ಮೊದಲ ಸುತ್ತಿನಲ್ಲಿ ಆಘಾತ ಎದುರಿಸಿದ ಪ್ರಣಯ್, ಲಕ್ಷ್ಯ ಸೇನ್

New Project (28)
Published on

ಚಾಂಗ್‌ಝೌ (ಚೀನಾ): ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ಎಚ್‌ಎಸ್ ಪ್ರಣಯ್, ಯುವ ಷಟ್ಲರ್‌ಗಳಾದ ಲಕ್ಷ್ಯ ಸೇನ್ ಪ್ರಿಯಾಂಶು ರಾಜಾವತ್, ಚೀನಾ ಓಪನ್ ಸೂಪರ್-1000 ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸೋಲು ಕಂಡು ಹೊರಬಿದ್ದಿದ್ದಾರೆ. ಇದರೊಂದಿಗೆ ಸಿಂಗಲ್ಸ್ ವಿಭಾಗದಲ್ಲಿ ಭಾರತೀಯರ ಸವಾಲು ಅಂತ್ಯಗೊಂಡಿದೆ.

ಮಂಗಳವಾರ ಆರಂಭಗೊಂಡ ಟೂರ್ನಿಯಲ್ಲಿ ವಿಶ್ವ ನಂ.6 ಪ್ರಣಯ್ ಮೊದಲ ಸುತ್ತಿನಲ್ಲಿ 12-21, 21-13, 18-21ರಿಂದ ಮಲೇಷ್ಯಾದ ಎನ್‌ಜಿ ತ್ಸೆ ಯೋಂಗ್ ಎದುರು ಪರಾಭವಗೊಂಡರು. ಲಕ್ಷ್ಯ ಸೇನ್ 21-23, 21-16, 9-21 ರಿಂದ ಡೆನ್ಮಾರ್ಕ್‌ನ ಅಂಡರ್ಸ್ ಅಂಟೊಸೆನ್ ವಿರುದ್ಧ 1 ಗಂಟೆ 18 ನಿಮಿಷಗಳ ಹೋರಾಟದಲ್ಲಿ ಸೋಲು ಅನುಭವಿಸಿದರು. ಇನ್ನೊಂದು ಪಂದ್ಯದಲ್ಲಿ ಪ್ರಿಯಾಂಶು 13-21, 24-26ರಿಂದ ಇಂಡೋನೇಷ್ಯಾದ ಶೇಸರ್ ಹಿರೇನ್ ರುಸ್ತಾವಿಟೊ ಎದುರು ಪರಾಜಯ ಕಂಡರು. ಮಹಿಳಾ ಡಬಲ್ಸ್‌ನಲ್ಲಿ ತ್ರಿಸಾ ಜೋಲಿ-ಗಾಯತ್ರಿ ಗೋಪಿಚಂದ್ ಜೋಡಿ ಅಗ್ರ ಶ್ರೇಯಾಂಕಿತ ಚೆನ್ ಕಿಂಗ್ ಚೆನ್-ಜಿಯಾ ಯಿ ಪನ್‌ಗೆ ಮಣಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net