ಪೊಲೀಸರಿಗೆ ಕ್ರಿಕೆಟಿಗರ ಗೌರವ

page 10 3
Published on

ನವದೆಹಲಿ/ಮುಂಬೈ: ಕರೊನಾ ಹಾವಳಿಯ ನಡುವೆ ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವ ಮಹಾರಾಷ್ಟ್ರ ಪೊಲೀಸರಿಗೆ ಕ್ರಿಕೆಟ್ ತಾರೆಯರಾದ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಮತ್ತು ಜಹೀರ್ ಖಾನ್ ವಿಶೇಷ ಗೌರವ ಸಲ್ಲಿಸಿದ್ದಾರೆ. ಈ ಮೂವರು ತಮ್ಮ ಟ್ವಿಟರ್ ಖಾತೆಯ ಡಿಸ್​ಪ್ಲೇ ಪಿಕ್ಚರ್​ನಲ್ಲಿ (ಡಿಪಿ) ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಲಾಂಛನವನ್ನು ಪ್ರಕಟಿಸಿದ್ದು, ಪೊಲೀಸರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘24/7 ಕೆಲಸ ನಿರ್ವಹಿಸುತ್ತಿರುವ ಮಹಾರಾಷ್ಟ್ರ ಪೊಲೀಸರಿಗೆ ಧನ್ಯವಾದ’ ಎಂದು ಸಚಿನ್ ಟ್ವೀಟಿಸಿದ್ದಾರೆ. ಮಹಾರಾಷ್ಟ್ರದ ಸಾವಿರಕ್ಕೂ ಅಧಿಕ ಪೊಲೀಸರು ಕರೊನಾ ಸೋಂಕಿಗೆ ತುತ್ತಾಗಿದ್ದಾರೆ.

ದೆಹಲಿ ಪೊಲೀಸರಿಗೆ ವಿಶ್ವ ವಿಜೇತರ ಬೆಂಬಲ: 1983ರ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾದ ಮದನ್​ಲಾಲ್, ಮೊಹಿಂದರ್ ಅಮರ್​ನಾಥ್, ಕೀರ್ತಿ ಆಜಾದ್ ಮತ್ತು ಬಲ್ವಿಂದರ್ ಸಿಂಗ್ ಸಂಧು ಕರೊನಾ ಜಾಗೃತಿಯ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಮೂಲಕ ದೆಹಲಿ ಪೊಲೀಸರಿಗೆ ಬೆಂಬಲ ಸೂಚಿಸಿದ್ದಾರೆ. ಲಾಕ್​ಡೌನ್ ನಿಯಮಗಳನ್ನು ಪಾಲಿಸಿ ಎಂದವರು ಮನವಿ ಮಾಡಿಕೊಂಡಿದ್ದಾರೆ. -ಪಿಟಿಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net