ಏಷ್ಯನ್ ಗೇಮ್ಸ್‌ನಲ್ಲಿ ಶುಭಾರಂಭ ಕಂಡ ಭಾರತ ಪುರುಷರ ಹಾಗೂ ಮಹಿಳಾ ಟೇಬಲ್ ಟೆನಿಸ್ ತಂಡಗಳು

New-Project-22-1
Published on

ಹಾಂಗ್ ರೆೌ/ನವದೆಹಲಿ: ಟೇಬಲ್ ಟೆನಿಸ್‌ನಲ್ಲಿ ಭಾರತ ಪುರುಷರ ತಂಡ ಹಾಗೂ ಮಹಿಳಾ ತಂಡ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಅನುಭವಿ ಶರತ್ ಕಮಲ್, ಜಿ. ಸತ್ಯನ್ ಹಾಗೂ ಹರ್ಮಿತ್ ದೇಸಾಯಿ ಒಳಗೊಂಡ ತಂಡ ಯೆಮನ್ ವಿರುದ್ಧ 3-0 ಸುಲಭ ಜಯ ದಾಖಲಿಸಿದೆ. ಸತ್ಯನ್ 11-3, 11-2, 11-6 ಅಂತರದಿಂದ ಅಲಿ ಒಮರ್ ವಿರುದ್ಧ 14 ನಿಮಿಷದಲ್ಲಿ ಜಯ ಒಲಿಸಿಕೊಂಡರು. 41 ವರ್ಷದ ಶರತ್ 11-3, 11-4, 11-6 ರಿಂದ ಇಬ್ರಾಹಿಂ ಅಬ್ದುಲ್ಲಾ ಹಕೀಮ್ ಮೊಹಮದ್ ಗುಬ್ರಾನ್ ವಿರುದ್ಧ ಮೇಲುಗೈ ಸಾಧಿಸಿ ಮುನ್ನಡೆ ಒದಗಿಸಿದರು. ಭಾರತದ ಅಗ್ರ ಶ್ರೇಯಾಂಕಿತ ಆಟಗಾರ ಹರ್ಮಿತ್ 11-1, 11-1, 11-7 ರಿಂದ ಮಗ್ದ್ ಅಹ್ಮದ್ ಅಲಿ ಅಲ್ದುಭಾನಿ ಎದರು ಸುಲಭವಾಗಿ ಗೆಲುವು ದಕ್ಕಿಸಿಕೊಂಡರು.ಎರಡನೇ ಸುತ್ತಿನಲ್ಲಿ ಭಾರತ ಪುರುಷರ ತಂಡ ಸಿಂಗಾಪುರ ಎದುರು 3-1 ರಿಂದ ಹಾಗೂ ಮಹಿಳಾ ತಂಡ ತನ್ನ ಆರಂಭಿಕ ಪಂದ್ಯದಲ್ಲಿ 3-2 ರಿಂದ ಗೆಲುವು ದಾಖಲಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net