ಗುಲ್ಬರ್ಗ ಮೈಸ್ಟಿಕ್ಸ್ ಸೇರಲು ಸುವರ್ಣಾವಕಾಶ

Gulbarga Mystics
Published on

ಕಲಬುರಗಿ: ಗುಲ್ಬರ್ಗ ಮೈಸ್ಟಿಕ್ಸ್ ತಂಡಕ್ಕೆ ಆಟಗಾರರ ಆಯ್ಕೆ ಪ್ರಕ್ರಿಯೆ ಸಂಗತ್ರಾಸವಾಡಿಯ ಖ್ವಾಜಾ ಬಂದಾನವಾಜ್ (ಕೆಬಿಎನ್) ಟರ್ಫ್ ಮೈದಾನದಲ್ಲಿ ಜು.29, 30ರಂದು ನಡೆಯಲಿದೆ ಎಂದು ಟೀಮ್ ಮ್ಯಾನೇಜ್‌ಮೆಂಟ್ ತಿಳಿಸಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯಿಂದ ನಡೆಯುವ ಮಹಾರಾಜ ಟ್ರೋಫಿಯಲ್ಲಿ ಗುಲ್ಬರ್ಗ ಮೈಸ್ಟಿಕ್ಸ್ ತಂಡ ಪ್ರತಿನಿಧಿಸಲು ಇಚ್ಛಿಸುವ 27 ವರ್ಷದೊಳಗಿನ ಪ್ರತಿಭಾವಂತ ಆಟಗಾರರಿಗೆ ಆದ್ಯತೆ ನೀಡಲಾಗುವುದು. ಕೆಎಸ್‌ಸಿಎ ನೋಂದಾಯಿತ ಪ್ಲೇಯರ್ಸ್ ಆಗಿರಬೇಕು. 1, 2 ಅಥವಾ 3ನೇ ಡಿವಿಜನ್ ಲೀಗ್ ಮ್ಯಾಚ್‌ಗಳಲ್ಲಿ ಭಾಗವಹಿಸಿರಬೇಕು. ಫಿಟ್ನೆಸ್, ಫೀಲ್ಡಿಂಗ್ ಇತರ ಕೌಶಲ ಪರೀಕ್ಷಿಸಲಾಗುವುದು.

ಗುಲ್ಬರ್ಗ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಆಟಗಾರರಿಗೆ ಸುವರ್ಣಾವಕಾಶ ಇದಾಗಿದ್ದು, ಕ್ಯಾಚ್‌ಮೆಂಟ್ ಟ್ರಯಲ್ಸ್ನಲ್ಲಿ ಹೆಸರು ನೋಂದಾಯಿಸಲು ಜು.27, 28ರವರೆಗೆ ಕಾಲಾವಕಾಶ ನೀಡಲಾಗಿದೆ. ಮಾಹಿತಿಗಾಗಿ ಮೊ. 82968 83124ಗೆ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net