ಶ್ರೀ ಪಾರ್ಶ್ವನಾಥ ಪೂಜಾ ಸೇವಾ ಟ್ರಸ್ಟ್‌ನಿಂದ ಒಂದು ವರ್ಷ ಸರಣಿ ಉಪನ್ಯಾಸ ಆಯೋಜನೆ

New Parshwanatha
Published on

ಮೈಸೂರು: ಶ್ರೀ ಪಾರ್ಶ್ವನಾಥ ಪೂಜಾ ಸೇವಾ ಟ್ರಸ್ಟ್ ವತಿಯಿಂದ ವಾರ್ಷಿಕ ಪೂಜಾ ರಜತ ಮಹೋತ್ಸವ ಆಚರಣೆ ಅಂಗವಾಗಿ ಒಂದು ವರ್ಷಗಳ ಕಾಲ ಸರಣಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.

ಜೆಎಲ್‌ಬಿ ರಸ್ತೆಯ ಜೈನ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ 2025 ಮಾರ್ಚ್‌ನಿಂದ 2026 ಮಾರ್ಚ್ ವರೆಗೆ ಪ್ರತಿ ತಿಂಗಳ ಎರಡನೇ ಭಾನುವಾರ ಸಂಜೆ 4 ರಿಂದ 5.30ರ ವರೆಗೆ ಉಪನ್ಯಾಸ ನಡೆಯಲಿದೆ.

ಮಾರ್ಚ್ 9 ರಂದು ಸರಣಿ ಉಪನ್ಯಾಸದ ಮೊದಲ ಕಾರ್ಯಕ್ರಮ ನಡೆಯಲಿದ್ದು, ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಅನಂತರಾಮು ‘ವಡ್ಡಾರಾಧನೆ’ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಎಂ.ಪಿ.ನಾಭಿರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net