮ ಮಠದಿಂದ ಭರಿಸುವ ಭರವಸೆ ನೀಡಿದರು.
ಅನೂಪ್ ಅವರ ತಾಯಿ, ಪತ್ನಿ, ಸಹೋದರ ಶಿವರಾಮ ಅಮೀನ್, ಬಿಲ್ಲವ ಸಮಾಜದ ರಾಜೇಶ್ ಕಡ್ಗಿಮನೆ, ರಾಘು ವಿಠಲವಾಡಿ, ಅಭಿಷೇಕ್ ಪೂಜಾರಿ ಬೀಜಾಡಿ ಮತ್ತಿತರು ಉಪಸ್ಥಿತರಿದ್ದರು.