ಸುಬ್ರಹ್ಮಣ್ಯದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

Sub_Ganga-Pooja
Published on

ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ವತಿಯಿಂದ ಶುಕ್ರವಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಿಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ವರಮಹಾಲಕ್ಷ್ಮೀ ಪೂಜೆ ಆಚರಿಸಲಾಯಿತು.

ಮಾತೆಯರು ಕಲಶದೊಂದಿಗೆ ದರ್ಪಣತೀರ್ಥ ನದಿಗೆ ಪೂಜೆ ನೆರವೇರಿಸಿದರು. ಬಳಿಕ ಕಲಶದಲ್ಲಿ ಗಂಗೆಯನ್ನು ತುಂಬಿಕೊಂಡು ಆದಿಸುಬ್ರಹ್ಮಣ್ಯ ಕಲ್ಯಾಣ ಮಂಟಪಕ್ಕೆ ಬಂದು ಗಂಗೆಯನ್ನು ಪ್ರತಿಷ್ಠಾಪಿಸಿದರು. ನಂತರ ಪುರೋಹಿತರು ಪೂಜೆ ನೆರವೇರಿಸಿದರು.

ಸಮಿತಿ ಅಧ್ಯಕ್ಷೆ ಪೂಜಾ ಕಲ್ಲೂರಾಯ, ಕಾರ್ಯದರ್ಶಿ ಸುಜಾತಾ ಗಣೇಶ್, ಕೋಶಾಧಿಕಾರಿ ಶೋಭಾ ನಲ್ಲೂರಾಯ, ಸಮಿತಿ ಸದಸ್ಯರು ಮಹಿಳೆಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net