ನಾಳೆಯಿಂದ ಬೆಂಗಳೂರಿನಲ್ಲಿ ಡಬ್ಲ್ಯುಪಿಎಲ್ ಆರಂಭ: ಉದ್ಯಾನ ನಗರಿ ಚರಣದ ವೇಳಾಪಟ್ಟಿ ಹೀಗಿದೆ!

New Project (1)
Published on

ಬೆಂಗಳೂರು: ಮೂರನೇ ಆವೃತ್ತಿಯ ಡಬ್ಲುೃಪಿಎಲ್‌ನ ಎರಡನೇ ಹಂತದ ಪಂದ್ಯಗಳು ಉದ್ಯಾನನಗರಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದು, ಶುಕ್ರವಾರದಿಂದ ಪಂದ್ಯಗಳು ನಡೆಯಲಿವೆ. ಗುರುವಾರ ಟೂರ್ನಿಯ ಮೊದಲ ಬಿಡುವಿನ ದಿನವಾಗಿದ್ದು, ಶುಕ್ರವಾರ ಆತಿಥೇಯ ಆರ್‌ಸಿಬಿ ಹಾಗೂ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಲಿವೆ. ಬೆಂಗಳೂರಿನಲ್ಲಿ ನಿಗದಿಯಾಗಿರುವ ಒಟ್ಟು 8 ಪಂದ್ಯಗಳಲ್ಲಿ ಸ್ಮತಿ ಮಂದನಾ ಪಡೆ 4ರಲ್ಲಿ ಕಣಕ್ಕಿಳಿಯಲಿದೆ. ಆಡಿರುವ 2 ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಆರ್‌ಸಿಬಿ ಸದ್ಯ ಅಂಕಪಟ್ಟಿಯ ಅಗ್ರಸ್ಥಾನದಲ್ಲಿದೆ.

ಹಾಲಿ ಟೂರ್ನಿಯು ಒಟ್ಟು 4 ನಗರಗಳಲ್ಲಿ ನಡೆಯಲಿದ್ದು, ಮೊದಲ ಹಂತ ವಡೋದರದ ನಂತರ 2ನೇ ಹಂತದ ಪಂದ್ಯಗಳಿಗೆ ಬೆಂಗಳೂರು ಆತಿಥ್ಯವಹಿಸಲಿವೆ. ಮೂರನೇ ಚರಣ ಲಖನೌದಲ್ಲಿ ನಡೆದರೆ, ನಾಕೌಟ್ ಪಂದ್ಯಗಳು ಮುಂಬೈನಲ್ಲಿ ನಿಗದಿಯಾಗಿವೆ.

ಬೆಂಗಳೂರು ಚರಣದ ವೇಳಾಪಟ್ಟಿ

ದಿನಾಂಕ ಪಂದ್ಯ

ಫೆ.21 ಆರ್‌ಸಿಬಿ-ಮುಂಬೈ

ಫೆ.22 ಡೆಲ್ಲಿ-ಯುಪಿ

ಫೆ.24 ಆರ್‌ಸಿಬಿ-ಯುಪಿ

ಫೆ.25 ಡೆಲ್ಲಿ-ಗುಜರಾತ್

ಫೆ.26 ಮುಂಬೈ-ಯುಪಿ

ಫೆ.27 ಆರ್‌ಸಿಬಿ-ಗುಜರಾತ್

ಫೆ.28 ಡೆಲ್ಲಿ-ಮುಂಬೈ

ಮಾ.1 ಡೆಲ್ಲಿ-ಆರ್‌ಸಿಬಿ

ಎಲ್ಲ ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net