ಹೆತ್ತವರಿಂದ ಪ್ರತ್ಯೇಕವಾಗಿ ಧನಶ್ರೀ ಜತೆ ವಾಸಿಸಲು ಚಹಲ್​ಗೆ ಇಷ್ಟವಿರಲಿಲ್ಲ! ಹೀಗಾಗಿ ಡಿವೋರ್ಸ್ ಆಯ್ತು..Chahal and Dhanashree Verma divorce

Dhanashree Verma
Published on

ಮುಂಬೈ: ( Chahal and Dhanashree Verma divorce ) ಭಾರತದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ದೂರವಾಗಿದ್ದಾರೆ ಎನ್ನುವ ಸುದ್ದಿ ಇತ್ತು. ಈ ಜೋಡಿ ಮಾರ್ಚ್ 20ರಂದು ಮುಂಬೈನ ಬಾಂದ್ರಾದಲ್ಲಿರುವ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನವನ್ನು ಪಡೆದುಕೊಂಡು ದೂರವಾಗಿದ್ದಾರೆ. ಆದರೆ ಈ ಜೋಡಿ ಯಾಕೆ ದೂರವಾಯ್ತು ಎನ್ನುವ ಪ್ರಶ್ನೆ ಹಲವರಿಗೆ ಇತ್ತು. ಈ ಕುರಿತಾಗಿ ಪತ್ರಕರ್ತ ವಿಕ್ಕಿ ಲಾಲ್ವಾನಿ ಮಾತನಾಡಿ ಕೆಲವು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆಂದು ಮಾಧ್ಯವೊಂದು ವರದಿ ಮಾಡಿದೆ.

ಪತ್ರಕರ್ತ ವಿಕ್ಕಿ ಲಾಲ್ವಾನಿ ಅವರ ಮಾಹಿತಿ ಪ್ರಕಾರ, ಚಹಲ್ ಮತ್ತು ಧನಶ್ರೀ ವರ್ಮಾ ಇಬ್ಬರೂ ತಮ್ಮ ವಾಸಸ್ಥಳದ ಬಗ್ಗೆ ಒಮ್ಮತಕ್ಕೆ ಬಂದಿರಲಿಲ್ಲ. ಈ ಕಾರಣದಿಂದಾಗಿ ಅವರು ವಿಚ್ಛೇದನ ಪಡೆಯಲು ನಿರ್ಧರಿಸಿದರು.

ಡಿಸೆಂಬರ್ 2020 ರಲ್ಲಿ ಮದುವೆಯಾದ ನಂತರ ಧನಶ್ರೀ ಹರಿಯಾಣದಲ್ಲಿ ಚಹಲ್ ಮತ್ತು ಅವರ ಪೋಷಕರೊಂದಿಗೆ ವಾಸಿಸಲು ತೆರಳಿದ್ದರು. ಆದರೆ, ಕೆಲವು ದಿನಗಳ ನಂತರ ಧನಶ್ರೀ ಮುಂಬೈನಲ್ಲೇ ಮನೆ ಮಾಡಬೇಕು..ಮುಂಬೈನಲ್ಲಿ ಉಳಿಯ ಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ ಯುಜ್ವೇಂದ್ರ ಚಹಲ್​ ಅವರಿಗೆ ಇಷ್ಟವಿರಲಿಲ್ಲ. ಚಹಲ್ ತನ್ನ ಪತ್ನಿಯು ಹರಿಯಾಣದಲ್ಲಿರುವ ತಾಯಿಯೊಂದಿಗೆ ಇರಬೇಕೆಂದು ಆಗ್ರಹಿಸಿದ್ದರು. ಆದರೆ ಇದಕ್ಕೆ ಧನಶ್ರೀ ವರ್ಮಾ ಸಿದ್ಧರಿರಲಿಲ್ಲ. ಇತ್ತ ತನ್ನ ಹೆತ್ತವರಿಂದ ಪ್ರತ್ಯೇಕವಾಗಿ ವಾಸಿಸಲು ಯುಜ್ವೇಂದ್ರ ಚಹಲ್ ಸಹ ಸಿದ್ಧನಾಗಿರಲಿಲ್ಲ. ಇದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಲಾರಂಭಿಸಿದೆ. ಈ ಭಿನ್ರಾಭಿಪ್ರಾಯವೇ ಡೈವೋರ್ಸ್ ಹಂತಕ್ಕೆ ಹೋಗಿದೆ ಎಂದು ವಿಕ್ಕಿ ಲಾಲ್ವಾನಿ ಹೇಳಿಕೊಂಡಿದ್ದಾರೆ.

ನೃತ್ಯ ಕಾರ್ಯಕ್ರಮಗಳು ಮತ್ತು ಇತರ ತುರ್ತು ಕೆಲಸಗಳ ಸಮಯದಲ್ಲಿ ಅವಳು ಹರಿಯಾಣದಿಂದ ಮುಂಬೈಗೆ ಹಿಂದಕ್ಕೆ ಮತ್ತು ಮುಂದಕ್ಕೆ ಪ್ರಯಾಣಿಸುತ್ತಾಳೆ. ಈ ಸಂದರ್ಭದಲ್ಲಿ ಧನಶ್ರೀ ಚಾಹಲ್ ಅವರನ್ನು ಮುಂಬೈನಲ್ಲೇ ಇರುವಂತೆ ಕೇಳಿಕೊಂಡರು. ಆದರೆ ಚಾಹಲ್ ಅದಕ್ಕೆ ಒಪ್ಪಲಿಲ್ಲ. ಅವನು ತನ್ನ ಹೆತ್ತವರೊಂದಿಗೆ ಹರಿಯಾಣದಲ್ಲಿಯೇ ಇರಲು ಬಯಸುವುದಾಗಿ ಹೇಳಿದನು. ಈ ವಿಷಯ ಇಬ್ಬರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು.

ಮಾರ್ಚ್ 20 ರಂದು ಯುಜ್ವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ವಿಚ್ಛೇದನ ಪಡೆದಿದ್ದಾರೆ. ಈ ವಿಚ್ಛೇದನದ ಅಡಿಯಲ್ಲಿ, ಚಹಲ್​ ತನ್ನ ಮಾಜಿ ಪತ್ನಿಗೆ ಅವರಿಗೆ 4.75 ಕೋಟಿ ರೂ.ಗಳನ್ನು ಪಾವತಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net