ಶಿವಮೊಗ್ಗ ಲಯನ್ಸ್ ಮಣಿಸಿ ಫೈನಲ್‌ಗೇರಿದ ಹುಬ್ಬಳ್ಳಿ ಟೈಗರ್ಸ್‌

slll
Published on

ಬೆಂಗಳೂರು: ಆರಂಭಿಕ ಮೊಹಮದ್ ತಾಹ (69 ರನ್, 38 ಎಸೆತ, 1 ಬೌಂಡರಿ, 8 ಸಿಕ್ಸರ್) ಹಾಗೂ ಕೆ. ಶ್ರೀಜೀತ್ (61* ರನ್, 39 ಎಸೆತ, 7 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್‌ ತಂಡ ಶಿವಮೊಗ್ಗ ಲಯನ್ಸ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು. ಪ್ರಶಸ್ತಿ ಸುತ್ತಿನಲ್ಲಿ ಮಂಗಳವಾರ ಮೈಸೂರು ವಾರಿಯರ್ಸ್‌ ತಂಡವನ್ನು ಎದುರಿಸಲಿದೆ.

ಚಿನ್ನಸ್ವಾಮಿ ಅಂಗಣದಲ್ಲಿ ಸೋಮವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಶಿವಮೊಗ್ಗ ಲಯನ್ಸ್, ರೋಹನ್ ಕದಂ (54 ರನ್, 44 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕದ ಬಲದಿಂದ 7 ವಿಕೆಟ್‌ಗೆ 149 ರನ್ ಕಲೆಹಾಕಿತು. ಪ್ರತಿಯಾಗಿ ಮೊಹಮದ್ ತಾಹ (69 ರನ್, 38 ಎಸೆತ, 1 ಬೌಂಡರಿ, 8 ಸಿಕ್ಸರ್) ಹಾಗೂ ಕೆ. ಶ್ರೀಜೀತ್ (61* ರನ್, 39 ಎಸೆತ, 7 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಲದಿಂದ ಹುಬ್ಬಳ್ಳಿ ತಂಡ 14 ಓವರ್‌ಗಳಲ್ಲಿ 2 ವಿಕೆಟ್‌ಗೆ 153 ರನ್‌ಗಳಿಸಿ ಸುಲಭ ಜಯ ಕಂಡಿತು.

ಶಿವಮೊಗ್ಗ ಲಯನ್ಸ್: 7 ವಿಕೆಟ್‌ಗೆ 149 (ರೋಹನ್ ಕದಂ 54, ನಿಹಾಲ್ 7, ವಿನಯ್ 13, ಅಭಿನವ್ 2, ಶ್ರೇಯಸ್ ಗೋಪಾಲ್ 16, ಎಚ್‌ಎಸ್ ಶರತ್ 18, ಲವೀಶ್ 32ಕ್ಕೆ 2, ಮನ್ವಂತ್ 29ಕ್ಕೆ 2).

ಹುಬ್ಬಳ್ಳಿ ಟೈಗರ್ಸ್‌: 14 ಓವರ್‌ಗಳಲ್ಲಿ 2 ವಿಕೆಟ್‌ಗೆ 153 (ಲವನೀತ್ 13, ತಾಹ 69, ಶ್ರೀಜೀತ್ 61*, ಸಂಜಯ್ 2*, ವಿ. ಕೌಶಿಕ್ 17ಕ್ಕೆ 1, ನಿಶ್ಚಿತ್ 27ಕ್ಕೆ1).

ಪಂದ್ಯಶ್ರೇಷ್ಠ: ಮೊಹಮದ್ ತಾಹ

ನಾಳೆ ಪೈನಲ್

ಹುಬ್ಬಳ್ಳಿ ಟೈಗರ್ಸ್‌-ಮೈಸೂರು ವಾರಿಯರ್ಸ್‌

ಆರಂಭ: ಸಂಜೆ 5.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ/2.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net