ಬರ್ಮಿಂಗ್ ಹ್ಯಾಮ್ ವಿಶ್ವ ಗೇಮ್ಸ್‌ಗೆ ಭಾರತ ತಂಡ ಪ್ರಕಟ: ಮಹಿಳಾ ತಂಡಕ್ಕೆ ಕನ್ನಡತಿ ವರ್ಷಾ ನಾಯಕಿ

team
Published on

ಬೆಂಗಳೂರು: ಬರ್ಮಿಂಗ್ ಹ್ಯಾಮ್ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಷನ್ (ಐಬಿಎಸ್‌ಎ) ವಿಶ್ವ ಗೇಮ್ಸ್-2023ರ ಕ್ರೀಡಾಕೂಟಕ್ಕೆ ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (ಸಿಎಬಿಐ) 17 ಆಟಗಾರರ ಪುರುಷ ಹಾಗೂ ಮಹಿಳಾ ತಂಡವನ್ನು ಪ್ರಕಟಿಸಿದೆ. ಪುರುಷರ ತಂಡವನ್ನು ಅಜಯ್ ಕುಮಾರ್ ರೆಡ್ಡಿ ಇಲ್ಲೂರಿ ಮುನ್ನಡೆಸಲಿದ್ದು ರಾಜ್ಯದ ಬಸಪ್ಪ ವಡ್ಡಗೋಳ, ಪ್ರಕಾಶ ಜಯರಾಮಯ್ಯ, ಸುನಿಲ್ ರಮೇಶ್ ಸ್ಥಾನ ಪಡೆದಿದ್ದಾರೆ. ಮಹಿಳಾ ತಂಡದ ನಾಯಕಿ ವರ್ಷಾ ಸೇರಿ ರಾಜ್ಯದ ಗಂಗವ್ವ ನೀಲಪ್ಪ ಹರಿಜನ, ದೀಪಿಕಾ ಟಿ.ಸಿ. ತಂಡದಲ್ಲಿದ್ದಾರೆ. ಆಗಸ್ಟ್20 ರಂದು ಪುರುಷರ ತಂಡ ಪಾಕಿಸ್ತಾನವನ್ನು ಎದುರಿಸಲಿದ್ದು, ಮಹಿಳಾ ತಂಡ ಆಸ್ಟ್ರೇಲಿಯಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಸಭಾಂಗಣದಲ್ಲಿ ನಡೆದ ನೂತನ ಜೆರ್ಸಿ ಅನಾವರಣ ಸಮಾರಂಭದಲ್ಲಿ ಸಿಎಬಿಐ ಅಧ್ಯಕ್ಷ ಬುಸೇ ಗೌಡ ಮಾತನಾಡಿ, ವಿಶ್ವ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಅಂಧರ ಕ್ರಿಕೆಟ್ ಸೇರ್ಪಡೆಗೆ ಐಬಿಎಸ್‌ಎಗೆ ಕೃತಜ್ಞರಾಗಿದ್ದೇವೆ. ದೇಶವನ್ನು ಪ್ರತಿನಿಧಿಸಲು ಮತ್ತು ವಿಶ್ವ ಚಾಂಪಿಯನ್ ಆಗಿ ಮುಂದುವರಿಯಲು ಆಟಗಾರರಿಗೆ ಇದು ಅತ್ಯುತ್ತಮ ಅವಕಾಶ ಎಂದರು.

ಸಿಎಬಿಐ ಅಧ್ಯಕ್ಷ ಡಾ.ಮಹಾಂತೇಶ ಜಿ.ಕಿವಡಸಣ್ಣವರ್ ಮಾತನಾಡಿ, ವಿಶ್ವ ಕ್ರೀಡಾಕೂಟದಲ್ಲಿ ಪುರುಷರ ಮತ್ತು ಮಹಿಳಾ ತಂಡಗಳು ಭಾಗವಹಿಸುತ್ತಿರುವುದು ಇದೇ ಮೊದಲು. ಕಳೆದ 10 ವರ್ಷಗಳಲ್ಲಿ ಪುರುಷರ ಅಂಧರ ತಂಡ 3 ಟಿ20 ವಿಶ್ವಕಪ್, 2 ಏಕದಿನ ವಿಶ್ವಕಪ್ ಮತ್ತು ಒಂದು ಏಷ್ಯಾ ಕಪ್ ಗೆದ್ದಿದೆ. ದೇಶದ ಧ್ವಜವನ್ನು ಎತ್ತರಕ್ಕೆ ಹಾರಿಸುವ ಸರದಿ ಈಗ ಪುರುಷರ ತಂಡದೊಂದಿಗೆ ಮಹಿಳಾ ತಂಡದದ್ದಾಗಿದೆ ಎಂದರು.

ಪುರುಷ ತಂಡ: ಅಜಯ್ ಕುಮಾರ್ ರೆಡ್ಡಿ ಇಲ್ಲೂರಿ (ನಾಯಕ), ವೆಂಕಟೇಶ್ವರ ರಾವ್ ದುನ್ನಾ (ಉಪನಾಯಕ), ಬಸಪ್ಪ ವಡ್ಡಗೋಳ, ಪ್ರಕಾಶ ಜಯರಾಮಯ್ಯ,ಸುನಿಲ್ ರಮೇಶ್ , ಮೊಹಮದ್ ಜಾಫರ್ ಇಕ್ಬಾಲ್, ಮಹಾರಾಜ ಶಿವ ಸುಬ್ರಮಣಿಯನ್, ಓಂಪ್ರಕಾಶ್ ಪಾಲ್, ನರೇಶ್ ಭಾಯ್ ಬಾಲುಭಾಯ್ ತುಮ್ಡಾ, ನಿಲೇಶ್ ಯಾದವ್, ಪಂಕಜ್ ಭುಯೆ,ರಾಮ್ಬೀರ್ ಸಿಂಗ್, ನಕುಲಾ ಬಡನಾಯಕ್, ಇರ್ಫಾನ್ ದಿವಾನ್, ದೀಪಕ್ ಮಲಿಕ್, ದುರ್ಗಾ ರಾವ್ ಟೊಂಪಾಕಿ, ದಿನೇಶ್ ಭಾಯ್ ಚಮಯ್ದಭಾಯಿ ರಾತ್ವಾ.

ಮಹಿಳಾ ತಂಡ: ವರ್ಷಾ (ನಾಯಕಿ), ಫುಲಾ ಸಾರೆನ್ (ಉಪನಾಯಕಿ), ವಲಸನೈನಿ ರಾವಣಿ, ಸಿಮು ದಾಸ್, ಪದ್ಮಿನಿ ಟುಡು, ಕಿಲ್ಲಾಕಾ ಸಂಧ್ಯಾ,ಪ್ರಿಯಾ, ಗಂಗವ್ವ ನೀಲಪ್ಪ ಹರಿಜನ, ಸಾಂಡ್ರಾ ಡೇವಿಸ್ ಕರಿಮಲಿಕ್ಕಲ್, ಬಸಂತಿ ಹನ್ಸ್ದಾ, ಪ್ರೀತಿ ಪ್ರಸಾದ್, ಸುಷ್ಮಾ ಪಟೇಲ್, ಎಂ.ಸತ್ಯವತಿ, ಝಿಲಿ ಬಿರುವಾ. ಗಂಗಾ ಸಂಭಾಜಿ ಕದಮ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net