

ನವದೆಹಲಿ: ಚೊಚ್ಚಲ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರ್ತಿಯರು, ರಾಷ್ಟ್ರಪತಿ, ಪ್ರಧಾನಿಯಿಂದ ಅಭಿನಂದನೆಗಳನ್ನು ಸ್ವೀಕರಿಸಿದ ಬಳಿಕ ಶುಕ್ರವಾರ ತವರು ನಗರ, ಮನೆಗಳಿಗೆ ತೆರಳಿದಾಗ ಅದ್ದೂರಿ ಸ್ವಾಗತವನ್ನು ಪಡೆದರು.
ಜೆಮೀಮಾ ರೋಡ್ರಿಗಸ್, ರಾಧಾ ಯಾದವ್ ಮತ್ತು ಉಪನಾಯಕಿ ಸ್ಮೃತಿ ಮಂದನಾಗೆ ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಡ್ನಾವಿಸ್ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ತಲಾ 2.25 ಕೋಟಿ ರೂ. ನೀಡಿ ಸನ್ಮಾನಿಸಿದರು.
ಶ್ರೀ ಚರಣಿಗೆ ಹೈದರಾಬಾದ್ನಲ್ಲಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು 2.5 ಕೋಟಿ ರೂ, ಒಂದು ಸಾವಿರ ಚದರ ಅಡಿ ನಿವೇಶನ ಮತ್ತು ಸರ್ಕಾರಿ ಉದ್ಯೋಗದ ಆರ್ ನೀಡಿದರು. ರಿಚಾ ಘೋಷ್ಗೆ ಬಂಗಾಳದ ಸಿಲಿಗುರಿಯಲ್ಲಿ ತೆರೆದ ಜೀಪಿನ ಮೆರವಣಿಗೆಯ ಸ್ವಾಗತ ನೀಡಲಾಯಿತು. ಹರ್ಲೀನ್ ಡಿಯೋಲ್ಗೆ ಪಂಜಾಬ್ನ ಚಂಡೀಗಢದಲ್ಲಿ ಅಭಿಮಾನಿಗಳಿಂದ ಪ್ರೀತಿ ಸ್ವಾಗತ ದೊರೆಯಿತು.