

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ ಶ್ರೀ ಮಲ್ಲಿಕಾರ್ಜುನ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 2024-25ನೇ ಸಾಲಿನ ವಾರ್ಷಿಕ ಸಭೆ ಆಮ್ರಕಲ್ಲು -ಹಿಲಿಯಾಣದ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಭಾನವಾರ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸೊಸೈಟಿಯ ಅಧ್ಯಕ್ಷ ಕೃಷ್ಣ ನಾಯ್ಕ ಶೇಡಿಕೊಡ್ಲು ಮಾತನಾಡಿ, ಸೊಸೈಟಿ 2024-25ನೇ ಸಾಲಿನಲ್ಲಿ 194 ಕೋಟಿ ರೂ. ವ್ಯವಹಾರ ನಡೆದಿದ್ದು, 80,56,367,00 ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ. 41.90 ಕೋಟಿ ರೂ.ಠೇವಣಿ ಸಂಗ್ರಹಿಸಿದ್ದು, 33.88 ಕೋಟಿ ರೂ.ಸಾಲ ಹೊಂದಿದೆ. ಜತೆಗೆ ವಿವಿಧ ಸಂಸ್ಥೆಗಳಲ್ಲಿ 16.37 ಕೋಟಿ ರೂ.ಹೂಡಿಕೆ ಮಾಡಿದ್ದು, 6.33 ಕೋಟಿ ರೂ.ನಿಧಿ ಹೊಂದಿದೆ. ಸಂಘವು 5,818 ಸದಸ್ಯರನ್ನು ಹೊಂದಿದ್ದು, 1,70,44,300 ರೂ.ಬಂಡವಾಳ ಹೊಂದಿದೆ ಎಂದು ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷ ಸಿದ್ದಾರ್ಥ ನಾಯ್ಕ, ನಿರ್ದೇಶಕರಾದ ಎಚ್.ಬೆಳ್ಳ ನಾಯ್ಕ, ಜಯಪ್ರಕಾಶ ನಾಯ್ಕ, ವಸಂತ ನಾಯ್ಕ, ದಿನೇಶ ನಾಯ್ಕ, ನರಸಿಂಹ ನಾಯ್ಕ, ಮಹದೇವ ನಾಯ್ಕ, ಲಲಿತಾ, ಪಾರ್ವತಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರಸಿಂಹ ನಾಯ್ಕ ಮಂದಾರ್ತಿ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ಕೃಷ್ಣ ನಾಯ್ಕ ಸನ್ಮಾನಿತರನ್ನು ಪರಿಚಯಿಸಿದರು. ಸಿದ್ದಾರ್ಥ ನಾಯ್ಕ ಸ್ವಾಗತಿಸಿದರು. ಮಹದೇವ ನಾಯ್ಕ ಬಿಲ್ಲಾಡಿ 2025-26 ನೇ ಸಾಲಿನ ಆಯ್ಯ-ವ್ಯಯ ಮಂಡಿಸಿದರು. ವಂಸತ್ ನಾಯ್ಕ ಒಳಬೈಲ್ ವಂದಿಸಿದರು. ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿದರು. ವೈಷ್ಣವಿ, ಗಣೇಶ ಮತ್ತು ಪ್ರಕಾಶ ಸಹಕರಿಸಿದರು.
ನಾಟಿ ವೈದ್ಯೆ ಕಮಲಾ ಬಾಯಿ ಮಾರ್ವಿ, ಕೃಷಿಕ ಸುಬ್ರಾಯ ನಾಯ್ಕ ಅಲ್ತಾರ್, ಸಮಾಜ ಸೇವೆಯಲ್ಲಿ ಎಂ.ಕೆ ನಾಯ್ಕ ಮೀಯಾರು, ರಾಜ್ಯಪ್ರಶಸ್ತಿ ವಿಜೇತೆ ವಸಂತಿ ರಾಘವೇಂದ್ರ ಕಾರಿಕೋಡ್ಲು, ಇತರ ಕ್ಷೇತ್ರಗಳ ಸಾಧಕರಾದ ಪ್ರಭಾಕರ ನಾಯ್ಕ ಕೋಟೆಬೆಟ್ಟು, ಅನ್ವಿತಾ ಕಿರಾಡಿ ಅವರನ್ನು ಸನ್ಮಾನಿಸಲಾಯಿತು. ವೈದ್ಯಕೀಯ ಚಿಕಿತ್ಸೆಗಾಗಿ ಎಂಟು ಮಂದಿಗೆ ಸಹಾಯಧ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ, ಇಂಜಿನಿಯರಿಂಗ್ ಕಲಿಯುತ್ತಿರುವ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.