ಆರ್‌ಸಿಬಿ ತಂಡದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ -ವಿನಿ ರಾಮನ್ ದಂಪತಿಗೆ ಗಂಡು ಮಗು

New-Project-13-1
Published on

ಬೆಂಗಳೂರು: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಲ್ರೌಂಡರ್ ಹಾಗೂ ಐಪಿಎಲ್‌ನ ಆರ್‌ಸಿಬಿ ತಂಡದ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್ ದಂಪತಿಗೆ ಶುಕ್ರವಾರ ಗಂಡು ಮಗು ಜನಿಸಿದೆ.

ಮಗುವಿಗೆ ಲೋಗನ್ ಮೇವ್‌ರಿಕ್ ಮ್ಯಾಕ್ಸ್‌ವೆಲ್ ಎಂದು ಹೆಸರಿಡಲಾಗಿದೆ. ಮ್ಯಾಕ್ಸ್‌ವೆಲ್ ಮತ್ತು ಭಾರತೀಯ ಮೂಲದ ವಿನಿ ರಾಮನ್ ದಂಪತಿಗೆ ಗಂಡು ಮಗು ಜನಿಸಿರುವ ವಿಷಯವನ್ನು ಅರ್‌ಸಿಬಿ ್ರಾಂಚೈಸಿ ತನ್ನ ಅಧಿಕೃತ ಸಾಮಾಜಿ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದೆ. ವಿನಿ ರಾಮನ್ ಮೊದಲ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಿಂದ ಮ್ಯಾಕ್ಸ್‌ವೆಲ್ ಹೊರಗುಳಿದಿದ್ದರು.

ಕಳೆದ ವರ್ಷ ಮಾರ್ಚ್‌ನಲ್ಲಿ ಮ್ಯಾಕ್ಸ್‌ವೆಲ್-ವಿನಿ ರಾಮನ್ ಕ್ರಿಶ್ಚಿಯನ್ ಹಾಗೂ ಹಿಂದು ಸಂಪ್ರದಾಯದಂತೆ ವಿವಾಹವಾಗಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿರವುದಾಗಿ ದಂಪತಿಗಳು ಮೇನಲ್ಲಿ ಖಚಿತಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net