

ಬೆಂಗಳೂರು: ಇಲ್ಲಿ ಭಾನುವಾರ ನಡೆದ ಡಬ್ಲ್ಯೂಪಿಎಲ್ 2025 (WPL 2025 Auction) ಹರಾಜು ಪ್ರಕ್ರಿಯೆಯಲ್ಲಿ ಲೆಗ್ ಸ್ಪೀನ್ನರ್ ಸಿಮ್ರಾನ್ ಶೇಖ್ ಮತ್ತು ಡಿಯಾಂಡ್ರಾ ಡಾಟಿನ್ ಅತ್ಯಂತ ದುಬಾರಿ ಮಹಿಳಾ ಆಟಗಾರರಾಗಿ ಹೊರ ಹೊಮ್ಮಿದರು.
ಸಿಮ್ರಾನ್ ಶೇಖ್ ಅವರನ್ನು ಗುಜರಾತ್ ಜೆಂಟ್ಸ್ ಪ್ರಾಂಚೈಸಿ 10 ಲಕ್ಷ ರೂ. ಮೂಲ ಬೆಲೆಯಿಂದ 1.9 ಕೋಟಿ ರೂ.ಗೆ ತಮ್ಮ ತಂಡಕ್ಕೆ ಕರೆದುಕೊಂಡರು. ಅದರಂತೆ, ವೆಸ್ಟ್ ಇಂಡಿಸ್ನ ಡಾಟಿನ್ ಅವರನ್ನು ಕೂಡ 1.7 ಕೋಟಿ ರೂ.ಗೆ ಖರೀದಿಸಿದರು. ಈ ಮೂಲಕ ಇಂದು ನಡೆದ ಡಬ್ಲ್ಯೂಪಿಎಲ್ 2025 ಹರಾಜು ಪ್ರಕ್ರಿಯೆಯಲ್ಲಿ ಜಿಜಿ ತಂಡ(ಗುಜರಾತ್ ಜೆಂಟ್ಸ್) ಅತ್ಯಂತ ದುಬಾರಿ ಆಟಗಾರರನ್ನು ಖರೀದಿಸಿದ ದಾಖಲೆ ಮಾಡಿತು.
ಇನ್ನು ಮುಂಬೈ ತಂಡ, ತಮಿಳುನಾಡಿನ ಲೆಗ್ ಸ್ಪೀನ್ನರ್ 16ರ ಜಿ.ಕಾಮಿಲಿನಿ ಅವರನ್ನು 1.6 ಕೋಟಿ ರೂ. ಕೊಟ್ಟು ಖರೀದಿಸಿದೆ. ಅತ್ಯಂತ ದುಬಾರಿ ಆಟಗಾರರಲ್ಲಿ ಇವರು ಮೂರನೇ ಸ್ಥಾನ ಪಡೆದಿದ್ದಾರೆ. ಈ ಮೂವರನ್ನು ಹೊರತುಪಡಿಸಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರೇಮಾ ರಾವತ್ ಅವರನ್ನು 1.2 ಕೋಟಿ ರೂ.ಗೆ ಖರಿದೀಸಿದ್ದಾರೆ. ಕ್ರಮವಾಗಿ ಇವರು ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ದುಬಾರಿ ಆಟಗಾರರಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಇನ್ನು ಭಾರತದ ದೊಡ್ಡ ಆಟಗಾರರ ಪಟ್ಟಿಯಲ್ಲಿ ಹೆಸರು ಪಡೆದಿರುವ ಸ್ನೇಹ ರಾಣಾ ಮತ್ತು ಪೂನಂ ಯಾದವ್ ಹರಾಜಿನಲ್ಲಿ (ಅನ್ಸೋಲ್ಡ್) ಮಾರಾಟವಾಗಲಿಲ್ಲ.
WPL 2025 ಹರಾಜಿನಲ್ಲಿ ಮಾರಾಟವಾದ ಆಟಗಾರರ ಪಟ್ಟಿ
ಸಿಮ್ರಾನ್ ಶೇಖ್ - 1.90 ಕೋಟಿ - ಗುಜರಾತ್ ಜೈಂಟ್ಸ್
ಡಿಯಾಂಡ್ರಾ ಡಾಟಿನ್ - ರೂ 1.70 ಕೋಟಿ - ಗುಜರಾತ್ ಜೈಂಟ್ಸ್
ಜಿ ಕಮಲಿನಿ - ರೂ 1.60 ಕೋಟಿ - ಮುಂಬೈ ಇಂಡಿಯನ್ಸ್
ಪ್ರೇಮಾ ರಾವತ್ - ರೂ 1.2 ಕೋಟಿ - ರಾಯಲ್ ಚಾಲೆಂಜರ್ಸ್ ಬೆಂಗಳೂರು
ಎನ್ ಚರಣಿ - ರೂ 55 ಲಕ್ಷ - ದೆಹಲಿ ಕ್ಯಾಪಿಟಲ್ಸ್
ನಡಿನ್ ಡಿ ಕ್ಲರ್ಕ್ - ರೂ 30 ಲಕ್ಷ - ಮುಂಬೈ ಇಂಡಿಯನ್ಸ್
ಡೇನಿಯಲ್ ಗಿಬ್ಸನ್ - 30 ಲಕ್ಷ ರೂ. - ಗುಜರಾತ್ ಜೈಂಟ್ಸ್
ಅಲಾನಾ ಕಿಂಗ್ - 30 ಲಕ್ಷ ರೂ. - ಯುಪಿ ವಾರಿರ್ಜ್
ಅಕ್ಷಿತಾ ಮಹೇಶ್ವರಿ - 20 ಲಕ್ಷ ರೂ. - ಮುಂಬೈ ಇಂಡಿಯನ್ಸ್
ನಂದಿನಿ ಕಶ್ಯಪ್ - ರೂ 10 ಲಕ್ಷ - ದೆಹಲಿ ಕ್ಯಾಪಿಟಲ್ಸ್
ಅರುಷಿ ಗೋಸ್ - ರೂ 10 ಲಕ್ಷ - ಯುಪಿ ವಾರಿಯರ್ಜ್
ಕ್ರಾಂತಿ ಗೌಡ - ರೂ 10 ಲಕ್ಷ - ಯುಪಿ ವಾರಿಯರ್ಜ್
ಸಂಸ್ಕೃತಿ ಗುಪ್ತಾ - ರೂ 10 ಲಕ್ಷ - ಮುಂಬೈ ಇಂಡಿಯನ್ಸ್
ಜೋಶಿತಾ ವಿಜೆ - 10 ಲಕ್ಷ ರೂ - ರಾಯಲ್ ಚಾಲೆಂಜರ್ಸ್ ಬೆಂಗಳೂರು
ಸಾರಾ ಬ್ರೈಸ್ - ರೂ 10 ಲಕ್ಷ - ದೆಹಲಿ ಕ್ಯಾಪಿಟಲ್ಸ್
ರಾಘ್ವಿ ಬಿಸ್ಟ್ - ರೂ 10 ಲಕ್ಷ - ರಾಯಲ್ ಚಾಲೆಂಜರ್ಸ್ ಬೆಂಗಳೂರು
ಜಾಗರವಿ ಪವಾರ್ - 10 ಲಕ್ಷ ರೂ - ರಾಯಲ್ ಚಾಲೆಂಜರ್ಸ್ ಬೆಂಗಳೂರು
ನಿಕಿ ಪ್ರಸಾದ್ - ರೂ 10 ಲಕ್ಷ - ದೆಹಲಿ ಕ್ಯಾಪಿಟಲ್ಸ್
ಪ್ರಕಾಶಿಕಾ ನಾಯಕ್ - 10 ಲಕ್ಷ ರೂ. - ಗುಜರಾತ್ ಜೈಂಟ್ಸ್ ,(ಏಜೆನ್ಸೀಸ್).