

ಮಹಿಳಾ ಕ್ರಿಕೆಟ್ನಲ್ಲಿ ಬಹಳ ವರ್ಷಗಳಿಂದ ಶಕ್ತಿಕೇಂದ್ರವಾಗಿ ಗುರುತಿಸಿಕೊಂಡಿರುವ ಆಸ್ಟ್ರೇಲಿಯಾ, ಆಸೀಸ್ ಪ್ರಾಬಲ್ಯವನ್ನು ಮುರಿಯುವ ತಂಡವಾಗಿ ಗೋಚರಿಸಿದ ಇಂಗ್ಲೆಂಡ್ ಮತ್ತೊಮ್ಮೆ ವಿಶ್ವ ಚಾಂಪಿಯನ್ಷಿಪ್ ಕಣದಲ್ಲಿ ಹೋರಾಟ ನಡೆಸಲಿವೆ. 7ನೇ ಆವೃತ್ತಿಯ ಮಹಿಳೆಯರ ಟಿ20 ವಿಶ್ವಕಪ್ಗೆ ಶುಕ್ರವಾರ ಆಸ್ಟ್ರೇಲಿಯಾದಲ್ಲಿ ಚಾಲನೆ ಸಿಗಲಿದ್ದು, 5ನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಆಸ್ಟ್ರೇಲಿಯಾ ಫೇವರಿಟ್ ಆಗಿ ಕಣಕ್ಕಿಳಿಯಲಿದೆ.
ಫೆ. 21ರಂದು ಸಿಡ್ನಿಯ ಶೋಗ್ರೌಂಡ್ ಸ್ಟೇಡಿಯಂನಲ್ಲಿ ಆತಿಥೇಯ ಆಸ್ಟ್ರೇಲಿಯಾ, ಭಾರತ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ 8 ರಂದು ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಟೂರ್ನಿಯ ಫೈನಲ್ ನಡೆಯಲಿದೆ. 10 ತಂಡಗಳನ್ನು ತಲಾ ಐದು ತಂಡಗಳ ಎರಡು ಗುಂಪುಗಳನ್ನಾಗಿ ಮಾಡಲಾಗಿದೆ, ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ನಾಕೌಟ್ ಹಂತಕ್ಕೇರಲಿದೆ.
ಭಾರತದ ವೇಳಾಪಟ್ಟಿ
ಫೆ. 21: ಆಸ್ಟ್ರೇಲಿಯಾ ಮ.1.30
ಫೆ. 24: ಬಾಂಗ್ಲಾದೇಶ ಸಂ 4.30
ಫೆ. 27: ನ್ಯೂಜಿಲೆಂಡ್ ಬೆ. 9.30
ಮಾ. 1: ಶ್ರೀಲಂಕಾ ಮ.1.30
ನೇರಪ್ರಸಾರ: ಸ್ಟಾರ್ಸ್ಪೋರ್ಟ್ಸ್
ನೆಟ್ವರ್ಕ್, ಡಿಡಿ ಸ್ಪೋರ್ಟ್ಸ್.