ಬೆಂಗಳೂರಿನಲ್ಲಿ ಇಂದು ಆರ್‌ಸಿಬಿ-ಮುಂಬೈ: ಇನಿಂಗ್ಸ್ ವಿರಾಮದ ವೇಳೆ ಬಾಲಿವುಡ್ ಮೆರಗು!

New Project
Published on

ಬೆಂಗಳೂರು: ಆರಂಭಿಕ ಎರಡು ಪಂದ್ಯಗಳಲ್ಲಿ ಜಯಭೇರಿ ಕಂಡಿರುವ ಹಾಲಿ ಚಾಂಪಿಯನ್ ಆರ್‌ಸಿಬಿ ಮಹಿಳಾ ತಂಡ ಮೂರನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ನ (ಡಬ್ಲುೃಪಿಎಲ್) ತವರಿನ ಚರಣಕ್ಕೆ ಸಜ್ಜಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಕಣಕ್ಕಿಳಿಯಲಿದ್ದು, ಸ್ಮತಿ ಮಂದನಾ ಪಡೆ ಹ್ಯಾಟ್ರಿಕ್ ಗೆಲುವಿನ ಹಂಬಲದಲ್ಲಿದೆ.

ಪ್ರಮುಖ ಆಟಗಾರರ ಗೈರಿನ ನಡುವೆಯೂ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ತೋರಿರುವ ಆರ್‌ಸಿಬಿ, ಆಡಿರುವ 2 ಪಂದ್ಯಗಳಿಂದ 4 ಅಂಕ ಕಲೆಹಾಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಜತೆಗೆ ಉತ್ತಮ ರನ್‌ರೇಟ್ ಸಹ ಹೊಂದಿದೆ. ತವರಿನಲ್ಲಿ ಆಡಲಿರುವ 4 ಪಂದ್ಯಗಳಲ್ಲಿ ಅಜೇಯ ಓಟ ಕಾಯ್ದುಕೊಂಡರೆ ೈನಲ್ ಸ್ಥಾನ ಮತ್ತಷ್ಟು ಬಲಪಡಿಸಿಕೊಳ್ಳುವ ವಿಶ್ವಾಸ ಆರ್‌ಸಿಬಿ ತಂಡದ್ದಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಎದುರು ಏಕಾಂಗಿಯಾಗಿ ಅಬ್ಬರಿಸಿದ ಸ್ಮತಿ ಭರ್ಜರಿ ಾಮ್‌ನಲ್ಲಿರುವುದು ಆರ್‌ಸಿಬಿ ಪ್ಲಸ್ ಪಾಯಿಂಟ್. ಗಾಯದ ಸಮಸ್ಯೆಯಿಂದ ಆರಂಭಿಕ ಪಂದ್ಯಗಳಲ್ಲಿ ಬೌಲಿಂಗ್ ನಡೆಸದ ಎಲ್ಲಿಸ್ ಪೆರ‌್ರಿ ಬೆಂಗಳೂರಿನಲ್ಲಿ ಸಂಪೂರ್ಣ ಫಿಟ್ ಆಗಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ರಿಚಾ ೋಷ್, ಡ್ಯಾನಿ ವ್ಯಾಟ್ ಹಡ್ಜ್ ಸಹ ಲಯದಲ್ಲಿದ್ದು ಬೆಂಗಳೂರಿನಲ್ಲಿ ರನ್‌ಮಳೆ ನಿರೀಕ್ಷೆ ಇದೆ. ಬೌಲಿಂಗ್‌ನಲ್ಲಿ ರೇಣುಕಾ ಸಿಂಗ್ ಜತೆಗೆ ಜಾರ್ಜಿಹ್ಯಾ ವಾರೆಹ್ಯಾಂ ಬಲ ತುಂಬಲಿದ್ದಾರೆ.

ಉದ್ಘಾಟನಾ ಆವೃತ್ತಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಆಡಿರುವ 2 ಪಂದ್ಯಗಳಲ್ಲಿ ತಲಾ 1 ಸೋಲು-ಗೆಲುವು ಕಂಡಿದೆ. ನ್ಯಾಟ್ ಸೀವರ್ ಬ್ರಂಟ್ ತಂಡದ ಪ್ರಮುಖ ಆಟಗಾರ್ತಿ ಎನಿಸಿದ್ದಾರೆ. ಹ್ಯಾಲೆ ಮ್ಯಾಥ್ಯೂಸ್, ಹರ್ಮಾನ್‌ಪ್ರೀತ್, ಅಮೆಲಿಯಾ ಕೆರ್ ಎದುರು ಆರ್‌ಸಿಬಿಗೆ ನೈಜ ಸವಾಲು ಎದುರಾಗಲಿದೆ.

ಮಿಡ್ ಇನಿಂಗ್ಸ್ ಶೋ

ಬೆಂಗಳೂರು ಚರಣದ ಪಂದ್ಯಗಳ ಇನಿಂಗ್ಸ್ ವಿರಾಮದ ವೇಳೆ ಬಾಲಿವುಡ್ ನಟಿಯರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ನಟಿಯರಾದ ಶೃತಿ ಹಾಸನ್, ವಾಣಿ ಕಪೂರ್ ಜತೆಗೆ ಭೂಮಿ ತ್ರಿವೇದಿ, ಸುಕೀರ್ತಿ-ಪ್ರಕೃತಿ, ಆಸ್ತಾ ಗಿಲ್ ಹಾಗೂ ಜಹರ್ ಖಾನ್ ಪ್ರದರ್ಶನ ನೀಡಲಿದ್ದಾರೆ.

ಬೆಂಗಳೂರು ಚರಣದ ವೇಳಾಪಟ್ಟಿ

ದಿನಾಂಕ ಪಂದ್ಯ

ೆ.21 ಆರ್‌ಸಿಬಿ-ಮುಂಬೈ

ೆ.22 ಡೆಲ್ಲಿ-ಯುಪಿ

ೆ.24 ಆರ್‌ಸಿಬಿ-ಯುಪಿ

ೆ.25 ಡೆಲ್ಲಿ-ಗುಜರಾತ್

ೆ.26 ಮುಂಬೈ-ಯುಪಿ

ೆ.27 ಆರ್‌ಸಿಬಿ-ಗುಜರಾತ್

ೆ.28 ಡೆಲ್ಲಿ-ಮುಂಬೈ

ಮಾ.1 ಡೆಲ್ಲಿ-ಆರ್‌ಸಿಬಿ

ಎಲ್ಲ ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net