

ಇಸ್ಲಮಾಬಾದ್: ಮುಂದಿನ ಒಂದು ವರ್ಷಗಳ ಕಾಲ ವಿಶ್ವವೇ ಆರಂಭವಾಗುವುದಿಲ್ಲ. ಇನ್ನು ಕ್ರಿಕೆಟ್ ಶುರುವಾಗುವುದಾದರೂ ಹೇಗೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹೇಳಿದ್ದಾರೆ.
ಅನೇಕ ದೇಶಗಳಲ್ಲಿ ಇನ್ನು ಕರೊನಾ ಬಾಧಿಸುತ್ತಲೇ ಇದೆ. ಸಮಪರ್ಕವಾದ ಪರೀಕ್ಷಾ ಕಿಟ್ಗಳು ಸಹ ಹಲವು ದೇಶಗಳಲ್ಲಿ ಇಲ್ಲ. ಹೀಗಾಗಿ ಕರೊನಾದಿಂದ ವಿಶ್ವವೇ ಮುಕ್ತವಾಗಲು ಒಂದು ವರ್ಷ ತೆಗೆದುಕೊಳ್ಳಬಹುದು. ಅಲ್ಲಿಯವರೆಗೆ ಯಾವುದೇ ಕ್ರಿಕೆಟ್ ಯೋಜನೆಯಾಗಲಿ ಅಥವಾ ಸರಣಿಯಾಗಲಿ ಆಯೋಜಿಸಲು ಸಾಧ್ಯವಾಗುವುದಿಲ್ಲ ಎಂದು ತಮ್ಮ ಯೂಟ್ಯೂಬ್ ಚಾನಲ್ ಮೂಲಕ ತಿಳಿಸಿದ್ದಾರೆ.
ಕರೊನಾ ಎಂದಿಗೆ ಕೊನೆಯಾಗಲಿದೆ ಎಂಬುದು ನನಗೆ ಗೊತ್ತಿಲ್ಲ. ಅಲ್ಲಿಯವರೆಗೆ ಎಷ್ಟು ಮಂದಿ ಸೋಂಕಿತರಾಗುತ್ತಾರೆಂಬುದು ಸಹ ತಿಳಿದಿಲ್ಲ. ಅಲ್ಲಿಯವರೆಗೆ ಎಲ್ಲಿಯೂ ಯಾವುದೇ ರೀತಿಯ ಕ್ರಿಕೆಟ್ ಚಟುವಟಿಕೆ ನಡೆಯದು. ಕರೊನಾ ವೈರಸ್ನಿಂದಾಗಿ ಒಂದು ವರ್ಷಗಳ ಕಾಲ ಕ್ರಿಕೆಟ್ ನಡೆಯದು ಎಂದು ನನಗನಿಸುತ್ತದೆ. ಇದು ಒಂದು ವರ್ಷಗಳ ಕಾಲ ನಮ್ಮನ್ನು ಕಾಡಲಿದೆ. ನಾವು ಬಲವಾಗಿಯೇ ಇದರಿಂದ ಹೊರಬರುತ್ತೇವೆ ಎಂಬ ನಂಬಿಕೆಯೂ ಇದೆ ಎಂದಿದ್ದಾರೆ.
ಸದ್ಯದ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಒಂದು ವರ್ಷಗಳ ವೈರಸ್ ಜೀವಂತವಾಗಿರುವುದನ್ನು ನೋಡಲು ನಾನು ಇಚ್ಛಿಸುವುದಿಲ್ಲ. ವಿವಿಧ ಸಮುದಾಯಗಳ ಗುಂಪಾಗಿರುವ ನಾವು ಅದರಿಂದ ನಾವು ಹೊರಬರಬೇಕಾಗಿದೆ ಎಂದರು.(ಏಜೆನ್ಸೀಸ್)