ಶ್ರೀ ರೇಣುಕಾ ಯಲ್ಲಮ್ಮ ಮಹಾಚರಿತೆ

Renuka Yallamma
Published on

ಬೆಂಗಳೂರು: ಕನ್ನಡ ಕಿರುತೆರೆ ವೀಕ್ಷಕರಿಗೆ ‘ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ’ ‘ಹರಹರ ಮಹಾದೇವ’, ‘ಮಹಾಭಾರತ’, ‘ರಾಧಾಕೃಷ್ಣ’, ‘ಸೀತೆಯ ರಾಮ’ ಮುಂತಾದ ಪೌರಾಣಿಕ, ಆಧ್ಯಾತ್ಮಿಕ ಮತ್ತು ಮೌಲ್ಯಾಧಾರಿತ ಧಾರಾವಾಹಿಗಳನ್ನು ನೀಡಿರುವ ಸ್ಟಾರ್ ಸುವರ್ಣ ವಾಹಿನಿಯು, ಇದೀಗ ಕನ್ನಡ ಮಣ್ಣಿನ ಸೊಗಡಿನ ಕಥೆಯನ್ನು ದೃಶ್ಯರೂಪದಲ್ಲಿ ತರುತ್ತಿದೆ. ಅದೇ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’.

ಸುದರ್ಶನ ಚಕ್ರವು ಅಹಂಕಾರದಿಂದ ಮೆರೆದಾಗ, ಭೂಲೋಕದಲ್ಲಿ ಮಾನವನ ರೂಪದಲ್ಲಿ ಜನ್ಮ ತಾಳುವುದರ ಜತೆಗೆ, ತನ್ನಿಂದಲೇ ಆತನ ಅಂತ್ಯವಾಗುವುದು ಎಂದು ಶ್ರೀ ವಿಷ್ಣುವು ಶಾಪ ನೀಡುತ್ತಾರೆ. ಅಲ್ಲಿಂದ ಪ್ರಾರಂಭವಾಗುವ ಕಥೆ ಭೂಲೋಕದಲ್ಲಿ ಮುಂದುವರೆಯುತ್ತದೆ. ಇಬ್ಬರೂ ಭೂಲೋಕದಲ್ಲಿ ಜನ್ಮತಾಳುತ್ತಾರೆ. ಲೋಕ ಕಲ್ಯಾಣಕ್ಕಾಗಿ ಹಾಗೂ ದುಷ್ಟ ಸಂಹಾರಕ್ಕಾಗಿ ಒಂದೇ ಆತ್ಮದ ಎರಡು ಶಕ್ತಿಗಳು ಒಂದಾಗಿ ಬಂದು ಮುಂಬರುವ ಕಷ್ಟ ಕೋಟಲೆಗಳನ್ನು ನಿವಾರಿಸುವುದೇ ಈ ಧಾರಾವಾಹಿಯ ಕಥೆ. ಕನ್ನಡ ನೆಲಸ ಸ್ವಂತ ಕಥೆಯಾದ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಧಾರಾವಾಹಿಯ ಚಿತ್ರೀಕರಣ ಶುರುವಾಗಿದ್ದು, ರೇಣುಕಾ ಹಾಗೂ ಯಲ್ಲಮ್ಮನ ಬಾಲ್ಯದ ಕಥೆಯನ್ನು ಚಿತ್ರೀಕರಿಸಲಾಗುತ್ತಿದೆ.

ಈಗಾಗಲೇ ಈ ಧಾರಾವಾಹಿಯ ಪ್ರೋಮೋಗಳು ಪ್ರೇಕ್ಷಕರ ಮನಗೆದ್ದಿದ್ದು, ತನ್ನ ತಾರಾಬಳಗದಿಂದ ಗಮನಸೆಳೆಯುತ್ತಿದೆ. ಕರುನಾಡಿನ ಶಕ್ತಿ ದೇವತೆಯ ಮಹಾಕಥೆಯಾದ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಇಂದಿನಿಂದ ಪ್ರತಿ ರಾತ್ರಿ 8.30ಕ್ಕೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net