

ಚಂಡೀಗಢ: ಭಾರತದ ಕುಸ್ತಿತಾರೆಯರಾದ ಭಜರಂಗ್ ಪೂನಿಯಾ ಮತ್ತು ಸಂಗೀತಾ ಪೋಗಟ್ ಗುರುವಾರ ಹರಿಯಾಣದ ಬಲಾಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತರಾಗಿರುವ 26 ವರ್ಷದ ಭಜರಂಗ್ ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಪದಕ ಗೆಲ್ಲುವ ನಿರೀಕ್ಷೆ ಹೊಂದಿದ್ದಾರೆ. ‘ದಂಗಲ್’ ಸಿನಿಮಾ ಖ್ಯಾತಿಯ ಪೋಗಟ್ ಸಹೋದರಿಯ ಪೈಕಿ ಕಿರಿಯರಾದ 22 ವರ್ಷದ ಸಂಗೀತಾ, ಸೋನೆಪತ್‌ನಲ್ಲಿ ಕುಸ್ತಿ ತರಬೇತಿ ಶಿಬಿರದ ವೇಳೆ ಭಜರಂಗ್ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದರು.
‘ನಾನಿಂದು ನನ್ನ ಜೀವನ ಸಂಗಾತಿಯನ್ನು ಆರಿಸಿಕೊಂಡಿದ್ದೇನೆ. ನಾನು ಇನ್ನೊಂದು ಕುಟುಂಬವನ್ನು ಸಂಪಾದಿಸಿರುವ ಅನುಭವವಾಗುತ್ತಿದೆ. ನಾನು ನನ್ನ ಜೀವನದ ಹೊಸ ಅಧ್ಯಾಯವನ್ನು ಆರಂಭಿಸುತ್ತಿದ್ದೇನೆ. ನಾವಿಬ್ಬರು ಹೊಸ ಪ್ರಯಾಣವನ್ನು ಆರಂಭಿಸಲು ಕಾತರಗೊಂಡಿದ್ದೇವೆ. ಶುಭಹಾರೈಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ಭಜರಂಗ್ ಪೂನಿಯಾ ಇನ್‌ಸ್ಟಾಗ್ರಾಂನಲ್ಲಿ ಗುರುವಾರ ಬರೆದುಕೊಂಡಿದ್ದಾರೆ.