

ಕಡಬ: ಇಲ್ಲಿನ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಏಕಾಹ ಭಜನಾ ಮಹೋತ್ಸವವು ಶುಕ್ರವಾರ ಮುಂಜಾನೆ ಆರಂಭಗೊಂಡಿತು.
ಪ್ರಧಾನ ಅರ್ಚಕ ಗೋಪಾಲಕೃಷ್ಣ ಕೆದಿಲಾಯ ಚಾಲನೆ ನೀಡಿದರು. ದೈವಜ್ಞ ಸುಬ್ರಹ್ಮಣ್ಯ ಬೈಪಾಡಿತ್ತಾಯ ಕೆಂಚಭಟ್ರೆ, ದೇವಸ್ಥಾನದ ಅರ್ಚಕ ಪ್ರಶಾಂತ ಕೆದಿಲಾಯ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಕರ್ಕೇರ, ಮಾಜಿ ಅಧ್ಯಕ್ಷರಾದ ಜನಾರ್ದನ ಗೌಡ ಪಣೆಮಜಲು, ಡಾ.ರವೀಂದ್ರ ಮಲ್ಯ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಏಕಾಹ ಭಜನಾ ಸಮಿತಿಯ ಅಧ್ಯಕ್ಷ ಶ್ರೀಕೃಷ್ಣ ಎಂ.ಆರ್, ಕಾರ್ಯದರ್ಶಿ ರಾಮಚಂದ್ರ ಗೌಡ ಸನಿಲ, ಗೌರವಾಧ್ಯಕ್ಷ ಕಡಬ ಎಸ್ಐ ಅಭಿನಂದನ್ ಎಂ.ಎಸ್, ಶ್ರೀದುರ್ಗಾಂಬಿಕಾ ಭಜನಾ ಮಂಡಳಿಯ ಅಧ್ಯಕ್ಷ ಸೋಮಪ್ಪ ನಾಕ್, ಕಾರ್ಯದರ್ಶಿ ಮನೋಹರ ರೈ ಬೆದ್ರಾಜೆ, ಶ್ರೀಕಂಠ ಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರೈ ಹಳ್ಳಿ, ಮಾಜಿ ಅಧ್ಯಕ್ಷ ಮುತ್ತುಕುಮಾರ್, ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್, ಧಾರ್ಮಿಕ ಉತ್ಸವ ಸಮಿತಿಯ ಅಧ್ಯಕ್ಷ ಸುಂದರ ಗೌಡ ಮಂಡೆಕರ ಮುಂತಾದವರು ಉಪಸ್ಥಿತರಿದ್ದರು.
ಶ್ರೀ ದೇವರಿಗೆ ಉಲ್ಪೆ ಸಮರ್ಪಣೆ
ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯ ಸದಸ್ಯರು ಭಜನಾ ಸೇವೆ ನೆರವೇರಿಸಿದರು. ಬಳಿಕ ವಿವಿಧ ಭಜನಾ ಸಂಘಗಳ ಸದಸ್ಯರಿಂದ ಭಜನೆ ನಡೆಯಿತು. ಸಂಜೆ ದುರ್ಗಾಪೂಜೆ ನೆರವೇರಿತು. ರಾತ್ರಿ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠಾಧೀಶ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀಗಳನ್ನು ಗಣಪತಿ ದೇವಸ್ಥಾನದಿಂದ ಪೂರ್ಣಕುಂಭ ಸ್ವಾಗತದ ಮೂಲಕ ರಾಜಬೀದಿಯಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ಬಳಿಕ ಶ್ರೀ ದೇವರಿಗೆ ಉಲ್ಪೆ ಸಮರ್ಪಣೆ ನಡೆಯಿತು. ಜೆಸಿಐ ಕಡಬ ಕದಂಬ ಘಟಕದ ವತಿಯಿಂದ ಮಜ್ಜಿಗೆ ವಿತರಣೆಗೆ ಏಕಾಹ ಭಜನಾ ಸಮಿತಿಯ ಅಧ್ಯಕ್ಷ ಶ್ರೀಕೃಷ್ಣ ಎಂ.ಆರ್. ಚಾಲನೆ ನೀಡಿದರು.