

ಬೆಂಗಳೂರು: ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ಸೇರಿದಂತೆ ಭಾರತ ಕ್ರೀಡಾಪಟುಗಳು 21ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಸಂಭ್ರಮಾಚರಣೆಯನ್ನು ಸ್ಮರಿಸಿದ್ದಾರೆ. 1999ರ ಜುಲೈನಲ್ಲಿ ಭಾರತ ಕಾರ್ಗಿಲ್ ಯುದ್ದಭೂಮಿಯಲ್ಲಿ ಭಾರತ, ಪಾಕಿಸ್ತಾನವನ್ನು ಬಗ್ಗು ಬಡಿದಿತ್ತು. ಅಂದಿನಿಂದ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ ದಿನ ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಈ ಸಂಭ್ರಮಾಚರಣೆ ಹಿಂದೆ ವೀರ ಯೋಧರ ಶ್ರಮವಿದೆ ಎಂದು ಕ್ರೀಡಾಪಟುಗಳು ಟ್ವೀಟ್ ಮಾಡಿದ್ದಾರೆ.
ಭಾರತೀಯ ಸೇನೆಗೆ ಈ ಗೌರವ ಸಲ್ಲಬೇಕು. ನಮ್ಮೆಲ್ಲರ ಸುರತೆಗೆ ಯೋಧರ ತಮ್ಮ ಪ್ರಾಣವನ್ನೇ ಅಪಿರ್ಸಿದ್ದಾರೆ. ಅವರ ಧೈರ್ಯ ಹಾಗೂ ಸಾಹಸಕ್ಕೆ ಚಿರಋಣಿ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
ಕಾರ್ಗಿಲ್ ಯುದ್ದದಲ್ಲಿ ನಮ್ಮ ಯೋಧರ ಶೌರ್ಯ, ನಿಸ್ವಾರ್ಥ ಸೇವೆ ಎಲ್ಲರಿಗೂ ಸ್ಫೂರ್ತಿ. ಹಲವು ವಿಸ್ಮಯಕಾರಿ ಕಥೆಗಳಿವೆ. ಯೋಧರ ಸೇವೆಯನ್ನು ನಾವು ಯಾವಾಗಲೂ ನೆನೆಯಬೇಕು ಎಂದು ದಿಗ್ಗಜ ಸಚಿನ್ ತೆಂಡುಲ್ಕರ್ ಟ್ವೀಟ್ ಮಾಡಿದ್ದಾರೆ.
ಕನ್ನಡಿಗ ಕೆಎಲ್ ರಾಹುಲ್, ಅಜಿಂಕ್ಯ ರಹಾನೆ, ಶೂಟರ್ ಗಗನ್ ನಾರಂಗ್, ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಸೇರಿದಂತೆ ಅನೇಕ ಮಂದಿ ವಿಜಯ್ ದಿವಸ್ ದಿನದಂದ ಯೋಧರ ಬಲಿದಾನವನ್ನು ಸ್ಮರಿಸಿದ್ದಾರೆ.