ಶ್ರೀರಾಮನವಮಿ ವಿಶ್ವ ಸಂಗೀತೋತ್ಸವ

Sangeetostava
Published on

ಬೆಂಗಳೂರು: ಶ್ರೀ ರಾಮಸೇವಾ ಮಂಡಳಿಯು ರಾಮನವಮಿ ಸೆಲೆಬ್ರೇಷನ್ಸ್ ಟ್ರಸ್ಟ್ ಸಹಯೋಗದಲ್ಲಿ 2025ರ ಮಾರ್ಚ್‌ನಲ್ಲಿ ನಡೆಯುವ 87ನೇ ಶ್ರೀರಾಮನವಮಿ ವಿಶ್ವ ಸಂಗೀತೋತ್ಸವದ ಹಿನ್ನೆಲೆಯಲ್ಲಿ ಡಿ.21 ಮತ್ತು 22ರಂದು ಸಂಗೀತ ಕಛೇರಿ ಮತ್ತು ಚರ್ಚಾ ಗೋಷ್ಠಿಯನ್ನು ಆಯೋಜಿಸಲಾಗಿದೆ.

ಚಾಮರಾಜಪೇಟೆಯ 4ನೇ ಮುಖ್ಯರಸ್ತೆ, 2ನೇ ಕ್ರಾಸ್‌ನಲ್ಲಿರುವ ನಂ. 21/1, ಯಜ್ಞ ಸಾಧನ, ಎಸ್.ವಿ. ನಾರಾಯಣಸ್ವಾಮಿ ರಾವ್ ನಿವಾಸದಲ್ಲಿ ಡಿ.21ರಂದು ಸಂಜೆ 6 ಗಂಟೆಗೆ ಎಸ್.ವಿ. ನಾರಾಯಣಸ್ವಾಮಿ ರಾವ್ ಅವರ ಶಾಸೀಯ ಸಂಗೀತ ಕುರಿತು ಚರ್ಚಾಗೋಷ್ಠಿ ನಡೆಯಲಿದೆ. ನಿವೃತ್ತ ಐಎಎಸ್ ಅಧಿಕಾರಿಗಳಾದ ಡಾ. ಸಿ.ಎಸ್. ಕೇದಾರ್, ಎನ್. ಶಿವಶೈಲಂ, ಸಂಗೀತ ಕಲಾವಿದ ಎಸ್. ಶಂಕರ್ ಮತ್ತಿತರರು ಭಾಗವಹಿಸುವರು. ಸಂಜೆ 7.15ಕ್ಕೆ ಮೈಸೂರು ಕಾರ್ತಿಕ್ ಅವರಿಂದ ಪಿಟೀಲು, ರಫೀಕ್ ಖಾನ್ ಅವರಿಂದ ಸಿತಾರ್ ವಾದನ ಜುಗಲ್‌ಬಂಧಿ ನಡೆಯಲಿದೆ.

ಡಿ.22ರಂದು ಸಂಜೆ 6.30ಕ್ಕೆ ಯು. ರಾಜೇಶ್ ಅವರಿಂದ ಮ್ಯಾಂಡೊಲಿನ್ ವಾದನ, ಯೆಲ್ಲಾ ವೆಂಕಟೇಶ್ವರ ರಾವ್ ಅವರಿಂದ ಮೃದಂಗ ವಾದನ, ಬಿ. ರಾಜಶೇಖರ್ ಮತ್ತು ಪ್ರವೀಣ್ ನಾರಾಯಣ್ ಅವರು ಮೋರ್ಸಿಂಗ್ ಮತ್ತು ತಬಲಾದಲ್ಲಿ ಸಾಥ್ ನೀಡುವರು ಎಂದು ಮಂಡಳಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net