ನೆರವಿನ ನಿರೀಕ್ಷೆಯಲ್ಲಿದೆ ಸಾಯಿಜ್ಯೋತಿ ವೃದ್ಧಾಶ್ರಮ

sri-sai-jyothi-old-age-home
Published on

ಬೆಂಗಳೂರು: ಮಾಗಡಿ ರಸ್ತೆ ಕುರುಬರಹಳ್ಳಿಯ ಲಕ್ಕಪ್ಪ ಗೇಟ್​ನಲ್ಲಿರುವ ಶ್ರೀ ಸಾಯಿಜ್ಯೋತಿ ವೃದ್ಧಾಶ್ರಮ ಲಾಕ್​ಡೌನ್ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಸರ್ಕಾರ ಹಾಗೂ ಸಂಘ-ಸಂಸ್ಥೆಗಳು, ಸಾರ್ವಜನಿಕರು ನೆರವು ನೀಡಬಹುದು. 11 ವರ್ಷಗಳ ಹಿಂದೆ ಶ್ರೀ ಸಾಯಿಜ್ಯೋತಿ ಕ್ಷೇಮಾಭಿವೃದ್ಧಿ ಸಂಘ ವೃದ್ಧಾಶ್ರಮ ಸ್ಥಾಪಿಸಿತ್ತು. ಸದ್ಯ 20ಕ್ಕೂ ಹೆಚ್ಚಿನ ವೃದ್ಧರಿಗೆ ಇಲ್ಲಿ ಆಶ್ರಯ ನೀಡಲಾಗಿದ್ದು, 8 ಜನರನ್ನೊಳಗೊಂಡಿರುವ ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿ ಸಿ. ರಮೇಶ್ ಹಾಗೂ ಇತರರು ತ ಖರ್ಚಿನಲ್ಲಿ ಆಶ್ರಮ ನಡೆಸುತ್ತಿದ್ದಾರೆ.

ಇತ್ತೀಚೆಗೆ ಸಮಷ್ಟಿ ಜೀವನ ಪದ್ಧತಿ ಮಾಯವಾಗಿ ವೈಯಕ್ತಿಕ ಜೀವನ ಪದ್ಧತಿಗೆ ಮಹತ್ವ ನೀಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ವೃದ್ಧರ ಜೀವನಕ್ಕೆ ಭದ್ರತೆಯನ್ನು ಒದಗಿಸಿ ಸಂರಕ್ಷಿಸಬೇಕಾದದ್ದು ಸಮಾಜದ ಕರ್ತವ್ಯವಾಗಿದೆ. | ಸಿ. ರಮೇಶ್ ಶ್ರೀ ಸಾಯಿಜ್ಯೋತಿ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ

ತೆರಿಗೆ ವಿನಾಯಿತಿ: ದಾನಿಗಳಿಗೆ ಆದಾಯ ತೆರಿಗೆ ವಿನಾಯಿತಿ ಸೌಲಭ್ಯವಿದೆ. ವೃದ್ಧರಿಗೆ ಈ ಮೂಲಕ ನೆರವು ನೀಡಲು ಮುಂದಾಗುವವರು ತಮ್ಮ ಇಚ್ಛಾಶಕ್ತಿಗೆ ಅನುಗುಣವಾಗಿ ವಸ್ತುಗಳನ್ನು, ನಗದು, ಚೆಕ್, ಡಿಡಿಯನ್ನು ಸಾಯಿಜ್ಯೋತಿ- ಓಲ್ಡ್​ಏಜ್ ಹೋಮ್ ಹೆಸರಿನಲ್ಲಿ ನೀಡುವಂತೆ ಸಮಿತಿ ಮನವಿ ಮಾಡಿದೆ.

ಬ್ಯಾಂಕ್ ಖಾತೆ ವಿವರ: ದಾನಿಗಳು ಸಾಯಿ ಜ್ಯೋತಿ ಓಲ್ಡೇಜ್ ಹೋಮ್ ಹೆಸರಿನಲ್ಲಿರುವ ಮಾಗಡಿ ಮುಖ್ಯರಸ್ತೆ ತಾವರೆಕೆರೆ ಕೆನರಾ ಬ್ಯಾಂಕ್ ಶಾಖೆಯ ಖಾತೆ ಸಂಖ್ಯೆ: 1229201000367, ಐಎಫ್​ಎಸ್​ಸಿ ಕೋಡ್: CNRB0001229 ಗೆ ಹಣ ಜಮೆ ಮಾಡುವ ಮೂಲಕ ಸಹಾಯ ಮಾಡಬಹುದು. ಹೆಚ್ಚಿನ ವಿವರಕ್ಕೆ ದೂ: 93429 07702 ಸಂರ್ಪಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net