

ನವದೆಹಲಿ: ಭಾರತದ ಮಾಜಿ ಆಲ್ರೌಂಡರ್, ಟಿ20 ಮತ್ತು ODI ವಿಶ್ವಕಪ್ ವಿಜೇತ ತಂಡಗಳ ಸದಸ್ಯ, ಯುವರಾಜ್ ಸಿಂಗ್ ಇಂದು ತಮ್ಮ 41 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಕ್ರಿಕೆಟ್ ಅಭಿಮಾನಿಗಳು, ಸಹ ಆಟಗಾರರು, ಇತರ ಸೆಲೆಬ್ರಿಟಿಗಳಿಂದ ಶುಭಾಶಯಗಳ ಸುರಿಮಳೆಯೇ ಆಗಿದೆ ಎನ್ನಬಹುದು. ಈ ಸಂದರ್ಭ ಅಭಿಮಾನಿ ಒಬ್ಬರು ಯುವರಾಜ್ ಸಿಂಗ್ರನ್ನು ರಜನಿಕಾಂತ್ ಜೊತೆ ಹೋಲಿಸಿ ಬಿಟ್ಟಿದ್ದಾರೆ!
2019 ರಲ್ಲಿ ಕ್ರಿಕೆಟ್ನಿಂದ ಸಂಪೂರ್ಣವಾಗಿ ನಿವೃತ್ತರಾದ ಯುವರಾಜ್, ಈ ಹಿಂದೆ ಭಾರತಕ್ಕಾಗಿ 304 ODIಗಳು, 40 ಟೆಸ್ಟ್ಗಳು ಮತ್ತು 58 ಟಿ20I ಗಳನ್ನು ಆಡಿದ್ದಾರೆ. 2007 ರ ಚೊಚ್ಚಲ ಟಿ20 ವಿಶ್ವಕಪ್ ಮತ್ತು 2011 ODI ವಿಶ್ವಕಪ್ನಲ್ಲಿ ಭಾರತದ ಪ್ರಶಸ್ತಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
2011ರಲ್ಲಿ ಭಾರತ ಮತ್ತೊಂದು ODI ವಿಶ್ವಕಪ್ ವಿಜಯಕ್ಕಾಗಿ 28 ವರ್ಷಗಳಿಂದ ಕಾಯುತ್ತಿತ್ತು. ಈ ಪಂದ್ಯದಲ್ಲಿ ಅವರು 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಆಗಿದ್ದರು, ಆದರೆ ಯುವರಾಜ್ ಸಿಂಗ್ ಖ್ಯಾತರಾದದ್ದು 2007ರ T20 ವಿಶ್ವಕಪ್ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ರ ಓವರ್ನಲ್ಲಿ ಯುವರಾಜ್ ಹೊಡೆದ ಆರು ಸಿಕ್ಸರ್ಗಳಿಂದ. ಇವರಿಗೆ ಸೆಲೆಬ್ರಿಟಿಗಳು ಹೇಗೆಲ್ಲಾ ಹಾರೈಸಿದ್ದಾರೆ ಎಂಬುದು ಇಲ್ಲಿದೆ: ರಜನಿಕಾಂತ್ ಅಭಿಮಾನಿಯೂ ಆಗಿರುವ ಮೊಹಮ್ಮದ್ ಕೈಫ್ ಟ್ವೀಟ್ ಮಾಡಿದ್ದು ಹೀಗಿದೆ.