ಕ್ರೀಡಾಪಟುಗಳ ಅಭಿಪ್ರಾಯ ಕೇಳಿದ ಐಒಎ

page 10 6
Published on

ನವದೆಹಲಿ: ದೇಶದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸುವ ಬಗ್ಗೆ ಕ್ರೀಡಾಪಟುಗಳು, ಕೋಚ್​ಗಳು ಮತ್ತು ಸಂಬಂಧಿತ ಇತರರಿಂದ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಅಭಿಪ್ರಾಯಗಳನ್ನು ಸಂಗ್ರಹಿಸಲು ಮುಂದಾಗಿದೆ. ರಾಷ್ಟ್ರೀಯ ಕ್ರೀಡಾ

ಒಕ್ಕೂಟಗಳು ಮತ್ತು ರಾಜ್ಯ ಒಲಿಂಪಿಕ್ ಸಂಸ್ಥೆ ಗಳಿಗೆ ಈ ಜವಾಬ್ದಾರಿಯನ್ನು ಒಪ್ಪಿಸಿರುವ ಐಒಎ, ಯಾವಾಗ ಮತ್ತು ಹೇಗೆ ಚಟುವಟಿಕೆಗಳನ್ನು ಮತ್ತೆ ಆರಂಭಿಸಬಹುದಾಗಿದೆ ಎಂದು ಕೇಳಿದೆ. ಸದ್ಯ ದೇಶದಲ್ಲಿ ಲಾಕ್​ಡೌನ್ ಮೇ 17ರವರೆಗೂ ವಿಸ್ತರಣೆಯಾಗಿದೆ.

‘ಲಾಕ್​ಡೌನ್​ಗೆ ಮುನ್ನ ಟೋಕಿಯೊ ಒಲಿಂಪಿಕ್ಸ್ ಸಿದ್ಧತೆಯ ಅಂಗವಾಗಿ ಎಲ್ಲ ಕ್ರೀಡಾ ಚಟುವಟಿಕೆಗಳು ಭರದಿಂದ ಸಾಗುತ್ತಿದ್ದವು. ಆದರೆ ಲಾಕ್​ಡೌನ್​ನಿಂದಾಗಿ ಒಮ್ಮೆಲೆ ಎಲ್ಲ ಚಟುವಟಿಕೆಗಳೂ ಸ್ಥಗಿತಗೊಂಡವು. ಇದೀಗ ಕ್ರೀಡಾಪಟುಗಳಿಗೆ ಪ್ರೇರಣೆ ತುಂಬುವ ಕೆಲಸಗಳು ಆಗಬೇಕಿದೆ’ ಎಂದು ಐಒಎ ತಿಳಿಸಿದೆ. ದೇಶದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಮೇ ಅಂತ್ಯದ ವೇಳೆಗೆ ಪುನರಾರಂಭ ಮಾಡುವ ಬಗ್ಗೆ ಕ್ರೀಡಾ ಸಚಿವ ಕಿರಣ್ ರಿಜಿಜು ಈಗಾಗಲೆ ಒಲವು ವ್ಯಕ್ತಪಡಿಸಿದ್ದಾರೆ. -ಪಿಟಿಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net