ಇಂದಿನಿಂದ ಕಾಮನ್ವೆಲ್ತ್​ ಕ್ರೀಡಾಹಬ್ಬ; 22ನೇ ಆವೃತ್ತಿಗೆ ಬರ್ಮಿಂಗ್​​ಹ್ಯಾಂ ಸಜ್ಜು

cwg web2
Published on

ಬರ್ಮಿಂಗ್​ಹ್ಯಾಂ: ಕಾಮನ್ವೆಲ್ತ್​ ರಾಷ್ಟ್ರಗಳ ಮಹಾ ಕ್ರೀಡಾ ಹಬ್ಬಕ್ಕೆ ಇಂಗ್ಲೆಂಡ್​ ಸಜ್ಜಾಗಿದೆ. ಕರೊನಾ ವೈರಸ್​ ಹಾವಳಿಯ ನಡುವೆ ಟೋಕಿಯೊ ಒಲಿಂಪಿಕ್ಸ್​ ಆಯೋಜನೆಯ ಬಳಿಕ ಮತ್ತೊಂದು ಪ್ರತಿಷ್ಠಿತ ಕ್ರೀಡಾಕೂಟಕ್ಕೆ ವೇದಿಕೆ ಸಿದ್ಧಗೊಂಡಿದ್ದು, ಗುರುವಾರ ನಡೆಯಲಿರುವ ವರ್ಣರಂಜಿತ ಸಮಾರಂಭದೊಂದಿಗೆ 12 ದಿನಗಳ ಕ್ರೀಡಾಕೂಟಕ್ಕೆ ಚಾಲನೆ ಸಿಗಲಿದೆ. ಇತ್ತೀಚೆಗಿನ ಕಾಮನ್ವೆಲ್ತ್​ ಗೇಮ್ಸ್​ ಆವೃತ್ತಿಗಳಲ್ಲಿ ಭರ್ಜರಿ ನಿರ್ವಹಣೆಯೊಂದಿಗೆ ಮಿಂಚುತ್ತಿದ್ದ ಭಾರತ ಈ ಬಾರಿ ಶೂಟಿಂಗ್​ ಸ್ಪರ್ಧೆ ಇಲ್ಲದೆ ಹಿನ್ನಡೆ ಎದುರಿಸಿದೆ. ಅದರ ನಡುವೆಯೂ ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್​ನಲ್ಲಿ ತೋರಿದ ಸರ್ವಶ್ರೇಷ್ಠ ನಿರ್ವಹಣೆ ಭಾರತಕ್ಕೆ ಹುಮ್ಮಸ್ಸು ತುಂಬಿದೆ. ಕುಸ್ತಿ, ಬಾಕ್ಸಿಂಗ್​, ವೇಟ್​ಲಿಫ್ಟಿಂಗ್​, ಬ್ಯಾಡ್ಮಿಂಟನ್​, ಅಥ್ಲೆಟಿಕ್ಸ್​, ಟೇಬಲ್​ ಟೆನಿಸ್​ ಮತ್ತು ಸ್ಕಾ$$$್ವಷ್​ನಲ್ಲಿ ಹೆಚ್ಚಿನ ಪದಕ ಬಾಚಿಕೊಳ್ಳುವತ್ತ ಭಾರತ ಗಮನ ಹರಿಸಲಿದೆ.

111 ಪುರುಷರು ಮತ್ತು 104 ಮಹಿಳೆಯರ ಸಹಿತ ಭಾರತ ಒಟ್ಟು 215 ಕ್ರೀಡಾಪಟುಗಳ ತಂಡದೊಂದಿಗೆ ಕಣಕ್ಕಿಳಿಯಲಿದ್ದು, 16 ಕ್ರೀಡೆಗಳಲ್ಲಿ ಸ್ಪರ್ಧಿಸಲಿದೆ. ತವರಿನಲ್ಲಿ ನಡೆದ ದೆಹಲಿ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ 38 ಚಿನ್ನ, 27 ಬೆಳ್ಳಿ, 36 ಕಂಚಿನ ಸಹಿತ 101 ಪದಕ ಜಯಿಸಿದ್ದು ಕೂಟದ ಇತಿಹಾಸದಲ್ಲಿ ಭಾರತದ ಸರ್ವಶ್ರೇಷ್ಠ ನಿರ್ವಹಣೆಯಾಗಿದೆ. ಆದರೆ ಶೂಟಿಂಗ್​ ಕ್ರೀಡೆಯ ಗೈರಿನಲ್ಲಿ ಭಾರತ ಈ ಸಲವೂ ಅದನ್ನು ಹಿಮ್ಮೆಟ್ಟಿಸುವುದು ಕಠಿಣವೆನಿಸಿದೆ. ಹಿಂದಿನ 2018ರ ಗೋಲ್ಡ್​ಕೋಸ್ಟ್​ ಗೇಮ್ಸ್​ನಲ್ಲಿ ಭಾರತ 26 ಚಿನ್ನ, 20 ಬೆಳ್ಳಿ ಮತ್ತು 20 ಕಂಚಿನ ಸಹಿತ ಒಟ್ಟು 66 ಪದಕ ಜಯಿಸಿತ್ತು. ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್​ನಲ್ಲಿ 1 ಚಿನ್ನ, 2 ಬೆಳ್ಳಿ, 4 ಕಂಚಿನ ಸಹಿತ 7 ಪದಕ ಗೆದ್ದಿದ್ದ ಶ್ರೇಷ್ಠ ನಿರ್ವಹಣೆ ಭಾರತಕ್ಕೆ ಸ್ಫೂರ್ತಿ ತುಂಬಿದೆ.

22ನೇ ಕಾಮನ್ವೆಲ್ತ್​ ಗೇಮ್ಸ್​

72 ದೇಶಗಳು

5,054 ಕ್ರೀಡಾಪಟುಗಳು

20 ಕ್ರೀಡೆಗಳು

280 ಸ್ವರ್ಣ ಸ್ಪರ್ಧೆಗಳು

12 ದಿನಗಳು

15 ಕ್ರೀಡಾಂಗಣಗಳು

215 ಭಾರತದ ಸ್ಪರ್ಧಿಗಳು

ಪಿವಿ ಸಿಂಧು ಧ್ವಜಧಾರಿ

ನೀರಜ್​ ಚೋಪ್ರಾ ಗೈರಿನಲ್ಲಿ ಒಲಿಂಪಿಕ್ಸ್​ ಅವಳಿ ಪದಕ ವಿಜೇತ ಬ್ಯಾಡ್ಮಿಂಟನ್​ ತಾರೆ ಪಿವಿ ಸಿಂಧುಗೆ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗುವ ಅವಕಾಶ ಒಲಿದಿದೆ. 2018ರ ಗೋಲ್ಡ್​ ಕೋಸ್ಟ್​ ಕಾಮನ್ವೆಲ್ತ್​ ಗೇಮ್ಸ್​ನಲ್ಲೂ ಅವರು ಭಾರತದ ಧ್ವಜಧಾರಿಯಾಗಿದ್ದರು. ವೇಟ್​ಲ್ಟಿರ್​ ಮೀರಾಬಾಯಿ ಚಾನು ಮತ್ತು ಬಾಕ್ಸರ್​ ಲವ್ಲಿನಾ ಬೋಗೋರ್ಹೈನ್​ರನ್ನೂ ಧ್ವಜಧಾರಿಯಾಗಲು ಪರಿಗಣಿಸಲಾಯಿತಾದರೂ, ಅಂತಿಮವಾಗಿ ಮತ್ತೆ ಸಿಂಧುಗೆ ಅವಕಾಶ ಲಭಿಸಿತು. ಆರಂಭೋತ್ಸವದ ಪಥ ಸಂಚಲನದಲ್ಲಿ ಭಾರತದಿಂದ ಗರಿಷ್ಠ 164 ಮಂದಿ ಭಾಗವಹಿಸಲು ಅವಕಾಶ ಲಭಿಸಿದೆ ಎಂದು ಭಾರತ ತಂಡದ ಚ್​ೀ ಡಿ ಮಿಷನ್​ ರಾಜೇಶ್​ ಭಂಡಾರಿ ತಿಳಿಸಿದ್ದಾರೆ.

ಪಣಕ್ಕಿರುವ ಒಟ್ಟು ಸ್ವರ್ಣ 280

ಅಥ್ಲೆಟಿಕ್ಸ್​: 58; ಬ್ಯಾಡ್ಮಿಂಟನ್​: 6; ಬಾಸ್ಕೆಟ್​ಬಾಲ್​: 4; ಬೀಚ್​ ವಾಲಿಬಾಲ್​: 2; ಬಾಕ್ಸಿಂಗ್​: 16

ಮಹಿಳಾ ಕ್ರಿಕೆಟ್​: 1; ಸೈಕ್ಲಿಂಗ್​: 26; ಡೈವಿಂಗ್​: 12; ಈಜು: 52; ಜಿಮ್ನಾಸ್ಟಿಕ್​: 20; ಹಾಕಿ: 2; ಜುಡೋ: 14; ಲಾನ್​ಬೌಲ್ಸ್​: 11; ನೆಟ್​ಬಾಲ್​: 1; ರಗ್ಬಿ ಸೆವೆನ್​: 2; ಸ್ಕಾ$್ವಷ್​: 5; ಟೇಬಲ್​ ಟೆನಿಸ್​: 11; ಟ್ರಯಥ್ಲಾನ್​: 5; ವೇಟ್​ಲಿಫ್ಟಿಂಗ್​: 16; ಪ್ಯಾರಾ ಪವರ್​ಲಿಫ್ಟಿಂಗ್​: 4; ಕುಸ್ತಿ: 12.

ಗೇಮ್ಸ್​ ಇತಿಹಾಸ

ಪ್ರತಿ 4 ವರ್ಷಕ್ಕೊಮ್ಮೆ ಆಯೋಜನೆಯಾಗುವ ಕಾಮನ್ವೆಲ್ತ್​ ಗೇಮ್ಸ್​ ಮೊದಲು ಆರಂಭವಾಗಿದ್ದು 1930ರಲ್ಲಿ. ಬ್ರಿಟಿಷ್​ ವಸಾಹತುಗಳಾಗಿದ್ದ ದೇಶಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತವೆ. ಸದ್ಯ 52 ಸದಸ್ಯ ರಾಷ್ಟ್ರಗಳಿದ್ದು ಕೂಟದಲ್ಲಿ 72 ದೇಶಗಳು ಭಾಗವಹಿಸುತ್ತಿವೆ. ಕೆನಡದ ಹ್ಯಾಮಿಲ್ಟನ್​ನಲ್ಲಿ ಮೊದಲ ಬಾರಿಗೆ ಈ ಕ್ರೀಡಾಕೂಟ ನಡೆದಿತ್ತು. 1930ರಿಂದ 1950ರವರೆಗೆ ಕೂಟವನ್ನು ಬ್ರಿಟಿಷ್​ ಎಂಪೈರ್​ ಗೇಮ್ಸ್​, 1954ರಿಂದ 66ರವರೆಗೆ ಬ್ರಿಟಿಷ್​ ಎಂಪೈರ್​ ಮತ್ತು ಕಾಮನ್ವೆಲ್ತ್​ ಗೇಮ್ಸ್​, 1970ರಿಂದ 74ರವರೆಗೆ ಬ್ರಿಟಿಷ್​ ಕಾಮನ್ವೆಲ್ತ್​ ಗೇಮ್ಸ್​ ಎಂದು ಕರೆಯಲಾಗುತ್ತಿತ್ತು. 1978ರಿಂದ ಕಾಮನ್ವೆಲ್ತ್​ ಗೇಮ್ಸ್​ ಎನ್ನುವ ಹೆಸರಿನಿಂದ ಕೂಟ ಗುರುತಿಸಿಕೊಂಡಿದೆ.

ಭಾರತದ ಸ್ವರ್ಣ ಆಕಾಂಗಳು

*ಪಿವಿ ಸಿಂಧು (ಬ್ಯಾಡ್ಮಿಂಟನ್​)

*ರವಿ ದಹಿಯಾ (ಕುಸ್ತಿ)

*ಮೀರಾಬಾಯಿ (ವೇಟ್​ಲಿಫ್ಟಿಂಗ್​)

*ಭಜರಂಗ್​ ಪೂನಿಯಾ (ಕುಸ್ತಿ)

*ಲವ್ಲಿನಾ ಬೋಗೋರ್ಹೈನ್​ (ಬಾಕ್ಸಿಂಗ್​)

*ಪುರುಷರ ಹಾಕಿ ತಂಡ

*ಮನಿಕಾ ಬಾತ್ರಾ (ಟೇಬಲ್​ ಟೆನಿಸ್​)

*ಲಕ್ಷ$್ಯ ಸೇನ್​ (ಬ್ಯಾಡ್ಮಿಂಟನ್​)

*ಕಿಡಂಬಿ ಶ್ರೀಕಾಂತ್​ (ಬ್ಯಾಡ್ಮಿಂಟನ್​)

*ನಿಖತ್​ ಜರೀನ್​ (ಬಾಕ್ಸಿಂಗ್​)

*ದೀಪಿಕಾ ಪಲ್ಲಿಕಲ್​ (ಸ್ಕಾ$$$್ವಷ್​)

ವರ್ಣರಂಜಿತ ಆರಂಭೋತ್ಸವ

ಅಲೆಕ್ಸಾಂಡರ್​ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿರುವ ವರ್ಣರಂಜಿತ ಸಮಾರಂಭದೊಂದಿಗೆ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದೆ. ನಿರ್ದೇಶಕ ಇಕ್ಬಾಲ್​ ಖಾನ್​ ಮಾರ್ಗದರ್ಶನದಲ್ಲಿ ಆರಂಭೋತ್ಸವ ಸಮಾರಂಭ ನಡೆಯಲಿದ್ದು, ರ್ಬಮಿಂಗ್​ಹ್ಯಾಂನ ಅದ್ಭುತ ವಿಶ್ವಾಸವನ್ನು ಪ್ರಸ್ತುತಪಡಿಸಲಿದೆ. ಡುರಾನ್​ ಡುರಾನ್​ ನ್ಯೂ ವೇವ್​ ಬ್ಯಾಂಡ್​ ಸಮಾರಂಭದ ಪ್ರಮುಖ ಆಕರ್ಷಣೆ. ಬ್ಲಾ$್ಯಕ್​ ಸಬ್ಬತ್​ ರಾಕ್​ ಬ್ಯಾಂಡ್​ನ ಟೋನಿ ಲೊಮ್ಮಿ ಕೂಡ ರ್ಯಾಪರ್​ ಸೊವೆಟೊ ಕಿಂಚ್​ ಜತೆ ಕಾರ್ಯಕ್ರಮ ನೀಡಲಿದ್ದಾರೆ.

*ಉದ್ಘಾಟನಾ ಸಮಾರಂಭ

ಎಲ್ಲಿ: ಅಲೆಕ್ಸಾಂಡರ್​ ಸ್ಟೇಡಿಯಂ, ರ್ಬಮಿಂಗ್​ಹ್ಯಾಂ

ಆರಂಭ: ರಾತ್ರಿ 11.30 (ಭಾರತೀಯ ಕಾಲಮಾನ)

ನೇರಪ್ರಸಾರ: ಸೋನಿ ಸ್ಪೋರ್ಟ್ಸ್​ ನೆಟ್​ವರ್ಕ್​, ಡಿಡಿ ಸ್ಪೋರ್ಟ್ಸ್​

ಬ್ರಿಟನ್​ನಲ್ಲಿ ಇನ್ನೂ ಏರದ ಬಿಸಿ

2012ರ ಲಂಡನ್​ ಒಲಿಂಪಿಕ್ಸ್​ ಬಳಿಕ ಬ್ರಿಟನ್​ನಲ್ಲಿ ನಡೆಯುತ್ತಿರುವ ಅತಿದೊಡ್ಡ ಕ್ರೀಡಾಕೂಟ ಇದಾಗಿದೆ. ಆದರೂ "ಬುಲ್​ ರಿಂಗ್​' ಖ್ಯಾತಿಯ ರ್ಬಮಿಂಗ್​ಹ್ಯಾಂ ನಗರದಲ್ಲಿ ಇನ್ನೂ ಕ್ರೀಡಾಕೂಟದ ಕಲರವ ದೊಡ್ಡ ಮಟ್ಟದಲ್ಲಿ ಕಾಣಿಸಿಲ್ಲ. ಸದ್ಯ ಇಂಗ್ಲೆಂಡ್​ನಲ್ಲಿ ಮಹಿಳೆಯರ ಯುರೋಕಪ್​ ನಡೆಯುತ್ತಿರುವುದು ಮತ್ತು ಆತಿಥೇಯ ತಂಡವೇ ೈನಲ್​ಗೇರಿರುವುದರಿಂದ ುಟ್​ಬಾಲ್​ ಬಗೆಗಿನ ಚರ್ಚೆಯೇ ಹೆಚ್ಚಾಗಿದೆ. 72 ದೇಶಗಳ 5 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ನಗರದಲ್ಲಿದ್ದರೂ, ಸ್ಥಳಿಯ ಪತ್ರಿಕೆಗಳಲ್ಲಿ ಕಾಮನ್ವೆಲ್ತ್​ ಗೇಮ್ಸ್​ ಬಗ್ಗೆ ಹೆಚ್ಚಿನ ವರದಿಗಳಿಲ್ಲ. ಆದರೆ 92 ವರ್ಷಗಳ ಇತಿಹಾಸ ಹೊಂದಿರುವ ಕ್ರೀಡಾಕೂಟ ಆರಂಭಗೊಂಡ ಬಳಿಕ ಸ್ಥಳಿಯ ಉತ್ಸಾಹ ಹೆಚ್ಚುವ ನಿರೀೆ ಇದೆ.

3ನೇ ಬಾರಿ ಇಂಗ್ಲೆಂಡ್​ ಆತಿಥ್ಯ

ಇಂಗ್ಲೆಂಡ್​ ಆತಿಥ್ಯದಲ್ಲಿ ಇದು 3ನೇ ಕಾಮನ್ವೆಲ್ತ್​ ಗೇಮ್ಸ್​ ಆಗಿದೆ. ಈ ಮುನ್ನ 1934 (ಲಂಡನ್​) ಮತ್ತು 2002ರಲ್ಲಿ (ಮ್ಯಾಂಚೆಸ್ಟರ್​) ನಡೆದಿತ್ತು. ಇದಲ್ಲದೆ ಕಳೆದ 2 ದಶಕಗಳಲ್ಲಿ ಬ್ರಿಟನ್​ನಲ್ಲಿ ಇದು 3ನೇ ಗೇಮ್ಸ್​ ಆಗಿದೆ. 2014ರಲ್ಲಿ ಸ್ಕಾಟ್ಲೆಂಡ್​ನ ಗ್ಲಾಸ್ಗೋದಲ್ಲಿ ನಡೆದಿತ್ತು. ಇನ್ನು ಕಳೆದ 2 ದಶಕಗಳಲ್ಲಿ ಬ್ರಿಟನ್​&ಆಸ್ಟ್ರೆಲಿಯಾ ಹೊರತಾಗಿ ಭಾರತ (2010) ಮಾತ್ರ ಈ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿದೆ. ಮೂಲ ಯೋಜನೆಯ ಪ್ರಕಾರ ದಣ ಆಫ್ರಿಕಾದ ಡರ್ಬನ್​ನಲ್ಲಿ ಈ ಕ್ರೀಡಾಕೂಟ ನಡೆಯಬೇಕಾಗಿತ್ತು. ಆದರೆ ಆರ್ಥಿಕ ಬಿಕ್ಕಟ್ಟಿನಿಂದಾಗಿ ಡರ್ಬನ್​ 2017ರಲ್ಲೇ ಹಿಂದೆ ಸರಿದಿತ್ತು.

ಕರೊನಾ ವೈರಸ್​ ಭಯವಿಲ್ಲ

ಕರೊನಾ ಭೀತಿಯ ನಡುವೆ ಟೋಕಿಯೊ ಒಲಿಂಪಿಕ್ಸ್​, ಬೀಜಿಂಗ್​ ಚಳಿಗಾಲದ ಒಲಿಂಪಿಕ್ಸ್​ ಮುಂತಾದ ದೊಡ್ಡ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಿದ ಬಳಿಕ ಕಾಮನ್ವೆಲ್ತ್​ ಗೇಮ್ಸ್​ ವೈರಸ್​ ಬಗ್ಗೆ ಹೆಚ್ಚಿನ ಭಯವಿಲ್ಲದೆ ನಡೆಯುತ್ತಿದೆ. ಕ್ರೀಡಾಕೂಟದಲ್ಲಿ ಪ್ರತಿದಿನ ಸುಮಾರು 1,200&1,400 ಕ್ರೀಡಾಪಟುಗಳಿಗೆ ಕೋವಿಡ್​&19 ಪರೀೆ ನಡೆಯುತ್ತಿದ್ದು, ಇದುವರೆಗೆ ಪ್ರತಿದಿನ ಒಂದು ಡಜನ್​ ಕ್ರೀಡಾಪಟುಗಳಷ್ಟೇ ಸೋಂಕಿತರಾಗಿರುವುದು ಪತ್ತೆಯಾಗುತ್ತಿದೆ. ಇದರ ನಡುವೆಯೂ ಭಾರತೀಯ ಕ್ರೀಡಾಪಟುಗಳಿಗೆ ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಂತೆ ಐಇಎ ಸೂಚಿಸಿದೆ. ಆದರೆ ಕರೊನಾ ಪಾಸಿಟಿವ್​ ಆದವರು ತಕ್ಷಣ ಸ್ಪರ್ಧೆಯಿಂದ ಹೊರಬೀಳುವುದಿಲ್ಲ. ಅವರ ಲಸಿಕೆ ದಾಖಲೆ ಮತ್ತು ವೈದ್ಯಕಿಯ ತಂಡ ನೀಡುವ ಮಾಹಿತಿ ಆಧರಿಸಿ ಭವಿಷ್ಯ ನಿರ್ಧಾರವಾಗಲಿದೆ.

ಮಹಿಳೆಯರ ಮೇಲುಗೈ

ಹಾಲಿ ಜಾಗತಿಕ ಕ್ರೀಡಾಕೂಟಗಳಲ್ಲಿ ಬಹುತೇಕ ಲಿಂಗ ಸಮಾನತೆ ದಾಖಲಾಗುತ್ತಿದ್ದರೆ, ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಈ ಬಾರಿ ಮಹಿಳೆಯರೇ ಮೇಲುಗೈ ಸಾಧಿಸುತ್ತಿದ್ದಾರೆ. ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚಿನ ಸ್ಪರ್ಧೆಗಳಿವೆ. ಟಿ20 ಕ್ರಿಕೆಟ್​ ಸ್ಪರ್ಧೆ ಮಹಿಳೆಯರಿಗಷ್ಟೆ ನಡೆಯುತ್ತಿದೆ. ಮಿಶ್ರ ವಿಭಾಗದಲ್ಲೂ 7 ಸ್ಪರ್ಧೆಗಳು ನಡೆಯುತ್ತಿವೆ. ಒಟ್ಟು 280 ಸ್ವರ್ಣ ಪದಕಗಳ ಪೈಕಿ 136 ಮಹಿಳೆಯರಿಗೆ ಮತ್ತು 134 ಪುರುಷರಿಗೆ ಪ್ರದಾನವಾಗಲಿದೆ. 10 ಪದಕ ಮಿಶ್ರ ವಿಭಾಗದಲ್ಲಿ ನಿರ್ಧಾರವಾಗಲಿದೆ.

ಇನ್ನು ಸಾಮಾನ್ಯರ ಜತೆಯಲ್ಲೇ ಅಂಗವಿಕಲರ ಪ್ಯಾರಾ ಸ್ಪರ್ಧೆಗಳೂ ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net