ಪ್ಯಾರಿಸ್​ ಒಲಿಂಪಿಕ್ಸ್​ ಕ್ರೀಡಾಸ್ಪರ್ಧೆಗಳ ನೇರಪ್ರಸಾರವನ್ನು ಈ ಆ್ಯಪ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದು...

web jiocinima
Published on

ನವದೆಹಲಿ: ಜುಲೈ 26ರಿಂದ ಆಗಸ್ಟ್​ 11ರವರೆಗೆ ಪ್ಯಾರಿಸ್​ನಲ್ಲಿ ನಡೆಯಲಿರುವ 33ನೇ ಆವೃತ್ತಿಯ ಒಲಿಂಪಿಕ್ಸ್​ ಕ್ರೀಡಾಕೂಟ, ಜಿಯೋಸಿನಿಮಾ ಆ್ಯಪ್​ನಲ್ಲಿ ಉಚಿತವಾಗಿ ನೇರಪ್ರಸಾರ ಕಾಣಲಿದೆ. ಪ್ಯಾರಿಸ್​ ಒಲಿಂಪಿಕ್ಸ್​ಗೆ ವಯಾಕಾಮ್​18 ಅಧಿಕೃತ ಪ್ರಸಾರ ಮತ್ತು ಡಿಜಿಟಲ್​ ಪಾಲುದಾರನಾಗಿದ್ದು, ಭಾರತದ ಎಲ್ಲ ಸ್ಪರ್ಧೆಗಳನ್ನು ನೇರಪ್ರಸಾರ ಮಾಡಲಿದೆ. ಟಿವಿಯಲ್ಲಿ "ಸ್ಪೋರ್ಟ್ಸ್​18' ನೆಟ್​ವರ್ಕ್​ನಲ್ಲಿ ಪ್ಯಾರಿಸ್​ ಒಲಿಂಪಿಕ್ಸ್​ ನೇರಪ್ರಸಾರ ಕಾಣಲಿದೆ.

ಕ್ರೀಡಾಪ್ರೇಮಿಗಳು ಜಿಯೋಸಿನಿಮಾದಲ್ಲಿ ನಮಗೆ ಬೇಕೆನಿಸಿದ ಕ್ರೀಡಾಸ್ಪರ್ಧೆಗಳನ್ನು ಯಾವುದೇ ಸಮಯದಲ್ಲಿ ವೀಸಬಹುದಾಗಿದೆ. ಇಂಗ್ಲಿಷ್​, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ವೀಕ್ಷಕವಿವರಣೆಯೂ ಲಭ್ಯವಿರಲಿದೆ. ಒಲಿಂಪಿಕ್ಸ್​ ಪದಕ ವಿಜೇತರಾದ ಸಾಕ್ಷಿ ಮಲಿಕ್​, ವಿಜೇಂದರ್​ ಸಿಂಗ್​, ಮಾಜಿ ಟೆನಿಸ್​ ತಾರೆ ಸಾನಿಯಾ ಮಿರ್ಜಾ, ಸೋಮ್​ದೇವವರ್ಮನ್​, ಪಿ. ಕಶ್ಯಪ್​, ಅತನು ದಾಸ್​, ಸೌರವ್​ ಘೋಷಾಲ್​, ಹೀನಾ ಸಿಧು ಮುಂತಾದ ಕ್ರೀಡಾತಾರೆಯರು ವೀಕ್ಷಕ ವಿವರಣೆ ಮತ್ತು ವಿಶ್ಲೇಷಣೆಯನ್ನು ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net