ಇಂದಿನಿಂದ ಮಹಿಳೆಯರ ತ್ರಿಕೋನ ಏಕದಿನ ಸರಣಿ; ಭಾರತ-ಶ್ರೀಲಂಕಾ ನಡುವೆ ಮೊದಲ ಪಂದ್ಯ

web womns tri
Published on

ಕೊಲಂಬೊ: ಭಾರತ, ಆತಿಥೇಯ ಶ್ರೀಲಂಕಾ ಮತ್ತು ದಣ ಆಫ್ರಿಕಾವನ್ನು ಒಳಗೊಂಡ ಮಹಿಳೆಯರ ತ್ರಿಕೋನ ಏಕದಿನ ಸರಣಿಗೆ ಶನಿವಾರ ಚಾಲನೆ ಸಿಗಲಿದೆ. ಹಾಲಿ ವರ್ಷದ ಮಹಿಳೆಯರ ವಿಶ್ವಕಪ್​ ಪೂರ್ವಸಿದ್ಧತೆಗೆ ವೇದಿಕೆಯಾಗಿರುವ ಟೂರ್ನಿಯಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.

ಹರ್ಮಾನ್​ಪ್ರೀತ್​ ಕೌರ್​ ಸಾರಥ್ಯದ ಭಾರತ ತಂಡ ಇತ್ತೀಚೆಗೆ ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ ಮಿಂಚಿದ ವೇಗಿ ಕಾಶ್ವಿ ಗೌತಮ್​, ಶ್ರೀ ಚರಣಿ, ಪ್ರತಿಕಾ ರಾವಲ್​ರಂಥ ಹೊಸಮುಖಗಳಿಂದ ಕೂಡಿದೆ. ಉಳಿದಂತೆ ಅನುಭವಿ ಆಟಗಾರ್ತಿಯರಾದ ಸ್ಮೃತಿ ಮಂದನಾ, ಹರ್ಲೀನ್​ ಡಿಯೋಲ್​, ಯಸ್ತಿಕಾ ಭಾಟಿಯಾ, ರಿಚಾ ಘೋಷ್​, ಸ್ನೇಹಾ ರಾಣಾ, ಜೆಮೀಮಾ ರೋಡ್ರಿಗಸ್​, ದೀಪ್ತಿ ಶರ್ಮ ಬಲ ತುಂಬಲಿದ್ದಾರೆ. ಆತಿಥೇಯ ಶ್ರೀಲಂಕಾ ತಂಡದಲ್ಲಿ ಕೆಲ ಪ್ರಮುಖ ಬದಲಾವಣೆಗಳಾಗಿವೆ.

ಮೊದಲ ಪಂದ್ಯ: ಭಾರತ-ಶ್ರೀಲಂಕಾ, ಆರಂಭ: ಬೆಳಗ್ಗೆ 10.00, ನೇರಪ್ರಸಾರ: ಫ್ಯಾನ್​ಕೋಡ್​ ಆ್ಯಪ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net