

Virat Kohli:ಚಾಂಪಿಯನ್ಸ್ ಟ್ರೋಫಿ 2025ರ ದುಬೈನಲ್ಲಿ ಭಾನುವಾರ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ವಿಶಿಷ್ಟ ದಾಖಲೆಯನ್ನು ಮುರಿದರು.
ವಿರಾಟ್, ಕೇವಲ 287 ಇನ್ನಿಂಗ್ಸ್ಗಳಲ್ಲಿ 14,000ರನ್ ಗಳಿಸುವ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 14,000 ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡರು. ಈ ಮೂಲಕ 14 ಸಾವಿರ ರನ್ ಗಳಿಸಿದ ಜಗತ್ತಿನ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇನ್ನು ಇದಕ್ಕೂ ಮೊದಲು, ಭಾರತದ ದಂತಕಥೆ ಸಚಿನ್ 350 ಇನ್ನಿಂಗ್ಸ್ಗಳಲ್ಲಿ 14,000 ರನ್ ಗಳಿಸುವ ಮೂಲಕ ಈ ದಾಖಲೆಯನ್ನು ಹೊಂದಿದ್ದರು. ಅಲ್ಲದೆ, ಶ್ರೀಲಂಕಾದ ಕುಮಾರ್ ಸಂಗಕ್ಕಾರ 14,000 ಕ್ಕೂ ಹೆಚ್ಚು ಏಕದಿನ ರನ್ ಗಳಿಸಿದ ಏಕೈಕ ಬ್ಯಾಟರ್ ಆಗಿದ್ದು, ಅವರು 378 ಇನ್ನಿಂಗ್ಸ್ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ಇದೀಗ ಈ ಪಟ್ಟಿಯಲ್ಲಿ ರನ್ ಮಷಿನ್ ವಿರಾಟ್ ಸೇರ್ಪಡೆಗೊಂಡಿದ್ದಾರೆ.(ಏಜೆನ್ಸೀಸ್)