

ಕೋಪನ್‌ಹೇಗನ್: ಸೋಮವಾರ ಆರಂಭವಾಗಲಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವದ ನಂ.2 ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ, ಸಿಂಗಲ್ಸ್‌ನಲ್ಲಿ ಎಚ್‌ಎಸ್ ಪ್ರಣಯ್ ಮತ್ತು ಲಕ್ಷ್ಯ ಸೇನ್ ಭಾರತದ ಪರ ಪದಕ ಬೇಟೆಗೆ ಇಳಿಯಲಿದ್ದಾರೆ. ಐದು ಬಾರಿ ಪದಕ ಜಯಿಸಿರುವ 2019ರ ವಿಶ್ವ ಚಾಂಪಿಯನ್ ಪಿವಿ ಸಿಂಧು ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.
2011ರ ಬಳಿಕ ನಡೆದ ಎಲ್ಲ ಆವೃತ್ತಿಯಲ್ಲಿ ಭಾರತ ಆಟಗಾರರು ಕನಿಷ್ಠ ಒಂದು ಪದಕವನ್ನಾದರೂ ಜಯಿಸಿದ್ದಾರೆ. ಇದುವರೆಗೆ 1 ಚಿನ್ನ,4 ಬೆಳ್ಳಿ ಹಾಗೂ 8 ಕಂಚಿನ ಪದಕಗಳೊಂದಿಗೆ ಒಟ್ಟು 13 ಪದಕ ಸಾಧನೆ ಮಾಡಿದೆ. ಒಲಿಂಪಿಕ್ಸ್ ಹೊರತುಪಡಿಸಿ ಪ್ರತಿವರ್ಷ ನಡೆಯಲಿರುವ ಪ್ರಮುಖ ಬ್ಯಾಡ್ಮಿಂಟನ್ ಟೂರ್ನಿ ಇದಾಗಿದೆ. 1983ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರಕಾಶ್ ಪಡುಕೋಣೆ ಪದಕ ಗೆದ್ದ ಮೊದಲ ಭಾರತೀಯರಾಗಿದ್ದರೆ.
ಕಳೆದ ಆವೃತ್ತಿಯಲ್ಲಿ ಗೈರಾಗಿದ್ದ ಪಿವಿ ಸಿಂಧು ಈ ಬಾರಿ ಟೂರ್ನಿಯಲ್ಲಿ ಮರಳಿ ಕಣಕ್ಕಿಳಿಯಲಿದ್ದಾರೆ. 2017 ಮತ್ತು 2018ರಲ್ಲಿ ಬೆಳ್ಳಿ ಪದಕ ಮತ್ತು 2013 ಮತ್ತು 2014ರಲ್ಲಿ ಕಂಚಿನ ಪದಕ ಗೆದ್ದಿರುವ ಸಿಂಧುಗೆ ಮೊದಲ ಸುತ್ತಿನಲ್ಲಿ ಬೈ ಲಭಿಸಿದ್ದು, ಜಪಾನ್‌ನ ನೊಜೊಮಿ ಒಕುಹರಾ ಮತ್ತು ವಿಯೆಟ್ನಾಂನ ಥುಯ್ ಲಿನ್ ನ್ಗುಯೆನ್ ನಡುವಿನ ವಿಜೇತರನ್ನು ಎರಡನೇ ಸುತ್ತಿನಲ್ಲಿ ಎದುರಿಸಲಿದ್ದಾರೆ.
2023ರಲ್ಲಿ ಇಂಡೋನೇಷ್ಯಾ ಓಪನ್, ಏಷ್ಯನ್ ಚಾಂಪಿಯನ್‌ಷಿಪ್, ಸ್ವಿಸ್ ಓಪನ್ ಮತ್ತು ಕೊರಿಯಾ ಓಪನ್‌ನಲ್ಲಿ ಚಾಂಪಿಯನ್ ಆಗುವ ಮೂಲಕ ಭರ್ಜರಿ ಾರ್ಮ್‌ನಲ್ಲಿರುವ ಸಾತ್ವಿಕ್- ಚಿರಾಗ್ ಮೇಲೆ ಈ ಬಾರಿ ಹೆಚ್ಚಿನ ನಿರೀಕ್ಷೆ ಇದೆ. ಟೂರ್ನಿಯ ಎರಡನೇ ಶ್ರೇಯಾಂಕಿತ ಜೋಡಿ ಮೊದಲ ಸುತ್ತಿನಲ್ಲಿ ಬೈ ಪಡೆದಕೊಂಡಿದೆ. ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಸೆಮಿಫೈನಲಿಸ್ಟ್ ಆಗಿದ್ದ ಮಹಿಳಾ ಡಬಲ್ಸ್ ಜೋಡಿ ತ್ರಿಸಾ ಜೋಲಿ -ಗಾಯತ್ರಿ ಗೋಪಿಚಂದ್ ಕೂಡ ಬೈ ಪಡೆದಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ 2021ರ ಬೆಳ್ಳಿ ಪದಕ ವಿಜೇತ ಶ್ರೀಕಾಂತ್, ಕಂಚು ಜಯಿಸಿದ್ದ ಲಕ್ಷ್ಯ ಸೇನ್ ಜತೆಗೆ ಹಾಲಿ ಋತುವಿನಲ್ಲಿ ಉತ್ತಮ ಲಯದಲ್ಲಿರುವ ಪ್ರಣಯ್ ಈ ಬಾರಿ ಪದಕ ಗೆಲ್ಲುವ ಹಂಬದಲ್ಲಿದ್ದಾರೆ. 2021 ಮತ್ತು 2022ರ ಆವೃತ್ತಿಯ ಕ್ವಾರ್ಟರ್‌ೈನಲ್‌ನಲ್ಲಿ ಪ್ರಣಯ್ ನಿರಾಸೆ ಕಂಡಿದ್ದರು. ಮಲೇಷ್ಯಾ ಮಾಸ್ಟರ್ಸ್ ಚಾಂಪಿಯನ್ ಆದ ಬಳಿಕ ವಿಶ್ವ ಬ್ಯಾಡ್ಮಿಂಟನ್ ಟೂರ್ನಿಗೆ ಮುನ್ನ ನಡೆದ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ೈನಲ್‌ಗೇರಿದ್ದ ಪ್ರಣಯ್ ಆತ್ಮವಿಶ್ವಾಸ ವೃದ್ಧಿಸಿಕೊಂಡಿದ್ದಾರೆ. ಮೊದಲ ಸುತ್ತಿನಲ್ಲಿ ಫಿನ್ಲೆಂಡ್‌ನ ಕ್ಯಾಲೆ ಕೊಲ್ಜೊನೆನ್ ಅವರನ್ನು ಎದುರಿಸಲಿದ್ದಾರೆ. ಲಕ್ಷ್ಯ ಸೇನ್ ಆರಂಭಿಕ ಸುತ್ತಿನಲ್ಲಿ ಜಾರ್ಜ್ ಜೂಲಿಯನ್ ಪೌಲ್ ಎದುರು ಸೆಣಸಲಿದ್ದಾರೆ. ಕೆ.ಶ್ರೀ ಕಾಂತ್ ಜಪಾನ್‌ನ ವಿಶ್ವ ನಂ.15ಕೆಂಟಾ ನಿಶಿಮೊಟೊ ವಿರುದ್ಧ ಸೆಣಸಲಿದ್ದಾರೆ. ಅಶ್ವಿನಿ ಭಟ್ ಕೆ-ಶಿಖಾ ಗೌತಮ್, ರೋಹನ್ ಕಪೂರ್-ಎನ್.ಸಿಕ್ಕಿ ರೆಡ್ಡಿ ಮತ್ತು ವೆಂಕಟ್ ಪ್ರಸಾದ್-ಜೂಹಿ ದೇವಾಂಗನ್ ಕಣದಲ್ಲಿರುವ ಇತರ ಭಾರತೀಯರಾಗಿದ್ದಾರೆ.