ಸಂಕಷ್ಟದಲ್ಲಿ ಚಂಡೀಗಢ, ಗೆಲುವಿನತ್ತ ಕರ್ನಾಟಕದ ಚಿತ್ತ

IMG-20240219-WA0035
Published on

ಹುಬ್ಬಳ್ಳಿ: ಇಲ್ಲಿಯ ರಾಜನಗರ ಕೆಎಸ್ ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆತಿಥೇಯ ಕರ್ನಾಟಕ, ಚಂಡೀಗಢ ವಿರುದ್ಧ ಗೆಲುವಿನತ್ತ ಹೆಜ್ಜೆ ಇಟ್ಟಿದೆ.
ಪಂದ್ಯದ 4ನೇ ಹಾಗೂ ಕೊನೆಯ ದಿನವಾದ ಸೋಮವಾರ  ಭೋಜನ ವಿರಾಮದ ವೇಳೆಗೆ ಚಂಡೀಗಢ 44 ಓವರ್ ಗಳಲ್ಲಿ 4 ವಿಕೆಟ್ ಗೆ 164:ರನ್ ಗಳಿಸಿತ್ತು.
ಪ್ರಥಮ ಇನ್ನಿಂಗ್ಸ್ ಆಧಾರದಲ್ಲಿ ಕರ್ನಾಟಕ 296 ರನ್ ಗಳ ಮನ್ನಡೆ ಗಳಿಸಿದೆ. ಇದರಿಂದ ಚಂಡಿಗಢ ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಇನ್ನು 132 ರನ್ ಗಳಿಸಬೇಕಿದೆ.

ಆರಂಭಿಕ ಶಿವಂ ಭಾಂಬ್ರಿ 33, ಅರ್ಸ್ಲನ್ ಖಾನ್ 63, ನಾಯಕ ಮನನ್ ವೊಹ್ರಾ 23 ಹಾಗೂ ಕುನಾಲ ಮಹಾಜನ್ 1 ರನ್ ಗಳಿಸಿ ಔಟಾಗಿದ್ದಾರೆ.
ಎ.ಕೆ. ಕೌಶಿಕ್ 10 ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಮಯಾಂಕ್ ಸಿಧು 22 ರನ್ ಗಳಿಸಿ ಆಡುತ್ತಿದ್ದಾರೆ. ಕರ್ನಾಟಕದ ಪರ ವಾಸುಕಿ ಕೌಶಿಕ್ 26ರನ್ ನೀಡಿ 2 ಹಾಗೂ ಕೆ. ಶಶಿಕುಮಾರ್ 30ರನ್ ನೀಡಿ 2 ವಿಕೆಟ್ ಕಬಳಿಸಿದ್ದಾರೆ.
ಚಂಡೀಗಢ ಪ್ರಥಮ‌ ಇನ್ನಿಂಗ್ಸ್ ನಲ್ಲಿ 267 ರನ್  ಗಳಿಸಿತ್ತು. ಕರ್ನಾಟಕ 5 ವಿಕೆಟ್ ಗೆ 563 ರನ್‌ಗಳಿಸಿ ಭಾನುವಾರವೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net