ವಿಚ್ಛೇದನ ವರದಿಗೆ ಪುಷ್ಠಿ ನೀಡಿದ ಚಾಹಲ್!: ಪತ್ನಿ ಧನಶ್ರೀ ಜತೆಗಿನ ಎಲ್ಲ ಚಿತ್ರಗಳು ಡಿಲೀಟ್

New Project
Published on

ಮುಂಬೈ: ಕಳೆದ ವರ್ಷಾಂತ್ಯದಲ್ಲಿ ಸುದ್ದಿಯಾಗಿದ್ದ ಟೀಮ್ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಹಾಗೂ ಪತ್ನಿ ಧನಶ್ರೀ ವರ್ಮ ನಡುವಿನ ವಿಚ್ಛೇದನ ವರದಿಗಳಿಗೆ ಹಾಲಿ ವರ್ಷ ಮತ್ತಷ್ಟು ಪುಷ್ಠಿ ದೊರೆತಿದೆ. ದಂಪತಿ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರರನ್ನು ಅನ್‌ಾಲೋ ಮಾಡಿ ವಿಚ್ಛೇದನ ವರದಿಗೆ ಹೆಚ್ಚಿನ ಬಲ ತುಂಬಿದ್ದಾರೆ.

2023ರಲ್ಲಿಯೇ ಧನಶ್ರೀ ವರ್ಮ ಇನ್‌ಸ್ಟಾಗ್ರಾಂನಲ್ಲಿ ‘ಚಾಹಲ್’ ಎಂಬ ಹೆಸರನ್ನು ತೆಗದುಹಾಕಿದಾಗ ವಿಚ್ಛೇದನ ವರದಿಗಳು ಮೊದಲ ಬಾರಿಗೆ ಹರಿದಾಡಿದವು. ಬಳಿಕ ಈ ವರದಿಗಳನ್ನು ಚಾಹಲ್ ನಿರಾಕರಿಸಿದ್ದರು. ಆದರೆ ಈ ಬಾರಿ ಸಾಮಾಜಿಕ ಜಾಲತಾಣದಲ್ಲಿ ಪತ್ನಿಯ ಅಧಿಕೃತ ಖಾತೆಯನ್ನು ಅನ್‌ಾಲೋ ಮಾಡಿರುವ ಚಾಹಲ್, ಇನ್‌ಸ್ಟಾಗ್ರಾಂನಲ್ಲಿ ಧನಶ್ರೀ ಜತೆಗಿನ ಎಲ್ಲ ೆಟೊಗಳನ್ನು ತೆಗೆದುಹಾಕಿದ್ದಾರೆ. ಆದರೆ ಚಾಹಲ್ ಜತೆಗಿನ ೆಟೊಗಳನ್ನು ಧನಶ್ರೀ ಡಿಲೀಟ್ ಮಾಡಿಲ್ಲ.

‘ದಂಪತಿಗಳ ನಡುವೆ ವಿಚ್ಛೇದನ ಅನಿವಾರ್ಯವಾಗಿದ್ದು, ಇವರಿಬ್ಬರು ವೈಯಕ್ತಿಕ ಜೀವನವನ್ನು ಪ್ರತ್ಯೇಕವಾಗಿ ಮುಂದುವರಿಸಲು ತೀರ್ಮಾನಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿಚ್ಛೇದನದ ಬಗ್ಗೆ ಇವರಿಬ್ಬರು ಅಧಿಕೃತವಾಗಿ ತಿಳಿಸಲಿದ್ದಾರೆ’ ಎಂದು ಆಪ್ತ ವಲಯದ ಮೂಲಗಳು ತಿಳಿಸಿವೆ. ಆದರೆ ಇವರಿಬ್ಬರ ದಾಂಪತ್ಯದ ಬಿರುಕಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಜತೆಗೆ ಇತ್ತೀಚಿನ ದಿನಗಳಲ್ಲಿ ಚಾಹಲ್ ಮತ್ತು ಧನಶ್ರೀ ಇಬ್ಬರೂ ಜತೆಯಾಗಿರುವ ೆಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿಲ್ಲ. ಸದ್ಯಭಾರತ ತಂಡದಿಂದ ಹೊರಬಿದ್ದಿರುವ ಚಾಹಲ್, ಕಳೆದ ನವೆಂಬರ್‌ನಲ್ಲಿ ನಡೆದ ಐಪಿಎಲ್ ಆಟಗಾರರ ಮೆಗಾ ಹರಾಜಿನಲ್ಲಿ ಬರೋಬ್ಬರಿ ₹18 ಕೋಟಿಗೆ ಪಂಜಾಬ್ ಕಿಂಗ್ಸ್ ತಂಡ ಸೇರಿದ್ದರು.

ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಮೂರು ತಿಂಗಳು ಮನೆಯಲ್ಲಿ ಕುಳಿತುಕೊಳ್ಳುವ ಬದಲು ಡಾನ್ಸ್ ಕಲಿಯುವ ಬಗ್ಗೆ ಒಲವು ಬೆಳೆಸಿಕೊಂಡ ಚಾಹಲ್, ಸಾಮಾಜಿಕ ಜಾಲತಾಣದಲ್ಲಿ ಮೊದಲು ಧನಶ್ರೀಗೆ ನೃತ್ಯ ತರಬೇತಿ ನೀಡುವಂತೆ ಸಂದೇಶ ಕಳುಹಿಸಿದ್ದರು. ನಂತರ ಧನಶ್ರೀ ಅವರಿಂದ ಚಾಹಲ್ ತರಬೇತಿ ಪಡೆದುಕೊಂಡು ಆಪ್ತರಾಗಿದ್ದರು. ಬಳಿಕ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ 2020ರ ಡಿಸೆಂಬರ್‌ನಲ್ಲಿ ವಿವಾಹವಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net