ಮುಂಬೈ ಇಂಡಿಯನ್ಸ್‌ಗೆ ಸೀವರ್ ಬ್ರಂಟ್ ಆಸರೆ: ಕನ್ನಡತಿ ನಿಕಿ ಪ್ರಸಾದ್ ಪದಾರ್ಪಣೆ

New Project (1)
Published on

ವಡೋದರ: ಆಲ್ರೌಂಡರ್ ನ್ಯಾಟ್ ಸೀವರ್ ಬ್ರಂಟ್ (80* ರನ್, 59 ಎಸೆತ, 13 ಬೌಂಡರಿ) ಅಮೋಘ ಬ್ಯಾಟಿಂಗ್ ಹೊರತಾಗಿಯೂ ಸ್ಲಾಗ್ ಓವರ್‌ಗಳಲ್ಲಿ ಲಯ ತಪ್ಪಿದ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ‘ಮಹಿಳಾ ಐಪಿಎಲ್’ ಖ್ಯಾತಿಯ ಮೂರನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಹಾಲಿ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಸವಾಲಿನ ಗುರಿ ನೀಡಿದೆ.

ಕೋಟಂಬಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್‌ಗೆ ಇಳಿದ ಮುಂಬೈ ಇಂಡಿಯನ್ಸ್ ಆರಂಭಿಕ ಆಘಾತ ಕಂಡಿತು. ಆಗ ಸೀವರ್ ಬ್ರಂಟ್ ಹಾಗೂ ನಾಯಕಿ ಹರ್ಮಾನ್‌ಪ್ರೀತ್ ಕೌರ್ (42 ರನ್, 22 ಎಸೆತ, 4 ಬೌಂಡರಿ, 3 ಸಿಕ್ಸರ್) ನಡೆಸಿದ ಜತೆಯಾಟದ ನಡುವೆಯೂ ಸ್ಲಾಗ ಓವರ್‌ಗಳಲ್ಲಿ ಲಯ ತಪ್ಪಿತು. ಇದರೊಂದಿಗೆ ಮುಂಬೈ ಇಂಡಿಯನ್ಸ್ 19.1 ಓವರ್‌ಗಳಲ್ಲಿ 164 ರನ್‌ಗಳಿಗೆ ಆಲೌಟ್ ಆಯಿತು. ಆಲ್ರೌಂಡರ್ ಅನ್ನಾಬೆಲ್ ಸುದರ್ ಲ್ಯಾಂಡ್ (34ಕ್ಕೆ 3) ಸಹಿತ ಇತರ ಬೌಲರ್‌ಗಳು ಸ್ಲಾಗ್ ಓವರ್‌ಗಳಲ್ಲಿ ಸಂಘಟಿಸಿದ ಬಿಗಿ ದಾಳಿ ನೆರವಿನಿಂದ ಡೆಲ್ಲಿ 165ರೊಳಗೆ ನಿಯಂತ್ರಿಸುವಲ್ಲಿ ಡೆಲ್ಲಿ ಯಶಸ್ವಿಯಾಯಿತು.

ಮುಂಬೈ ಇಂಡಿಯನ್ಸ್: 19.1 ಓವರ್‌ಗಳಲ್ಲಿ 164 (ಹ್ಯಾಲೆ ಮ್ಯಾಥ್ಯೂಸ್ 0, ಯಸ್ತಿಕಾ ಭಾಟಿಯಾ 11, ನ್ಯಾಟ್ ಸೀವರ್ ಬ್ರಂಟ್ 80*, ಹರ್ಮಾನ್‌ಪ್ರೀತ್ 42, ಅಮೆಲಿಯಾ 9, ಸಜನಾ 1, ಅಮನ್ಜೋತ್ 7, ಸಂಸ್ಕೃತಿ 2, ಶಿಖಾ ಪಾಂಡೆ 14ಕ್ಕೆ 2, ಅನ್ನಾಬೆಲ್ ಸುದರ್‌ಲ್ಯಾಂಡ್ 34ಕ್ಕೆ 3, ಮಿನ್ನು ಮಣಿ 23ಕ್ಕೆ 1).

ನಿಕಿ ಪದಾರ್ಪಣೆ

19 ವಯೋಮಿತಿ ಟಿ20 ವಿಶ್ವಕಪ್ ಹಾಗೂ ಏಷ್ಯಾಕಪ್‌ನಲ್ಲಿ ಭಾರತ ತಂಡವನ್ನು ಪ್ರಶಸ್ತಿಯತ್ತ ಯಶಸ್ವಿಯಾಗಿ ಮುನ್ನಡೆಸಿರುವ ಕನ್ನಡತಿ ನಿಕಿ ಪ್ರಸಾದ್ ಡಬ್ಲುೃಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಪದಾರ್ಪಣೆ ಮಾಡಿದರು. ಸ್ಪಿನ್ ಆಲ್ರೌಂಡರ್ ಆಗಿರುವ 19 ವರ್ಷದ ನಿಕಿ ಪ್ರಸಾದ್, ಹರ್ಮಾನ್‌ಪ್ರೀತ್ ಕ್ಯಾಚ್ ಪಡೆದು ಗಮನಸೆಳೆದರು. ಸ್ಕಾಟ್ಲೆಂಡ್‌ನ ವಿಕೆಟ್ ಕೀಪರ್-ಬ್ಯಾಟುಗಾರ್ತಿ ಸಾರಾ ಬ್ರೈಸ್ ಸಹ ಡೆಲ್ಲಿ ಪರ ಚೊಚ್ಚಲ ಪಂದ್ಯವನ್ನಾಡಿದರು. ಮುಂಬೈ ಪರ ಸಂಸ್ಕೃತಿ ಗುಪ್ತಾ ಪದಾರ್ಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net