

ನವದೆಹಲಿ: ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲುೃಪಿಎಲ್) ಪ್ರಶಸ್ತಿ ರೇಸ್‌ನಲ್ಲಿ ಮೂರು ತಂಡಗಳು ಉಳಿದುಕೊಂಡಿದ್ದು, ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ ‘ಸೆಮಿೈನಲ್’ ಮಾದರಿಯ ಎಲಿಮಿನೇಟರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಆರ್‌ಸಿಬಿ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ವಿಜೇತರು ಭಾನುವಾರ ನಡೆಯಲಿರುವ ೈನಲ್ ಪಂದ್ಯದಲ್ಲಿ ಹಾಲಿ ರನ್ನರ್ ಅಪ್ ಹಾಗೂ ಲೀಗ್ ಅಂಕಪಟ್ಟಿಯ ಅಗ್ರಸ್ಥಾನಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದಾರೆ.
ಭಾರತ ಮಹಿಳಾ ತಂಡದ ನಾಯಕಿಯೂ ಆಗಿರುವ ಹಮಾನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ತಂಡ ಪ್ರಶಸ್ತಿ ಉಳಿಸಿಕೊಳ್ಳುವ ಹಂಬಲದಲ್ಲಿದ್ದು, ಉಪನಾಯಕಿ ಸ್ಮತಿ ಮಂದನಾ ಸಾರಥ್ಯದ ಆರ್‌ಸಿಬಿ ತಂಡ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ತವರಿನಲ್ಲಿ ನಡೆದ ಆರಂಭಿಕ ಪಂದ್ಯಗಳಲ್ಲಿ ಬಲಿಷ್ಠ ಪ್ರದರ್ಶನ ನೀಡಿದ ಆರ್‌ಸಿಬಿ, ಲೀಗ್‌ನಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಅನುಭವಿಸಿದೆ.
ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ವಿರುದ್ಧ ಕಂಡ ಗೆಲುವು ಆರ್‌ಸಿಬಿ ತಂಡದ ವಿಶ್ವಾಸವನ್ನು ಹೆಚ್ಚಿಸಿದೆ. ಲೀಗ್‌ನ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಮುಂಬೈ ತಂಡ ಆರ್‌ಸಿಬಿ ವಿರುದ್ಧ ಆಡಿರುವ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು ಪ್ರಾಬಲ್ಯ ಸಾಧಿಸಿದೆ. ಆದರೆ ಅಂತಿಮ ಲೀಗ್ ಪಂದ್ಯದ ಪ್ರದರ್ಶನ ಕೊಂಚ ಹಿನ್ನಡೆ ತಂದಿದೆ. ಹ್ಯಾಲಿ ಮ್ಯಾಥ್ಯೂಸ್, ನ್ಯಾಟ್ ಸೀವರ್ ಬ್ರಂಟ್ ಹಾಗೂ ಅಮೆಲಿಯಾ ಕೆರ್ ಅವರಂಥ ಆಲ್ರೌಂಡರ್‌ಗಳನ್ನು ಹೊಂದಿರುವ ಮುಂಬೈ ೇವರಿಟ್ ಎನಿಸಿದೆ.
ಬೆಂಗಳೂರಿಗೆ ಪೆರ‌್ರಿ ಬಲ: ಹಾಲಿ ಆವೃತ್ತಿಯಲ್ಲಿ ಆಡಿದ ಮೊದಲ 6 ಪಂದ್ಯಗಳಲ್ಲಿ ಒಂದೂ ವಿಕೆಟ್ ಪಡೆಯದ ಆಲ್ರೌಂಡರ್ ಎಲ್ಲಿಸ್ ಪೆರ‌್ರಿ ಮುಂಬೈ ವಿರುದ್ಧ ಹಿಂದಿನ ಪಂದ್ಯದಲ್ಲಿ 6 ವಿಕೆಟ್ ಕಬಳಿಸಿ ಭರ್ಜರಿ ಪ್ರದರ್ಶನ ನೀಡಿದರು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಕೊಡುಗೆ ನೀಡಿರುವ ಪೆರ‌್ರಿ ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ಆರಂಭಿಕ ಪಂದ್ಯಗಳ ಬಳಿಕ ಸ್ಮತಿ ಮಂದನಾ ರನ್‌ಗಳಿಸಲು ಪರದಾಡಿದ್ದಾರೆ. ಸೋಫಿ ಡಿವೈನ್ ರನ್‌ಗಳಿಸದಿರುವುದು ತಂಡಕ್ಕೆ ಪ್ರಮುಖ ಹಿನ್ನಡೆಯಾಗಿದೆ. ಬಲಿಷ್ಠ ಮುಂಬೈ ತಂಡವನ್ನು ಮಣಿಸಲು ಆರ್‌ಸಿಬಿ ತಂಡದ ಸಂಘಟಿತ ನಿರ್ವಹಣೆ ಅನಿವಾರ್ಯ.
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ.