ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಾಲಕರ ಕ್ರೀಡಾಕೂಟ

IMG-20200122-WA0046.jpg
Published on

ಚನ್ನರಾಯಪಟ್ಟಣ: ತಾಲೂಕಿನ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ 2019-20 ನೇ ಸಾಲಿನ ಪಾಲಕರ ಕ್ರೀಡಾಕೂಟ ಬುಧವಾರ ನಡೆಯಿತು.


ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಮುಖ್ಯಶಿಕ್ಷಕ ಟಿ.ತಿಮ್ಮೇಗೌಡ ಮಾತನಾಡಿ, ಪಾಲಕರು ಅನುಸರಿಸುವ ಮೌಲ್ಯಯುತ ಬದುಕು ತಮ್ಮ ಮಕ್ಕಳ ಭವಿಷ್ಯದ ಬುನಾದಿಯಾಗಿದೆ ಎಂದು ಹೇಳಿದರು.

ಮಕ್ಕಳನ್ನು ಹೆಚ್ಚಿನ ಹಣ ನೀಡಿ ಶಾಲೆಗೆ ಸೇರಿಸಿದರೆ ಸಾಕು ನಮ್ಮ ಜವಾಬ್ದಾರಿ ಮುಗಿದೇಹೋಯಿತು ಎಂದುಕೊಳ್ಳುವ ಪಾಲಕರಿದ್ದಾರೆ, ಅದು ಅವರ ತಪ್ಪು ಕಲ್ಪನೆಯಾಗಿದ್ದು, ಮಕ್ಕಳ ಶೈಕ್ಷಣಿಕ ಹಂತದಲ್ಲಿ ಪ್ರತಿ ಹೆಜ್ಜೆಗಳಲ್ಲಿಯೂ ಸ್ಪಂದಿಸಿ ಆತ್ಮಸ್ಥೈರ್ಯ ತುಂಬುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯವಾಗಿದೆ ಎಂದರು.

ಶಾಲೆಯಲ್ಲಿ ಸುಮಾರು 850ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಎಲ್ಲ ಪಾಲಕರು ಕ್ರೀಡಾಕೂಟದಲ್ಲಿ ಹುಮ್ಮಸ್ಸಿನೊಂದಿಗೆ ಪಾಲ್ಗೊಂಡಿದ್ದರು. ಹೆಜ್ಜೆ ಗುರುತು, ಬಾಲ್ ಬ್ಯಾಲೆನ್ಸ್, ಕಾಯಿನ್ ಜೋಡಣೆ, ಕಾಳು ಬೇರ್ಪಡಿಸುವಿಕೆ, ನಟ್ ಬಿಲ್ಡಿಂಗ್ ಹಾಗೂ ತಲೆಮೇಲೆ ಕೊಡ ಸೇರಿದಂತೆ ವಿವಿಧ ಕ್ರೀಡೆಗಳು ಜರುಗಿದವು.

ದೈಹಿಕ ಶಿಕ್ಷಕಿ ಮಮತಾ, ಸಹ ಶಿಕ್ಷಕರಾದ ಹರೀಶ್, ಅಶೋಕ್, ಶಂಸುದ್ದೀನ್, ಸವಿತಾ, ಅನುಪಮ, ಧನಲಕ್ಷ್ಮಿ, ಕವಿತಾ ಹಾಗೂ ಪಾಲಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net