VIDEO|ಬರ್ತ್ ಡೇಗೆ ವಿಶ್​ ಮಾಡುವಾಗಲೂ ಹರ್ಭಜನ್​ ಕಾಲೆಳೆದ ಯುವಿ..!

harbhajan singh and yuvi.......
Published on

ಬೆಂಗಳೂರು: ರಾಷ್ಟ್ರೀಯ ತಂಡದಲ್ಲಿ ಸ್ಪಿನ್​ ಬೌಲಿಂಗ್​ ಮೂಲಕ ತಮ್ಮದೇ ಚಾಪು ಮೂಡಿಸಿದ್ದ ಹರ್ಭಜನ್​ ಸಿಂಗ್​ ಶುಕ್ರವಾರ 40ನೇ ವರ್ಷಕ್ಕೆ ಕಾಲಿಟ್ಟರು. ಕೇವಲ ಕ್ರಿಕೆಟ್​ ವಲಯ ಅಲ್ಲದೆ, ವಿವಿಧ ಕ್ಷೇತ್ರ  ಗಣ್ಯರು, ಸೆಲೆಬ್ರಿಟಿಗಳು ಬೆಳಗ್ಗೆಯಿಂದಲೇ ಸಾಮಾಜಿಕ ಜಾಲತಾಣಗಳ ಮೂಲಕ ಹರ್ಭಜನ್​ ಸಿಂಗ್​ ಹುಟ್ಟುಹಬ್ಬಕ್ಕೆ ಶುಭಕೋರುತ್ತಿದ್ದಾರೆ. ಬಜ್ಜಿ ಆತ್ಮೀಯ ಗೆಳೆಯ ಮಾಜಿ ಆಲ್ರೌಂಡರ್​ ಯುವರಾಜ್​ ಸಿಂಗ್​ ಮಾತ್ರ ಇದಕ್ಕೆ ವಿಭಿನ್ನ. ನಿಮ್ಮ 40 ಅಥವಾ 47ನೇ ಹುಟ್ಟುಹಬ್ಬಕ್ಕೆ ಶುಭಾಶಯಗಳು ಪಾಜಿ ಎಂದು ವಿಶ್​ ಮಾಡುವ ಮೂಲಕ ಕಾಲೆಳೆದಿದ್ದಾರೆ.

2000 ಇಸವಿಯಿಂದಲೂ ಯುವರಾಜ್​ ಸಿಂಗ್​ - ಹರ್ಭಜನ್​ ಸಿಂಗ್​ ಆತ್ಮೀಯ ಸ್ನೇಹಿತರು ಎಂಬುದರಲ್ಲಿ ಎರಡು ಮಾತಿಲ್ಲ. ಒಬ್ಬರಿಗೊಬ್ಬರು ಕಾಲೆಳೆಯುತ್ತಾ, ತಮಾಷೆ ಮಾಡುತ್ತಾ ಹರಟುತ್ತಾರೆ. ಪಂಜಾಬ್​, ಟೀಮ್​ ಇಂಡಿಯಾ ಪರ ಒಟ್ಟಿಗೆ ಆಡಿರುವ ಈ ಜೋಡಿ ದೇಶೀಯ ಕ್ರಿಕೆಟ್​ ವಲಯದಲ್ಲಿ ಆತ್ಮೀಯ ಸ್ನೇಹಿತರು ಎಂದೇ ಗುರಿತಿಸಿಕೊಂಡಿದೆ. 40ನೇ ಹುಟ್ಟಹಬ್ಬ ಆಚರಿಸಿಕೊಳ್ಳುತ್ತಿರುವ ಹರ್ಭಜನ್​ಗೆ ವಿಶಿಷ್ಠವಾಗಿ ಗೆಳೆಯ ಯುವರಾಜ್​ ಸಿಂಗ್​ ವಿಶ್​ ಮಾಡಿದ್ದಾರೆ. 40 ಅಥವಾ 47ನೇ ವರ್ಷದ ಹುಟ್ಟುಹಬ್ಬ ಎಂದಿರುವ ಯುವಿ, ಒಟ್ಟಿಗೆ ಆಡಿದ ದಿನಗಳನ್ನು ಮೆಲುಕು ಹಾಕಿದ್ದಾರೆ. ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುತ್ತಾ, ಕೆಲವೊಮ್ಮೆ ಪ್ಯಾಂಟ್​ ಕೂಡ, ನಿಮ್ಮ ಬಗ್ಗೆ ಹೆಮ್ಮೆಯಿದೆ ಪಾಜಿ. ಹ್ಯಾವ್​ ಎ ಗ್ರೇಟ್​ ಡೇ, ಲವ್​ ಯೂ ಪಾಜಿ ಎಂದು ಬಜ್ಜಿಗೆ ಶುಭಕೋರಿದ್ದಾರೆ. ಜತೆಗೆ ವಿಡಿಯೋವೊಂದನ್ನು ಪ್ರಕಟಿಸಿದ್ದಾರೆ.

ದಿಗ್ಗಜ ಸಚಿನ್​ ತೆಂಡುಲ್ಕರ್​, ಶಿಖರ್​ ಧವನ್​, ನಾಯಕ ವಿರಾಟ್​ ಕೊಹ್ಲಿ, ಮೊಹಮದ್​ ಕೈಫ್, ಸುರೇಶ್​ ರೈನಾ, ಸೇರಿದಂತೆ ಹಲವು ಮಂದಿ ಶುಭಕೋರಿದ್ದರೆ, ಅಂತಾರಾಷ್ಟ್ರೀಯ ಕ್ರಿಕೆಟ್​ ಸಮಿತಿ (ಐಸಿಸಿ) ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಶುಭ ಹಾರೈಸಿದೆ. ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅವರ ಸಾಧನೆಯನ್ನು ಕೊಂಡಾಗಿದೆ.

ಹರ್ಭಜನ್​ ಸಿಂಗ್​, ಟೆಸ್ಟ್​ ಕ್ರಿಕೆಟ್​ನಲ್ಲಿ ಹ್ಯಾಟ್ರಿಕ್​ ಕಬಳಿಸಿದ ಭಾರತದ ಮೊದಲ ಸ್ಪಿನ್​ ಬೌಲರ್​ ಎನಿಸಿಕೊಂಡಿದ್ದಾರೆ. 2001ರ ಆಸ್ಟ್ರೆಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಹರ್ಭಜನ್​ 3 ಪಂದ್ಯಗಳಿಂದ 32 ವಿಕೆಟ್​ ಕಬಳಿಸಿದ್ದರು. 2007ರ ಚೊಚ್ಚಲ ಟಿ20 ವಿಶ್ವಕಪ್​, 2011ರ ಏಕದಿನ ವಿಶ್ವಕಪ್​ ವಿಜೇತ ಭಾರತ ತಂಡದ ಸದಸ್ಯರಾಗಿದ್ದರು. ಜತೆಗೆ 4 ಬಾರಿ ಐಪಿಎಲ್​ ವಿಜೇತ ತಂಡದ ಸದಸ್ಯರಾಗಿದ್ದಾರೆ. ಸದ್ಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಸಿಂಗ್​ ತಂಡದ ಸದಸ್ಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net