

ಕೋಟ: ಕೋಡಿ ಕನ್ಯಾಣದ ಶ್ರೀರಾಮ ಮಂದಿರ ವತಿಯಿಂದ ಶ್ರೀರಾಮ ನವಮಿ ಆಚರಣೆ ಪೂಜಾ ಕಾರ್ಯದ ಮೂಲಕ ಚಾಲನೆಗೊಂಡಿತು.
ಸಾವಿರ ತುಳಸಿ ಅರ್ಚನೆ, ವಿವಿಧ ಭಜನಾ ತಂಡಗಳ ಅಖಂಡ ಭಜನಾ ಮಂಗಲೋತ್ಸವ ಸಂಪನ್ನಗೊಂಡಿತು. ರಂಗಪೂಜೆ, ಧಾರ್ಮಿಕ ವಿಧಿವಿಧಾನ ದೇಗುಲ ಪ್ರಧಾನ ಅರ್ಚಕ ಭಾಸ್ಕರ್ ಬಾಯರಿ ನೆರವೇರಿಸಿದರು. ಮಂದಿರ ಅಧ್ಯಕ್ಷ ರಾಘವೇಂದ್ರ ಕರ್ಕೇರ, ದೇಗುಲದ ಪ್ರಮುಖರಾದ ಜಯಕುಮಾರ್, ಸುರೇಶ್ ಕಾರ್ವಿ, ಮಹಾಬಲ ಕುಂದರ್, ತಿಮ್ಮಪ್ಪ ಕರ್ಕೇರ, ಮಹೇಶ್ ತಿಂಗಳಾಯ, ಜಗನಾಥ್ ಅಮೀನ್, ರಾಘವೇಂದ್ರ ಸುವರ್ಣ, ರಾಮದಾಸ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.