ಸೆಮಿಫೈನಲ್ ಸೋಲಿಗೆ ಮುಯ್ಯಿ ತೀರಿಸಿದ ಬುಲ್ಸ್: ಹಾಲಿ ಚಾಂಪಿಯನ್ ಎದುರು ರೋಚಕ ಗೆಲುವು

New-Project-11-1
Published on

ಬೆಂಗಳೂರು: ಸಂಘಟಿತ ನಿರ್ವಹಣೆ ತೋರಿದ ಆತಿಥೇಯ ಬೆಂಗಳೂರು ಬುಲ್ಸ್ ತಂಡ ಮೊದಲಾರ್ಧದ ಹಿನ್ನಡೆಯಿಂದ ಕಂಬ್ಯಾಕ್ ಮಾಡುವ ಮೂಲಕ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಜೈಪುರ ಪಿಂಕ್‌ಪ್ಯಾಂಥರ್ಸ್‌ ಎದುರು 32-30ರಿಂದ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಹಿಂದಿನ ಆವೃತ್ತಿಯ ಸೆಮಿೈನಲ್ ಸೋಲಿಗೆ ತವರಿನಲ್ಲಿ ಮುಯ್ಯಿ ತೀರಿಸಿಕೊಂಡಿದೆ.

ಕಂಠೀರಣ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ಮುಕ್ತಾಯಗೊಂಡ ಬೆಂಗಳೂರು ಚರಣದ ಕೊನೇ ಪಂದ್ಯದಲ್ಲಿ ರೈಡರ್‌ಗಳಾದ ವಿಕಾಸ್ ಕಂಡೋಲಾ (8) ಹಾಗೂ ಭರತ್ (9) ಹಾಗೂ ಟ್ಯಾಕಲಿಂಗ್‌ನಲ್ಲಿ ನಾಯಕ ಸೌರಭ್ ನಂದಲ್ (5) ತೋರಿದ ಸಂಘಟಿತ ನಿರ್ವಹಣೆ ಬುಲ್ಸ್‌ಗೆ ಸತತ ಎರಡನೇ ಗೆಲುವು ತಂದುಕೊಟ್ಟಿತು. ಮೊದಲಾರ್ಧದಲ್ಲಿ 14-17 ಹಿನ್ನಡೆಯಲ್ಲಿದ್ದ ಬುಲ್ಸ್ ಪಂದ್ಯದ 28ನೇ ನಿಮಿಷದಲ್ಲಿ ಮೊದಲ ಬಾರಿಗೆ ಮುನ್ನಡೆ ಸಾಧಿಸಿತು. ಉಭಯ ತಂಡಗಳು ಸಮಬಲದ ಹೋರಾಟ ಪ್ರದರ್ಶಿಸಿದರೂ ಅಂತಿಮ ನಿಮಿಷಗಳಲ್ಲಿ ಮೇಲುಗೈ ಸಾಧಿಸಿದ ಬೆಂಗಳೂರು ಬುಲ್ಸ್ ಸತತ 2ನೇ ಗೆಲುವಿನೊಂದಿಗೆ ತವರಿನ ಅಭಿಯಾನ ಮುಗಿಸಿದೆ.

ದಿನದ ಮೊದಲ ಪಂದ್ಯದಲ್ಲಿ ನರೇಂದರ್ (10) ತೋರಿದ ಅಮೋಘ ನಿರ್ವಹಣೆಯಿಂದ ತಮಿಳ್ ತಲೈವಾಸ್ 38-36ರಿಂದ ತೆಲುಗು ಟೈಟಾನ್ಸ್ ಎದುರು ರೋಚಕ ಗೆಲುವು ದಾಖಲಿಸಿದೆ. ಸತತ 4ನೇ ಸೋಲುಂಡ ಪವನ್ ಶೆರಾವತ್ ಬಳಗ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net