VIDEO| ನಟಿಯರೊಂದಿಗೆ ಸ್ಪಿನ್​ ಮಾಂತ್ರಿಕ ಚಹಾಲ್​ ನಗೆಯಲ್ಲಿ ತೇಲಿಸೋ ಡ್ಯಾನ್ಸ್​: ಒಮ್ಮೆ ನೋಡಿದರೆ ನಗುವುದು ಖಂಡಿತ!

Chahal Dance
Published on

ನವದೆಹಲಿ: ಯಜುವೇಂದ್ರ ಚಹಾಲ್​ ಟೀಮ್​​ ಇಂಡಿಯಾದ ಉತ್ತಮ ಸ್ಪಿನ್​ ಬೌಲರ್​ ಎನ್ನುವುದರಲ್ಲಿ ಎಷ್ಟು ಸತ್ಯವೋ ಒಬ್ಬ ಸೂಪರ್​ ಎಂಟರ್ಟೈನರ್ ಎಂಬುದು ಅಷ್ಟೇ ಸತ್ಯ. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಚಹಾಲ್​ ಶೇರ್​ ಮಾಡಿಕೊಂಡಿರುವ ಫನ್ನಿ ವಿಡಿಯೋ ಅದಕ್ಕೆ ತಾಜಾ ಉದಾಹರಣೆಯಾಗಿದೆ.​

ತಮ್ಮ ಟಿಕ್​ಟಾಕ್​ ಖಾತೆಯಲ್ಲಿ ಚಹಾಲ್​ ವಿಡಿಯೋ ಶೇರ್​ ಮಾಡಿಕೊಂಡಿದ್ದು, ವಿಡಿಯೋದಲ್ಲಿ ಬ್ರಿಟೀಷ್​ ಏಷ್ಯನ್​ ನಟಿ ರಮೀತ್​ ಸಂಧು ಮತ್ತು ಮಾಡೆಲ್​ ಎಲಿಕ್ಸಿರ್​ ನಹಾರ್​ ಜತೆ ಚಹಾಲ್​ ಬಿಂದಾಸ್​ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಾವಿರಾರು ಲೈಕ್ಸ್​ಗಳನ್ನು ಗಿಟ್ಟಿಸಿಕೊಂಡಿದೆ.

ಚಹಾಲ್​ ಈ ಮುಂಚೆ ತನ್ನ ಸಹ ಆಟಗಾರರೊಂದಿಗೆ ಡ್ಯಾನ್ಸ್​ ಮಾಡಿದ್ದ ವಿಡಿಯೋವನ್ನು ತಮ್ಮ ಟಿಕ್​ಟಾಕ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದರು. ಅದನ್ನು ಕೂಡ 33 ಮಿಲಿಯನ್​ ಮಂದಿ ವೀಕ್ಷಣೆ ಮಾಡಿದ್ದರು.

ಇನ್ನು ಕ್ರಿಕೆಟ್​ ವಿಚಾರಕ್ಕೆ ಬಂದರೆ, ನ್ಯೂಜಿಲೆಂಡ್​ ವಿರುದ್ಧ ಟಿ20 ಸರಣಿಯಲ್ಲಿ ಟೀಮ್​ ಇಂಡಿಯಾ ಗೆದ್ದರೂ ಚಹಾಲ್​ ಕಮಾಲ್​ ಮಾಡುವಲ್ಲಿ ಯಶಸ್ವಿಯಾಗಲಿಲ್ಲ. ಕುಲದೀಪ್​ ಯಾದವ್​ ಬದಲಾಗಿ ಎಲ್ಲ ಐದು ಪಂದ್ಯಗಳಲ್ಲೂ ಚಹಾಲ್​ ಆಡಿದರೂ ಕೇವಲ 3 ವಿಕೆಟ್​​ಗೆ ತೃಪ್ತಿಪಟ್ಟರು.

ಕಿವೀಸ್​ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ವಿಕೆಟ್​ ಪಡೆಯುವಲ್ಲಿ ಚಹಾಲ್​ ಎಡವಿದರೂ ಉಳಿದ ಎರಡು ಪಂದ್ಯಗಳಿಂದ ಆರು ವಿಕೆಟ್​ಗಳನ್ನು ಪಡೆದರು. ಆದರೆ, ಏಕದಿನ ಸರಣಿಯನ್ನು ಟೀಮ್​ ಇಂಡಿಯಾ ಕೈಚೆಲ್ಲಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net