

ಮುಂಬೈ: ಯುವ ಬ್ಯಾಟರ್ ಮುಶೀರ್ ಖಾನ್ (136 ರನ್, 326 ಎಸೆತ, 10 ಬೌಂಡರಿ) ಸಮಯೋಚಿತ ಬ್ಯಾಟಿಂಗ್ ಹಾಗೂ ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ಬ್ಯಾಟರ್ ಶ್ರೇಯಸ್ ಅಯ್ಯರ್ (95 ರನ್, 111 ಎಸೆತ, 10 ಬೌಂಡರಿ, 3 ಸಿಕ್ಸರ್) ಶತಕ ವಂಚಿತ ಬ್ಯಾಟಿಂಗ್ ನೆರವಿನಿಂದ 41 ಬಾರಿ ಚಾಂಪಿಯನ್ ಆತಿಥೇಯ ಮುಂಬೈ ತಂಡ ದೇಶೀಯ ಟೂರ್ನಿ ಪ್ರತಿಷ್ಠಿತ ರಣಜಿ ಟ್ರೋಫಿಯ ೈನಲ್‌ನಲ್ಲಿ ವಿದರ್ಭ ಗೆಲುವಿಗೆ ಕಠಿಣ ಗುರಿ ನೀಡಿದೆ. ಇದರೊಂದಿಗೆ ಮುಂಬೈ ತಂಡ 42ನೇ ಬಾರಿ ಪ್ರಶಸ್ತಿ ಜಯಿಸುವ ತವಕದಲ್ಲಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನವಾದ ಮಂಗಳವಾರ 2 ವಿಕೆಟ್‌ಗೆ 141 ರನ್‌ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಮುಂಬೈ, 130.2 ಓವರ್‌ಗಳಲ್ಲಿ 418 ರನ್‌ಗಳಿಗೆ ಆಲೌಟ್ ಆಯಿತು. ಪ್ರಶಸ್ತಿಗಾಗಿ 538 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿರುವ ವಿದರ್ಭ ತಂಡ ದಿನದಂತ್ಯಕ್ಕೆ 2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 10 ರನ್‌ಗಳಿಸಿದ್ದು, ಇನ್ನು 528 ರನ್ ಅಗತ್ಯವಿದೆ. ಆರಂಭಿಕರಾದ ಅಥರ್ವ ತೈಡೆ (3*)ಹಾಗೂ ಧ್ರುವ ಶೋರೆ (7*) 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮುಂಬೈ:224 ಹಾಗೂ 130.2 ಓವರ್‌ಗಳಲ್ಲಿ 418 (ಮುಶೀರ್ ಖಾನ್ 136, ಅಂಜಿಕ್ಯ ರಹಾನೆ 73, ಶ್ರೇಯಸ್ ಅಯ್ಯರ್95, ಶಮ್ಸ ಮುಲಾನಿ 50*, ಯಶ್ ಠಾಕೂರ್ 79ಕ್ಕೆ3, ಹರ್ಷ ದುಬೆ 144ಕ್ಕೆ 5).
ವಿದರ್ಭ: 105 ಹಾಗೂ ವಿಕೆಟ್ ನಷ್ಟವಿಲ್ಲದೇ 10 (ಅಥರ್ವ ತೈಡೆ 3*, ಧ್ರುವ ಶೋರೆ 7*).
ಶತಕ ವಂಚಿತ ಶ್ರೇಯಸ್ ಬೌಂಡರಿಯೊಂದಿಗೆ ಬೆಳಗ್ಗೆ ದಿನದ ಬ್ಯಾಟಿಂಗ್ ಆರಂಭಿಸಿದ ನಾಯಕ ಅಜಿಂಕ್ಯ ರಹಾನೆ (73*) ಹಿಂದಿನ ದಿನದ ಮೊತ್ತಕ್ಕೆ 15 ರನ್ ಮಾತ್ರ ಸೇರಿಸಿದರು. 3ನೇ ವಿಕೆಟ್‌ಗೆ ಮುಶೀರ್ ಖಾನ್ ಹಾಗೂ ಅಜಿಂಕ್ಯ ರಹಾನೆ ಜೋಡಿ 130 ರನ್ ಕಸಿಯಿತು. ರಹಾನೆ ನಿರ್ಗಮನದ ಬಳಿಕ ಮುಶೀರ್ ಜತೆಯಾದ ಶ್ರೇಯಸ್ ಅಯ್ಯರ್ ತಂಡದ ಮುನ್ನಡೆ ಹೆಚ್ಚಿಸಿದರು. ಮೊದಲ ಇನಿಂಗ್ಸ್‌ನಲ್ಲಿ ವೈಲ್ಯ ಕಂಡಿದ್ದ ಶ್ರೇಯಸ್ ಅಯ್ಯರ್ ಲಯಕ್ಕೆ ಮರಳಿದರು. ಇವರಿಬ್ಬರು 4ನೇ ವಿಕೆಟ್‌ಗೆ 168 ರನ್‌ಗಳ ಜತೆಯಾಟ ನೀಡಿದರು. 5 ರನ್‌ಗಳಿಂದ ಅಯ್ಯರ್ ಶತಕ ವಂಚಿತರಾದರು. ೈನಲ್‌ನಲ್ಲಿ ಶತಕ ಸಿಡಿಸುವ ಮೂಲಕ 19 ವರ್ಷದ ಮುಶೀರ್ ಖಾನ್, ಟೀಮ್ ಇಂಡಿಯಾ ದಿಗ್ಗಜ ಆಟಗಾರ ಸಚಿನ್ ತೆಂಡುಲ್ಕರ್ ಅವರ 29 ವರ್ಷದ ಹಿಂದಿನ ದಾಖಲೆಯನ್ನು ಮುರಿದರು. ತೆಂಡುಲ್ಕರ್ ತನ್ನ 21ನೇ ವಯಸ್ಸಿನಲ್ಲಿ ೈನಲ್‌ನಲ್ಲಿ ಶತಕ ಸಿಡಿಸಿದ ಮುಂಬೈನ ಕಿರಿಯ ಬ್ಯಾಟರ್ ಎನಿಸಿದರು. ಮುಶೀರ್ ನಿರ್ಗಮನದ ಬಳಿಕ ಮುಂಬೈನ ಕೆಳಕ್ರಮಾಂಕದ ಬ್ಯಾಟರ್‌ಗಳಿಗೆ ವಿದರ್ಭ ತಂಡ ಕಡಿವಾಣ ಹೇರಿತು. ಶಮ್ಸ್ ಮುಲಾನಿಗೆ (50*) ಇತರ ಬ್ಯಾಟರ್‌ಗಳು ಸಾಥ್ ನೀಡುವಲ್ಲಿ ವಿಲರಾದರು.