ಟೀಮ್ ಇಂಡಿಯಾಗೆ ಇನ್ನೂ 2 ವರ್ಷ ರೋಹಿತ್​ ಶರ್ಮ ಕ್ಯಾಪ್ಟನ್​?

rohit web
Published on

ಅಹಮದಾಬಾದ್​: ಏಕದಿನ ವಿಶ್ವಕಪ್​ ಟ್ರೋಫಿ ಎತ್ತಿ ಹಿಡಿಯುವಲ್ಲಿ ವಿಫಲರಾಗಿದ್ದರೂ, ರೋಹಿತ್​ಶರ್ಮ ಅವರೇ ಇನ್ನೂ 2 ವರ್ಷಗಳ ಕಾಲ ಟೀಮ್​ ಇಂಡಿಯಾದ ನಾಯಕರಾಗಿ ಮುಂದುವರಿಯುವ ಸಾಧ್ಯತೆ ಕಾಣಿಸಿದೆ. 

ಫೈನಲ್​ ಸೋಲು ಕನಸುಭಗ್ನಗೊಳಿಸಿದ್ದರೂ, ಭಾರತ ತಂಡಕ್ಕೆ ಇನ್ನೂ 2 ವರ್ಷ ರೋಹಿತ್​ ನಾಯಕತ್ವ ಅಗತ್ಯವೆನಿಸಿದೆ. ಯಾಕೆಂದರೆ ತಂಡದ ಯುವ ಆಟಗಾರರು ಇನ್ನೂ ನಾಯಕತ್ವಕ್ಕೆ ಸ್ವೀಕರಿಸಲು ಪಕ್ವ ಆದಂತಿಲ್ಲ.

ಫಿಟ್ನೆಸ್​ ಸಮಸ್ಯೆ ನಡುವೆ ಹಾರ್ದಿಕ್​ ಪಾಂಡ್ಯ ಟಿ20 ಸಾರಥ್ಯ ವಹಿಸಿಕೊಂಡರೂ, ಏಕದಿನ ಮತ್ತು ಟೆಸ್ಟ್​ ತಂಡಕ್ಕೆ ನಾಯಕರಾಗಿ ರೋಹಿತ್​ ಅವರೇ 2025ರ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಮತ್ತು ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್ ಫೈನಲ್​ವರೆಗೆ ಮುಂದುವರಿಯುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net